ಬೆಂಗಳೂರು: ಕಾಂಗ್ರೆಸ್ ಸರ್ಕಾರ ನಿಷ್ಠಾವಂತ ಅಧಿಕಾರಿಗಳಿಗೆ ಕಿರುಕುಳ ಹಾಗೂ ವರ್ಗಾವಣೆ ಭಾಗ್ಯ ನೀಡಿ, ಕಳ್ಳಕಾಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕದ ಭಾಗ್ಯ ನೀಡುತ್ತಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಎಕ್ಸ್ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್, ಸುರಪುರ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಂದಾರ್ ಹೆಸರನ್ನು 2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಶಿಫಾರಸ್ಸು ಮಾಡಿರುವ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಾವೀದ್ ವಿರುದ್ಧ ತೀವ್ರ ಆರೋಪಗಳಿವೆ. ಆದರೂ ಅವರನ್ನು ಚಿನ್ನದ ಪದಕಕ್ಕೆ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
Virat Kohli Dating: ಅನುಷ್ಕಾ ಜೊತೆಗಿನ ಮದುವೆಗೂ ಮುನ್ನ 5 ಮಂದಿಯೊಂದಿಗೆ ಡೇಟಿಂಗ್ ಮಾಡಿದ್ದ ಕೊಹ್ಲಿ!
ಪೊಲೀಸ್ ಇಲಾಖೆ ಜಪ್ತಿ ಮಾಡಿದ್ದ 4.9 ಕೆಜಿ ಚಿನ್ನವನ್ನು ಕಳವು ಮಾಡಿರುವ ಆರೋಪಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಕೊಡಲು ಸರ್ಕಾರ ಮುಂದಾಗಿದೆ. ಅಲ್ಲದೇ ಈತನ ವಿರುದ್ಧ ಈಗಾಗಲೇ ಪಡಿತರ ಅಕ್ಕಿ ಕಳ್ಳತನ ಸೇರಿದಂತೆ ಅನೇಕ ಆರೋಪಗಳಿವೆ. ಅಂಥವರಿಗೆ ಚಿನ್ನದ ಪದಕ ನೀಡಿ, ನಿಷ್ಠಾವಂತರಿಗೆ ಕಿರುಕುಳ ಹಾಗೂ ವರ್ಗಾವಣೆ ಭಾಗ್ಯ ನೀಡುತ್ತಿದೆ ಎಂದು ಟೀಕಿಸಿದೆ.