2024 ರ ಟಿ20 ವಿಶ್ವಕಪ್ 25ನೇ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ ಮುಖಾಮುಖಿಯಾಗುತ್ತಿವೆ.
ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇಂದು, ನ್ಯೂಯಾರ್ಕ್ನ ನಸ್ಸೌ ಕೌಂಟಿಯಲ್ಲಿ ನಡೆಯುತ್ತಿರುವ 2024 ರ ಟಿ20 ವಿಶ್ವಕಪ್ 25ನೇ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ ಮುಖಾಮುಖಿಯಾಗುತ್ತಿವೆ. ಈ ಕ್ರೀಡಾಂಗಣದಲ್ಲಿ ಟೂರ್ನಿಯ ಕೊನೆಯ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶವಿದೆ. ಉಭಯ ತಂಡಗಳು ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ತಲಾ 4 ಅಂಕಗಳನ್ನು ಗಳಿಸಿದ್ದು, ಇಂದು ಗೆದ್ದರೆ ಸೂಪರ್-8 ತಲುಪಲಿವೆ. ಕಾಕತಾಳೀಯವೆಂಬಂತೆ ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದವು.