ಬೆಂಗಳೂರು: ಎತ್ತಿನಹೊಳೆ ಯೋಜನೆಗೆ ಇರುವ ಸಮಸ್ಯೆ ನಿವಾರಿಸಲು ಜಲಸಂಪನ್ಮೂಲ, ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಜಲಸಂಪನ್ಮೂಲ ಇಲಾಖೆಯ ಸಭೆ ಬಳಿಕ ಮಾತನಾಡಿದ ಅವರು, ಎತ್ತಿನಹೊಳೆಯಲ್ಲಿ ಏನೆಲ್ಲ ಸಮಸ್ಯೆ ಇದೆ. ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತ್ಯೇಕವಾದ ಸರ್ವೇ ಮಾಡುತ್ತೇವೆ. ಕಂದಾಯ ಹಾಗೂ ಫಾರೆಸ್ಟ್ ಡಿಪಾರ್ಟ್ಮೆಂಟ್ನಿಂದ ಪ್ರತ್ಯೇಕ ಸರ್ವೇ ಮಾಡುತ್ತೇವೆ. ಜಂಟಿ ಸರ್ವೇ ಸಹಾ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
Bananas For Diabetics: ಸಕ್ಕರೆ ಕಾಯಿಲೆ ಇರುವವರು ಬಾಳೆಹಣ್ಣು ತಿನ್ನಬಹುದಾ? ಇಲ್ಲಿದೆ ನೋಡಿ ಉತ್ತರ
ಎತ್ತಿನಹೊಳೆ ಪ್ರಾಜೆಕ್ಟ್ʼನಲ್ಲಿ 50 ಕೋಟಿ ಹಣ ರೈತರಿಗೆ ಕೊಡಬೇಕಾಗಿತ್ತು. ಈಗಾಗಲೇ 10 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಆದರೆ ಕೆಲವು ಜಾಗ ಅರಣ್ಯ ಇಲಾಖೆ ನಮ್ದೇ ಅಂತಾ ಹೇಳ್ತಿದ್ದಾರೆ. ಹೀಗಾಗಿ ಇದನ್ನು ಕ್ಯಾಬಿನೆಟ್ನಲ್ಲಿ ಇಟ್ಟು ಚರ್ಚೆ ಮಾಡುತ್ತಾರೆ. ನೀರನ್ನು ಹೊರಗಡೆ ತೆಗೆದು ತೋರಿಸಬೇಕು ಎಂದು ಹೇಳಿದ್ದೇನೆ. ಮೊದಲ ಹಂತದಲ್ಲಿ 45 ಕಿಮೀ ವರೆಗೂ ನೀರು ಹರಿಸಬೇಕು ಎಂದಿದ್ದಾರೆ.