ನವದೆಹಲಿ: ನೀವು ಮನೆ ಖರೀದಿಸಲು ಬಯಸಿದರೆ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ (Pradhan Mantri Awas Yojana) ಲಾಭವನ್ನು ಪಡೆಯಲು ಬಯಸಿದರೆ ಅದು ತುಂಬಾ ಸುಲಭ. ಇದಕ್ಕಾಗಿ ನೀವು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಸರ್ಕಾರಿ ಯೋಜನೆಯಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಆಧಾರ್ ಸಂಖ್ಯೆಯೂ ಅತ್ಯಗತ್ಯ. ಅಲ್ಲದೆ ಅರ್ಜಿದಾರನು ಸಂಪೂರ್ಣ ಮಾಹಿತಿಯನ್ನು ನಿಖರವಾಗಿ ನೀಡಬೇಕಾಗುತ್ತದೆ.
ಎಲ್ಲ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ.
PMAY ಯೋಜನೆಯಡಿ ಪ್ರಯೋಜನಗಳೇನು?
• PMAY ಯೋಜನೆಯಡಿ, ಎಲ್ಲಾ ಫಲಾನುಭವಿಗಳಿಗೆ ಕೇವಲ ವಾರ್ಷಿಕ ಶೇ. 6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ನೀಡಲಾಗುತ್ತದೆ.
• ನೆಲ ಮಹಡಿಯಲ್ಲಿರುವ ಮನೆಗಳು ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ
• ಗೃಹ ನಿರ್ಮಾಣದಲ್ಲಿ ಸುಸ್ಥಿರ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಲಾಗುತ್ತದೆ
• ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯಿಸುತ್ತದೆ. ಮೂರು ಹಂತಗಳಲ್ಲಿ ನಗರ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ
ಫಲಾನುಭವಿಗಳು ಯಾರು?
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳನ್ನು ವಾರ್ಷಿಕ ಆದಾಯದ ಆದಾರದಲ್ಲಿ ಈ ರೀತಿ ವರ್ಗೀಕರಿಸಬಹುದು
• ಮಧ್ಯಮ ಆದಾಯ ಗುಂಪು 1 (MIG1): 6 ಲಕ್ಷದಿಂದ 12 ಲಕ್ಷ ರೂ
• ಮಧ್ಯಮ ಆದಾಯ ಗುಂಪು 2 (MIG2): 12 ಲಕ್ಷದಿಂದ 18 ಲಕ್ಷ ರೂ
• ಕಡಿಮೆ ಆದಾಯದ ಗುಂಪು (ಎಲ್ಐಜಿ) : 3 ಲಕ್ಷದಿಂದ 6 ಲಕ್ಷ ರೂ
• ಆರ್ಥಿಕವಾಗಿ ಹಿಂದುಳಿದ ವರ್ಗ (EWS): 3 ಲಕ್ಷದವರೆಗೆ
ಯೋಜನೆಯಲ್ಲಿ ಎರಡು ವಿಧ
ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಾಗಿ ವಿಂಗಡಿಸಲಾಗಿದೆ.
• ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ
• ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ.
ಫಲಾನುಭವಿಗಳಿಗೆ ಅರ್ಹತೆ:
- ಅಭ್ಯರ್ಥಿಯು ಈ ಕೆಳಗಿನ ಯಾವುದೇ ಅರ್ಹತೆಗಳನ್ನು ಹೊಂದಿರಬೇಕು.
- ಒಂದು ಅಥವಾ ಎರಡು ಕೊಠಡಿಗಳು, ಕಚ್ಚಾ ಗೋಡೆಗಳು, ಕಚ್ಚಾ ಛಾವಣಿಯಿರುವ ಕುಟುಂಬಗಳು ಅರ್ಜಿ ಸಲ್ಲಿಸಬಹುದು.
- 25 ವರ್ಷ ಮೇಲ್ಪಟ್ಟ ಕುಟುಂಬದ ಅನಕ್ಷರಸ್ಥರು ಅರ್ಜಿ ಸಲ್ಲಿಸಬಹುದು.
- 16 ಮತ್ತು 59 ವರ್ಷ ವಯಸ್ಸಿನ ವಯಸ್ಕ ಪುರುಷ ಸದಸ್ಯರಿಲ್ಲದ ಕುಟುಂಬ.
- ಯಾವುದೇ ಸಾಮರ್ಥ್ಯವಿರುವ ಸದಸ್ಯರಿಲ್ಲದ ಕುಟುಂಬಗಳು ಮತ್ತು ಅಂಗವಿಕಲ ಸದಸ್ಯರನ್ನು ಹೊಂದಿರುವವರು.
- ಭೂರಹಿತ ಕುಟುಂಬಗಳು ಸಾಂದರ್ಭಿಕ ಕೆಲಸದ ಮೂಲಕ ಆದಾಯ ಗಳಿಸುತ್ತವೆ.
- ಪರಿಶಿಷ್ಟ ಜಾತಿ, ಪಂಗಡ, ಇತರೆ, ಅಲ್ಪಸಂಖ್ಯಾತರು.
- ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಸಹ ಹೊಂದಿರಬೇಕು:
- ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು.
- ಅರ್ಜಿದಾರರು ಶಾಶ್ವತ ಮನೆ ಹೊಂದಿರಬಾರದು.
- ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಅರ್ಜಿದಾರರ ವಾರ್ಷಿಕ ಆದಾಯ ರೂ.03 ಲಕ್ಷದಿಂದ ರೂ.06 ಲಕ್ಷದ ನಡುವೆ ಇರಬೇಕು.
- ಅರ್ಜಿದಾರರ ಹೆಸರು ಪಡಿತರ ಚೀಟಿ ಅಥವಾ ಪಿಬಿಎಲ್ ಪಟ್ಟಿಯಲ್ಲಿರಬೇಕು.
- ಅರ್ಜಿದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ ಯಾವುದೇ ಮಾನ್ಯ ಗುರುತಿನ ಚೀಟಿಯನ್ನು ಹೊಂದಿರಬೇಕು.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಗತ್ಯ ದಾಖಲೆಗಳು:
- ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.
- ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ
- ನಿಮ್ಮ ಫೋಟೋ
- ಫಲಾನುಭವಿಯ ಜಾಬ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಸಂಖ್ಯೆ
- ಬ್ಯಾಂಕ್ ಪಾಸ್ಬುಕ್
- ಸ್ವಚ್ಛ ಭಾರತ್ ಮಿಷನ್ (SBM) ನೋಂದಣಿ ಸಂಖ್ಯೆ
- ಮೊಬೈಲ್ ನಂಬರ್
PMAYಗೆ ಅರ್ಜಿ ಸಲ್ಲಿಸುವುದು ಹೇಗೆ?
ವಸತಿ ನಗರಾಭಿವೃದ್ಧಿ ಸಚಿವಾಲಯವು ಈ ಯೋಜನೆಯಡಿ ಮನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಎರಡೂ ಪುಟಗಳಲ್ಲಿ ನಿಮ್ಮ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ.
• ಪುಟ 1: ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮುಂದಿನ ಪುಟಕ್ಕೆ ಹೋಗಿ.
• ಪುಟ 2: ಅರ್ಜಿದಾರರು ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಅವರು ಯಾವ ರಾಜ್ಯಕ್ಕೆ ಸೇರಿದವರು ಎಂಬುದನ್ನು ನಮೂದಿಸಬೇಕು. ಕುಟುಂಬದ ಮುಖ್ಯಸ್ಥ, ಅವರ ಪ್ರಸ್ತುತ ವಸತಿ ವಿಳಾಸ ಮತ್ತು ಇತರ ಪ್ರಮುಖ ವಿವರಗಳನ್ನು ಒದಗಿಸಬೇಕು.
• ಇದಕ್ಕಾಗಿ ಮೊದಲು ಪ್ರಧಾನಮಂತ್ರಿ ಆವಾಸ್ ಯೋಜನೆ pmaymis.gov.in ಗೆ ಹೋಗಿ.
• ಸಿಟಿಜನ್ ಅಸೆಸ್ಮೆಂಟ್ ಡ್ರಾಪ್ಡೌನ್ ಅಡಿಯಲ್ಲಿ ಬೆನಿಫಿಟ್ ಅಂಡರ್ 3 ಕಾಂಪೊನೆಂಟ್ಗಳ ಅಡಿಯಲ್ಲಿ ಕ್ಲಿಕ್ ಮಾಡಿ.
• ಆಧಾರ್ ಸಂಖ್ಯೆಯನ್ನು ಕ್ಲಿಕ್ ಮಾಡಿ ಮತ್ತು ಸಲ್ಲಿಸಿ.
• ಸಂಖ್ಯೆ ಸರಿಯಾಗಿದ್ದರೆ ಅದು ಇನ್ನೊಂದು ಪುಟಕ್ಕೆ ಹೋಗುತ್ತದೆ. ಅಲ್ಲಿ ನಿಮ್ಮ ವಿವರಗಳನ್ನು ನಮೂದಿಸಬೇಕು.
• ನಿಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿದ್ದರೆ, ನಿಮ್ಮ ಆಧಾರ್ ಸಂಖ್ಯೆ ಮತ್ತು ಅಪ್ಲಿಕೇಶನ್ ಸಂಖ್ಯೆಯ ಸಹಾಯದಿಂದ ತಿದ್ದುಪಡಿ ಮಾಡಲು ಸಾಧ್ಯವಿದೆ.