ಬೆಂಗಳೂರು: ಕೊಲೆ ಆರೋಪಿಗಳನ್ನು ತಮ್ಮದೇ ಸ್ಟೈಲಲ್ಲಿ ವಿಚಾರಣೆ ನಡೆಸಿ ಬೆಂಡೆತ್ತುವ ಪೊಲೀಸರಿದ್ದಾರೆ. ಆದರೆ ತನಿಖೆ ಚೆನ್ನಾಗಿ ನಡೆಸುತ್ತಿದ್ದ ಪೊಲೀಸರಿಗೆ ಅದೇನ್ ಆಯ್ತೋ ಗೊತ್ತಿಲ್ಲ. ಇವತ್ತು ಕೊಲೆ ಆರೋಪ ಹೊತ್ತಿರುವ ಡಿ ಗ್ಯಾಂಗ್ ಗೆ ರಾಜತಿಥ್ಯ ನೀಡಿದ್ದಾರೆ.ಕೊಲೆ ಆರೋಪಿಗಳು ಮಾಧ್ಯಮಗಳ ಕ್ಯಾಮಾರಗೆ ಸಿಗಬಾರದು ಅಂತಾ ಸ ಪೊಲೀಸ್ ಠಾಣೆಯನ್ನ ಕಂಪ್ಲೀಟ್ ಸೈಡ್ ವಾಲ್ ಹಾಕಿ ಬೇರೆಯದ್ದೆ ಸಂದೇಶ ನೀಡಿದ್ದಾರೆ. ಯೆಸ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿ 14 ಜನರ ಬಂಧನವಾಗಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.
ಠಾಣೆಯ ಮುಂದೆ ದರ್ಶನ್ ಅಭಿಮಾನಿಗಳು ಜಮಾಯಿಸಬಾರದು, ಲಾ ಆಂಡ್ ಆರ್ಡರ್ ಸಮಸ್ಯೆಯಾಗಬಾರದೆಂದು ಠಾಣೆಯ ೨೦೦ ಮೀಟರ್ ಸುತ್ತಮುತ್ತ ಇಂದಿನಿಂದ ಅಂದ್ರೆ ೧೩ ರಿಂದ ೧೭ ನೇ ತಾರೀಖಿನವರೆಗೆ , ಐದು ದಿನ ೧೪೪ ಸೆಕ್ಷನ್ ಜಾರಿಮಾಡಲಾಗಿದೆ. ಇನ್ನೂ ಕೊಲೆ ಆರೋಪಿಗಳ ವಿಚಾರಣೆ ನಡೆಸುವ ಪೊಲೀಸ್ ಠಾಣೆ ಬಳಿ ಇತಿಹಾಸದಲ್ಲಿ ಮೊದಲ ಬಾರಿಗೆ 144 ಸೆಕ್ಷೆನ್ ಜಾರಿ ಮಾಡಲಾಗಿದೆ.
ನಿಮಗೆ ಗೊತ್ತೇ..? ಹುಣಸೆ ಹಣ್ಣಿನ ಹುಳಿಗಿದೆ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಪವರ್.!
ಇನ್ನೂ ಮಾಧ್ಯಮಗಳ ಕ್ಯಾಮರಾ ಕಣ್ಣಿಂದ ಆರೋಪಿಗಳನ್ನು ಮರೆಮಾಚಲು ಠಾಣೆಯ ಮುಂಭಾಗ ಸೈಡ್ ವಾಲ್ ಗಳನ್ನ ಕಟ್ಟಿಲಾಗಿದೆ. ದೂರು ನೀಡಲು ಬಂದ ಸಾರ್ವಜನಿಕರಿಗೂ ಠಾಣೆಯ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಸಮಸ್ಯೆ ಅಂತ ದೂರು ಕೊಡಲು ಬಂದವ್ರಿಗೂ ಸಮಸ್ಯೆಯಾಗ್ತಿದೆ. ಪೊಲೀಸರ ಈ ವರ್ತನೆಗೆ ವ್ಯಾಪಾರ ಆಕ್ರೋಶಗಳು ವ್ಯಕ್ತವಾಗ್ತಿವೆ.
ಆರೋಪಿಗಳಿಗೆ ಮೊದಲ ದಿನ ಪೊಲೀಸರು ಚಿಕ್ಕಪೇಟೆ ದೊಣ್ಣೆ ಬಿರಿಯಾನಿ ನೀಡಿ ರಾಜಾತಿಥ್ಯ ನೀಡಿದ್ದರು. ಈ ಹಿನ್ನೆಲೆ ಕೊಲೆ ಮಾಡುವವರಿಗೆ ಈ ರೀತಿ ವ್ಯವಸ್ಥೆ ಮಾಡಿರುವ ಬಗ್ಗೆ ಸಾರ್ವಜನಿಮ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಸ್ಥಳ ಮಹಜರುಗೆ ಅರೋಪಿಗಳನ್ನ ಕರೆದುಕೊಂಡು ಹೋಗುವಾಗ, ಬರುವಾಗ ಮಾಧ್ಯಮಗಳಲ್ಲಿ ಆರೋಪಿಗಳು ಕ್ಯಾಮಾರದಲ್ಲಿ ಸೆರೆಯಾಗುವುದನ್ನು ತಡೆಯುವ ಪ್ರಯತ್ನ ಪೊಲೀಸರಿಂದ ನಡೆದಿದೆ.
ಕೊಲೆ ಆರೋಪಿಗಳಿಗೆ ಇಷ್ಟೊಂದು ರಾಜ ಮಾರ್ಯದೆ ಯಾಕೆ ಅಂತ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇಂದು ಠಾಣೆಯ ಸುತ್ತಮುತ್ತ ದರ್ಶನ್ ಅಭಿಮಾನಿಗಳು ಸೇರದಿದ್ರೂ, ಬ್ಯಾರಿಕೇಡ್ ಗಳನ್ನ ಹಾಕಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಅದೇನೆ ಆಗ್ಲಿ, ಈ ಬಗ್ಗೆ ಗೃಹ ಸಚಿವ್ರು ಗಮನ ಹರಿಸಬೇಕು. ದೂರು ಕೊಡಲು ಬಂದ ಸಾರ್ವಜನಿಕರಿಗೆ ಆಗ್ತಿರೋ ಸಮಸ್ಯೆ, ಮಾಧ್ಯಮಗಳನ್ನ ನಿಯಂತ್ರಿಸೋ ಈ ನಿರ್ಧಾರದಿಂದ ಹಿಂದೆ ಸರಿಯಬೇಕಿದೆ.