ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿದ ಆರೋಪದಲ್ಲಿ ಒಟ್ಟು 13 ಜನರ ಬಂಧನ ಆಗಿದೆ. ನಟ ದರ್ಶನ್ , ಪವಿತ್ರಾ ಗೌಡ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಹಲವು ಜನರಿಂದ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ವೇಳೆ ಹಲವರ ಹೆಸರು ಹೊರಗೆ ಬಂದಿದೆ. ಇನ್ನೂ ಘಟನೆ ಸಂಭಂಧ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಬಂದಿತ 13 ಆರೋಪಿಗಳನ್ನು ಇದೀಗ ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಎಂದು ಪೊಲೀಸರು ಕರೆತಂದಿದ್ದಾರೆ.
ಹೌದು ನಟ ದರ್ಶನ್ ಸೇರಿ 13 ಆರೋಪಿಗಳನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ. ಪೊಲೀಸರು ಒಟ್ಟು 13 ಆರೋಪಿ ಗಳನ್ನು ಬೌರಿಂಗ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ 12 ವೈದ್ಯರ ತಂಡದಿಂದ ಬಿಪಿ, ಶುಗರ್, ಪಲ್ಸ್ ರೇಟ್, ಇನ್ನೂಳಿದ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಬೆಂಗಳೂರಿನ ಶಿವಾಜಿನಗರದಲ್ಲಿರುವ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಎಲ್ಲ ಬಂಧಿತ 13 ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಯಲಿದೆ.
Robbery Case: ಸಿಲಿಕಾನ್ ಸಿಟಿಯಲ್ಲಿ ಬಿಡು ಬಿಟ್ಟ ತುಪ್ಪ ಕದಿಯೋ ಗ್ಯಾಂಗ್..! ಸೂಪರ್ ಮಾರ್ಕೆಟ್ʼಗಳೆ ಇವರ ಟಾರ್ಗೆಟ್
ಕೊಲೆಯಾದ ರೇಣುಕಾ ಸ್ವಾಮಿ ಕೂಡ ದರ್ಶನ್ ಅಭಿಮಾನಿ ಆಗಿದ್ದ. ಪವಿತ್ರಾ ಗೌಡಗೆ ಮೆಸೇಜ್ ಮಾಡಿದ ಬಗ್ಗೆ ಕೊಲೆಗೂ ಮುನ್ನ ಸ್ನೇಹಿತರ ಬಳಿ ರೇಣುಕಾಸ್ವಾಮಿ ಕೊಲೆಗೂ ಮುನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ರೇಣುಕಾಸ್ವಾಮಿ.‘ನಮ್ಮ ಬಾಸ್ ಸಂಸಾರವನ್ನು ಪವಿತ್ರಾ ಗೌಡ ಹಾಳು ಮಾಡಿದ್ದಾಳೆ. ಅದಕ್ಕೆ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದೆ’ ಎಂದು ರೇಣುಕಾ ಸ್ವಾಮಿ ಹೇಳಿಕೊಂಡಿದ್ದ ಎನ್ನಲಾಗಿದೆ. ತನಿಖೆ ಮುಂದುವರಿದಂತೆಲ್ಲ ಹೊಸ ಹೊಸ ಮಾಹಿತಿಗಳು ಹೊರಬೀಳುತ್ತಿವೆ.