ಬೆಂಗಳೂರು:- ಕೊಲೆ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುತ್ತಿರುವ ದರ್ಶನ್ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ಸಿಕ್ಕಿದೆ.
ಕೊಲೆ ಕೇಸ್ನಲ್ಲಿ ದರ್ಶನ್ ಏನೇ ಹೇಳಿಕೆ ನೀಡದಿದರೂ ಅವರ ವಿರುದ್ಧ ಸಾಕ್ಷ್ಯಗಳು ಬಲವಾಗಿ ಸಿಕ್ಕಿವೆ. ಸದ್ಯ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಹಾಗೂ ದರ್ಶನ್ ಎ2 ಆರೋಪಿ ಆಗಿದ್ದಾರೆ. ಒಟ್ಟೂ 17 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
01. ಕೊಲೆಯಾದ ಸ್ಥಳದ ಟವರ್ ಡಂಪ್ ನಲ್ಲಿ ದರ್ಶನ್ ಪವಿತ್ರಾಗೌಡ, ನಾಗರಾಜ್, ವಿನಯ್, ಸೇರಿ ಆರು ಮಂದಿ ಟವರ್ ಡಂಪ್
02. ಕೊಲೆಯ ನಂತರ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳ ಜೊತೆ ಕೃತ್ಯದ ಬಗ್ಗೆ ಚರ್ಚಿಸಿರೋ ಕಾಲ್ ಡಿಟೇಲ್ಸ್
03. ಕೃತ್ಯದ ನಂತರ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್
4. ಪೊಲೀಸರ ಅಸಲಿ ವಿಚಾರಣೆ ವೇಳೆ ದೀಪಕ್ ಮೃತ ದೇಹ ಬಿಸಾಡಲು ತಲಾ ಐದು ಲಕ್ಷ ನೀಡಿದ್ದಾಗಿ ಹೇಳಿಕೆ
5. ದೀಪಕ್ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗ
6. ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್ ಪವಿತ್ರಾಗೌಡ ಬಗ್ಗೆ ಹೇಳಿಕೆ
7. ರೇಣುಕಾಸ್ವಾಮಿ ತನಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ ಅದನ್ನ ದರ್ಶನ್ ಗೆ ತಿಳಿಸಿದ್ದಾಗಿ ಪವಿತ್ರ ಹೇಳಿಕೆ
8. ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಂದ ಕಿಡ್ನಾಪ್ ಮಾಡಿಸಿರೋದು
9. ಪವನ್ ಹಾಗೂ ಪವಿತ್ರಗೌಡ ದರ್ಶನ್ ಹೇಳಿದಂತೆ ರೇಣುಕಾಸ್ವಾಮಿ ಕರೆತಂದಿರೋದಾಗಿ ರಾಘವೇಂದ್ರ ಹೇಳಿಕೆ
10.ಆರ್.ಆರ್.ನಗರದ ಶೆಡ್ ನಲ್ಲಿ ಮೃತ ರೇಣುಕಾಸ್ವಾಮಿಯ ರಕ್ತದ ಕಲೆ, ಕೂದಲು ಹಾಗೂ ಬೆವರಿನ ಸ್ಯಾಂಪಲ್ಸ್
11. ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಪಡೆದಿರೋ ಪೊಲೀಸರು
12. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ರೇಣುಕಾಸ್ವಾಮಿ ಬ್ಲಡ್ ಸ್ಯಾಂಪಲ್ ಫಿಂಗರ್ ಪ್ರಿಂಟ್ ಫುಟ್ ಫ್ರಿಂಟ್ ಹಾಗೂ ಆರೋಪಿಗಳ ಫಿಂಗರ್ ಪ್ರಿಂಟ್ ಫುಟ್ ಪ್ರಿಂಟ್ ಬ್ಲಡ್ ಸ್ಯಾಂಪಲ್ ಮ್ಯಾಚ್ ಮಾಡೋ ಸಾಧ್ಯತೆ
13. ಕೊಲೆಯಾದ ನಂತರ ದೀಪಕ್ ವಿನಯ್ ಪವನ್ ಪದೇ ಪದೇ ದರ್ಶನ್ ಗೆ ವಾಟ್ಸಪ್ ಹಾಗೂ ನಾರ್ಮಲ್ ಕರೆ
14. ಕೊಲೆ ನಡೆದ ದಿನ ದರ್ಶನ್ ಪವಿತ್ರಾಗೌಡ ಹಾಗೂ ಆರೋಪಿಗಳು ಮೊಬೈಲ್ ಸಿಡಿಆರ್ ಟವರ್ ಡಂಪ್ ಒಂದೇ ಲೊಕೇಷನ್ ನಲ್ಲಿ ಪತ್ತೆ