ಉಡುಪಿ: ರೈಲು ಹಳಿಯ ಕಂಬಗಳ ನಡುವೆ ಅಪರಿಚಿತ ಮಹಿಳೆಯೊಬ್ಬರು ರೈಲಿನಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಸಂಜೆ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ದೇಹವು ತೀವ್ರವಾಗಿ ನಜ್ಜುಗುಜ್ಜಾಗಿದ್ದು, ರೈಲ್ವೆ ಹಳಿಯಲ್ಲಿದ್ದ ದೊಡ್ಡ ಕಂಬದ ಮೇಲೆ ಬಿದ್ದಿದ್ದಾರೆ.
6 ತಿಂಗಳಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸುವ ಬೆಳ್ಳುಳ್ಳಿ ಬಗ್ಗೆ ಇಲ್ಲಿದೆ ಮಾಹಿತಿ.!
ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ನಾಗರಾಜ್ ನೇತೃತ್ವದಲ್ಲಿ ಮೃತದೇಹ ಹೊರತೆಗೆಯಲಾಯಿತು. ಕಾರ್ಯಾಚರಣೆ ವೇಳೆ ಕಾಪು ಪೊಲೀಸರು ಹಾಗೂ ರೈಲ್ವೆ ಪೊಲೀಸರು ಉಪಸ್ಥಿತರಿದ್ದರು. ಬಳಿಕ ಮೃತರನ್ನು ಉಡುಪಿ ಅಜ್ಜರಕಾಡು ಶವಾಗಾರಕ್ಕೆ ಸಾಗಿಸಲಾಯಿತು.