ಏಲಿಯನ್ಗಳು ಎಂದು ಕರೆಯಿಸಿಕೊಳ್ಳುವ ಈ ಅನ್ಯಗ್ರಹ ಜೀವಿಗಳು ಇರುವುದು ಹೌದೋ ಅಲ್ಲವೋ ಎಂಬ ಕುತೂಹಲವನ್ನು ಪ್ರತೀ ಬಾರಿ ಮೂಡಿಸುತ್ತದೆ.
ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡ ಪೋಕರಿಗಳಿಗೆ ಚಳಿ ಬಿಡಿಸಿದ ಖಾಕಿ…!
ಮಾನವರ ನಡುವೆಯೇ ಅತ್ಯಂತ ರಹಸ್ಯವಾಗಿ ಈ ಏಲಿಯನ್ಗಳು ವಾಸಿಸುತ್ತಿವೆ ಎಂಬ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಮ್ನ ಸಂಶೋಧಕರ ಹೊಸ ಪ್ರಬಂಧ ಉಲ್ಲೇಖಿಸಿರುವಂತೆ, ಅಪರಿಚಿತ ಅಸಂಗತ ವಿದ್ಯಮಾನಗಳು ಅಂದರೆ ಇದನ್ನು ಸಾಮಾನ್ಯವಾಗಿ ಭೂಮ್ಯಾತೀತ ಜೀವಿಗಳು, ಅನ್ಯಗ್ರಹ ಜೀವಿಗಳು ನಮ್ಮ ನಡುವೆ ಬದುಕುತ್ತಿವೆ ಎಂದು ತಿಳಿಸಿದೆತಿಳಿಸಿದ
ಒಂದೋ ಭೂಗತವಾಗಿ ವಾಸಿಸುತ್ತಿರಬಹುದು ಇಲ್ಲವೇ ಚಂದ್ರನ ಮೇಲೆ ವಾಸಿಸುತ್ತಿರಬಹುದು, ಇಲ್ಲವೇ ನಮ್ಮೊಂದಿಗೆ ಕೂಡ ವಾಸಿಸುತ್ತಿರಬಹುದು. ಆದರೆ ಇದು ನಮ್ಮ ಗಮನಕ್ಕೆ ಬರುವುದಿಲ್ಲ ಅಷ್ಟೇ. ಏಕೆಂದರೆ ಅವು ಅಷ್ಟೊಂದು ನಿಗೂಢವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿವೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
UFOಗಳು ಅಥವಾ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳು (UAP) ಭೂಮಿಯಲ್ಲಿ ಅದೃಶ್ಯವಾಗಿ ವಾಸಿಸುತ್ತಿರುವ ಅನ್ಯಲೋಕದ ಜೀವಿಗಳನ್ನು ಭೇಟಿ ಮಾಡಲು ಭೂಮಿಗೆ ಆಗೊಮ್ಮೆ ಈಗೊಮ್ಮೆ ಭೇಟಿ ನೀಡುತ್ತಿರಬಹುದು ಎಂಬ ಕಲ್ಪನೆಯನ್ನು ಸಂಶೋಧನೆಯು ಪರಿಶೋಧಿಸಿದೆ. ಲೇಖನದಲ್ಲಿ ಲೇಖಕರು ಭೂಮ್ಯತೀತ ವಿವರಣೆಯನ್ನು ತಾತ್ಕಾಲಿಕವಾಗಿ ಬೆಂಬಲಿಸುವ ಪುರಾವೆ ಮತ್ತು ಸಿದ್ಧಾಂತದ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿದ್ದು, ಇದನ್ನು ಕ್ರಿಪ್ಟೋಟೆರೆಸ್ಟ್ರಿಯಲ್ ಕಲ್ಪನೆ ಎಂದು ತಿಳಿಸಿದ್ದಾರೆ. ಅಂದರೆ ಅನ್ಯ ಗ್ರಹ ಜೀವಿಗಳ ಚಟುವಟಿಕೆಗಳನ್ನು ಭೂಮಿಯ ಮೇಲೆ ಹಾಗೂ ಅವುಗಳು ಇರುವ ಪರಿಸರದಲ್ಲಿ ಗುರುತಿಸುತ್ತದೆ ಎಂದು ಹೇಳಿದೆ
ಈ ಅಧ್ಯಯನವು “ಕ್ರಿಪ್ಟೋಟೆರೆಸ್ಟ್ರಿಯಲ್” ಎಂದು ತಿಳಿಸಿರುವ ಅಂಶದ ಬಗ್ಗೆ ಇನ್ನಷ್ಟು ಮಾಹಿತಿ ಪ್ರಕಟಿಸಿದ್ದು, ಈ ಜೀವಿಗಳು ನಮ್ಮ ನಡುವೆ ಮಾನವರಂತೆಯೇ ವಾಸಿಸುವ ಭೂಮಿಯ ಭವಿಷ್ಯದಿಂದ ಹುಟ್ಟಿಕೊಂಡ ಅಥವಾ ಬುದ್ಧಿವಂತ ಡೈನೋಸಾರ್ಗಳ ವಂಶಸ್ಥರೂ ಆಗಿರಬಹುದು ಎಂದು ತಿಳಿಸಿದೆ. ಕ್ರಿಪ್ಟೋಟೆರೆಸ್ಟ್ರಿಯಲ್ಗಳು ನಾಲ್ಕು ರೂಪಗಳಲ್ಲಿ ಬರಬಹುದು ಎಂದು ಅಧ್ಯಯನವು ತಿಳಿಸಿದೆ