ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಕುರಿತು ಒಂದೊಂದೆ ಮಾಹಿತಿಗಳು ಹೊರ ಬೀಳುತ್ತಿದ್ದು ಇನ್ನೂ ಸಾಕಷ್ಟು ಸತ್ಯಗಳು ತೆರೆದುಕೊಳ್ಳಲಿವೆ. ಈ ಮಧ್ಯೆ ನಟಿ ಪವಿತ್ರಾ ಗೌಡ ಯಾರು? ದರ್ಶನ್ ಗೂ ಆಕೆಗಿರೋ ವಯಸ್ಸಿನ ಅಂತರವೆಷ್ಟು? ಎಂಬೆಲ್ಲಾ ಹುಡುಕಾಟ ಶುರುವಾಗಿದೆ.
ಪವಿತ್ರಾ ಗೌಡ ಹಾಗೂ ನಟ ದರ್ಶನ್ ಅವರ ವಯಸ್ಸಿನ ಅಂತರದ ಬಗ್ಗೆ ಸಾಕಷ್ಟು ಹುಡುಕಾಟ ನಡೆದಿದೆ. ದರ್ಶನ್ ಮತ್ತು ಪವಿತ್ರಾಗೆ ಬರೋಬ್ಬರಿ 14 ವರ್ಷಗಳ ವಯಸ್ಸಿನ ಅಂತರವಿದೆ. ದರ್ಶನ್ ಗೆ ಈಗ 47 ವರ್ಷ ಮತ್ತು ಪವಿತ್ರಾಗೆ ಈಗ 33 ವರ್ಷ. ಇವರ ಸಂಬಂಧಕ್ಕೆ 10 ವರ್ಷ. ಅಂದರೆ ಪವಿತ್ರಾ 23 ವರ್ಷದವಳಿದ್ದಾಗ ದರ್ಶನ್ ಗೆ 37 ವರ್ಷವಾಗಿತ್ತು. ಆಗ ಅವರಿಬ್ಬರ ಸಂಬಂಧ ಆರಂಭವಾಗಿತ್ತು. ಅಂದ ಹಾಗೆ ಪವಿತ್ರಾ ಗೌಡರನ್ನು ದರ್ಶನ್ ಎರಡನೇ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಪವಿತ್ರಾರನ್ನು ಮದುವೆಯಾಗಿದ್ದಾರೆ ಎಂಬುದು ರೇಣುಕಾಸ್ವಾಮಿ ಕೊಲೆಯ ಬಳಿಕ ಗೊತ್ತಾಗಿದೆ. ಅಲ್ಲಿವರೆಗೆ ಗೆಳೆತನಕ್ಕೂ ಮೀರಿದ ಸಂಬಂಧ ಇದೆ ಎಂದಷ್ಟೇ ಗೊತ್ತಿತ್ತು. ತನ್ನ 18 ವರ್ಷದಲ್ಲಿ ಮೊದಲ ಮದುವೆಯಾಗಿದ್ದ ಪವಿತ್ರಾ ಗೌಡಗೆ ಒಂದು ಹೆಣ್ಣು ಮಗುವಿದೆ. ಆಕೆಯ ಮೊದಲ ಗಂಡ ಸಂಜಯ್ ಸಿಂಗ್. ಅದು ಕೂಡ ಸಂಜಯ್ ಸಿಂಗ್ನನ್ನು ಪ್ರೀತಿಸಿ ಮದುವೆಯಾಗಿದ್ದಳಂತೆ. ಬಳಿಕ ಸಂಸಾರ ಸರಿ ಹೋಗದೆ ಬೇರೆ ಬೇರೆಯಾಗಿದ್ದರು. ಈ ವಿಚಾರ ಹೊರಗಡೆ ಬಂದಿದ್ದು ಕಳೆದ ಜನವರಿಯಲ್ಲಿ, ಅಂದು ಪವಿತ್ರ ದರ್ಶನ್ ಜೊತೆಗಿನ ಸಂಬಂಧದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕವೇ.
ಜನವರಿ 24 , 2024ರಲ್ಲಿ ವಿಡಿಯೋ ಫೋಟೋ ಶೇರ್ ಮಾಡಿಕೊಂಡಿದ್ದ ಪವಿತ್ರ ಗೌಡ ನಮ್ಮಿಬ್ಬರ ಸಂಬಂಧಕ್ಕೆ ಹತ್ತು ವರ್ಷ ಎಂದು ಹಾಕಿಕೊಂಡಿದ್ದಳು. ಇದಕ್ಕೆ ಕೋಪಗೊಂಡ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಒಂದನ್ನು ಹಾಕಿದಾಗಲೇ ಸತ್ಯಾಂಶ ಹೊರಬಂದಿತ್ತು. ಪವಿತ್ರಾ ಗೌಡ ಮೊದಲ ಪತಿಯ ಜೊತೆಗಿರುವ ಫೋಟೋವನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದರು.
ಸಂಜಯ್ ಸಿಂಗ್ ಆಕೆಯ ಗಂಡ ಅವರಿಬ್ಬರಿಗೆ ಓರ್ವ ಮಗಳಿದ್ದಾಳೆ. ಓರ್ವ ಪುರುಷ ವಿವಾಹಿತನೆಂದು ತಿಳಿದುಕೊಂಡು ಅವಳು ಇನ್ನೂ ತಮ್ಮ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸುತ್ತಿದ್ದಾಳೆ. ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ತೆಗೆದುಕೊಳ್ಳುವುದಿಲ್ಲ ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದರು.
ಜಗ್ಗು ದಾದಾ ಚಿತ್ರದ ಸಮಯದಲ್ಲಿ ಇವರಿಬ್ಬರ ಪರಿಚಯವಾಗಿತ್ತು ಎನ್ನಲಾಗುತ್ತಿದೆ. ಆ ಚಿತ್ರಕ್ಕೆ ಅಡಿಷನ್ ಕೊಡಲು ಹೋದಾಗ ಇಬ್ಬರ ಪರಿಚಯವಾಯ್ತಂತೆ. ಅಲ್ಲಿಂದ ಶುರುವಾದ ಇವರಿಬ್ಬರ ಗೆಳೆತನ, ಪ್ರೀತಿ, ಬಳಿಕ ಈಗ ಮದುವೆ ಕೂಡ ಆಗಿದೆ ಎನ್ನಲಾಗುತ್ತಿದೆ.