ಬೆಂಗಳೂರು:- ಸುರಂಗ ಕೊರೆಯುವ ಯಂತ್ರಗಳಿಗೆ ಬಂಡೆಗಳು ಅಡ್ಡಿ ಹಿನ್ನೆಲೆ ಮೆಟ್ರೋ ಪಿಂಕ್ ಲೈನ್ ಸುರಂಗ ಕಾಮಗಾರಿ ವಿಳಂಬವಾಗಿದೆ.
ಸೈಬರ್ ಕ್ರೈಮ್, ಆನ್ ಲೈನ್ ಫ್ರಾಡ್ ಗಳಿಗೆ ಬಲಿಯಾಗಬೇಡಿ – ಎಸ್ಪಿ ಬಿ ಎಸ್ ನೇಮಗೌಡ್ರು ಕರೆ..!
ಇದು ಬೆಂಗಳೂರಿನ ಅತಿ ದೊಡ್ಡ ಮೆಟ್ರೋ ಸುರಂಗ ಕಾಮಗಾರಿಯಾಗಿದೆ. ಈ ಕಾಮಗಾರಿಗೆ ಈಗಾಗಲೇ ಒಂಬತ್ತು ಟಿಬಿಎಂ ಮಷಿನ್ಗಳ ಮೂಲಕ ಸುರಂಗ ಕಾಮಗಾರಿ ಮಾಡಲಾಗ್ತಿದೆ. ಏಳು ಟಿಬಿಎಂ ಮಷಿನ್ಗಳು ಯಶ್ವಸಿಯಾಗಿ ಸುರಂಗ ಕೊರೆದು ಹೊರಗೆ ಬಂದಿದ್ದು, ಎರಡು ಟಿಬಿಎಂ ಮಷಿನ್ಗಳಿಗೆ ಇದೀಗ ಬಂಡೆಕಲ್ಲಿನ ಸವಾಲು ಎದುರಾಗಿದೆ ಇದರಿಂದ ಮೆಟ್ರೋ ಕಾಮಗಾರಿ ವಿಳಂಬವಾಗಲಿದೆ.
ತುಂಗಾ ಮತ್ತು ಭದ್ರಾ ಟಿಬಿಎಂ ಮಷಿನ್ಗಳು ಆಗಸ್ಟ್ ಒಳಗೆ ಸುರಂಗ ಕೊರೆದು ಹೊರ ಬರಬೇಕಿತ್ತು. ಆದರೆ ಬಂಡೆ ಕಲ್ಲುಗಳು ಸಿಕ್ಕಿರುವ ಕಾರಣ ಈ ವರ್ಷದ ಕೊನೆಯವರೆಗೂ ಕಾಮಗಾರಿ ನಡೆಯಲಿದೆಯಂತೆ. ಮುಂದೆಯೂ ಬಂಡೆ ಕಲ್ಲುಗಳು ಎದುರಾದರೆ ಮತ್ತಷ್ಟು ವಿಳಂಬ ವಾಗಲಿದೆ. ತುಂಗಾ ಟಿಬಿಎಂ ಶೇ 45 ರಷ್ಟು ಸುರಂಗ ಕೊರೆದಿದ್ದು, ಭದ್ರಾ ಶೇ 22 ರಷ್ಟು ಸುರಂಗ ಕೊರೆದಿದೆ. ಈ ಎರಡು ಟಿಬಿಎಂಗಳು ಪ್ರತಿದಿನ ಐದು ಕಿಮೀ ನಷ್ಟು ಸುರಂಗ ಕೊರೆಯುವ ಸಾಮರ್ಥ್ಯ ಹೊಂದಿದ್ದು ಬಂಡೆಗಲ್ಲು ಸಿಕ್ಕಿರುವ ಕಾರಣ 3 ಕಿಮೀ ನಷ್ಟು ಮಾತ್ರ ಕೊರೆಯಲು ಸಾಧ್ಯವಾಗಲಿದೆ.
ಈ ಮಾರ್ಗದಲ್ಲಿ ಒಟ್ಟು 18 ಸ್ಟೇಷನ್ ಬರಲಿದ್ದು ಅದರಲ್ಲಿ ಆರು ಎಲಿವೇಟೆಡ್ 12 ಅಂಡರ್ ಗ್ರೌಂಡ್ ಸ್ಟೇಷನ್ಗಳು ಇರಲಿದೆ. ಈ ಬಗ್ಗೆ ಮಾತಾನಾಡಿದ ಮೆಟ್ರೋ ಅಧಿಕಾರಿಗಳು, ಸುರಂಗ ಕೊರೆಯುವ ಕಾರ್ಯ ಎರಡ್ಮೂರು ತಿಂಗಳು ಸುರಂಗ ತಡವಾಗಬಹುದು ಎಂದಿದ್ದಾರೆ