ನವದೆಹಲಿ:- ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ನಿನ್ನೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನೂತನ ಸರ್ಕಾರದ 71 ಸಚಿವರು ಕೂಡಾ ಪ್ರಮಾಣ ಸ್ವೀಕರಿಸಿದ್ದು, ಈ 71 ಸಚಿವರ ಪೈಕಿ 30 ಕ್ಯಾಬಿನೆಟ್ ಮಂತ್ರಿಗಳಾಗಿ, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಮಂತ್ರಿಗಳಾಗಿ ಮತ್ತು 36 ರಾಜ್ಯ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು.
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಪ್ರಭಾವಿ ಸಚಿವರು ಅಂದ್ರೆ ಅದು ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಜೈ ಶಂಕರ್ ಹಾಗೂ ನಿತಿನ್ ಗಡ್ಕರಿ. ಈ ಹಿಂದೆ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಈ ಬಾರಿಯೂ ಅವರಿಗೆ ಅವರದ್ದೇ ಖಾತೆ ಮುಂದುವರೆಸಲಾಗಿದೆ.
ಅಮಿತ್ ಶಾ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಗೃಹ ಖಾತೆಯನ್ನು ನಿಭಾಯಿಸಿದ್ದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 370 ಸೆಕ್ಷನ್ ರದ್ಧತಿ, ತ್ರಿವಳಿ ತಲಾಖ್ ರದ್ಧತಿ ಸೇರಿದಂತೆ ಹಲವು ಕಾನೂನು ಜಾರಿಯಲ್ಲಿ ಅಮಿತ್ ಶಾ ಪಾತ್ರ ಪ್ರಮುಖವಾಗಿತ್ತು. ಇದೀಗ ಮೋದಿ 3.0 ಅವಧಿಯಲ್ಲೂ ಅಮಿತ್ ಶಾಗೆ ಪ್ರಬಲವಾದ ಗೃಹ ಖಾತೆಯನ್ನೇ ನೀಡಲಾಗಿದೆ.
ಈ ಹಿಂದೆ ಹಣಕಾಸು ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ನಿರ್ಮಲಾ ಸೀತಾರಾಮನ್ಗೆ ಮತ್ತೆ ಅದೇ ಖಾತೆಯನ್ನು ನೀಡಲಾಗಿದೆ. ಹಣಕಾಸು ಸಚಿವರಾಗಿ ಪೂರ್ಣಾವಧಿ ಪೂರ್ಣಗೊಳಿಸಿದ ಬಳಿಕ ಅರುಣ್ ಜೇಟ್ಲಿ ಮತ್ತು ಮನಮೋಹನ್ ಸಿಂಗ್ ಅವರ ಸಾಲಿಗೆ ಸೇರಿದ ನಿರ್ಮಲಾ ಸೀತಾರಾಮನ್ ಅವರು ಎರಡನೇ ತಲೆಮಾರಿನ ಸುಧಾರಣೆಗಳನ್ನು ಮುನ್ನಡೆಸಿದರು.
ಮೋದಿ ಸಂಪುಟದ ಅತ್ಯಂತ ಹಿರಿಯ ಹಾಗೂ ಅನುಭವಿ ಸಚಿವರಾಗಿರುವ ರಾಜನಾಥ್ ಸಿಂಗ್ಗೆ ಮತ್ತೆ ಪ್ರಬಲ ಖಾತೆಯೇ ಸಿಕ್ಕಿದೆ.
ವಿದೇಶದಲ್ಲಿ ಭಾರತದ ಹಿರಿಮೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೈಶಂಕರ್ಗೆ ಮತ್ತದೇ ಖಾತೆ ನೀಡಲಾಗಿದೆ. ಈ ಬಾರಿಯೂ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಜೈಶಂಕರ್ಗೆ ನೀಡಲಾಗಿದೆ.
ಪ್ರಭಾವಿ ಸಚಿವರಿಗೆ ಹಳೆ ಖಾತೆ ಮುಂದುವರಿಕೆ
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಪ್ರಭಾವಿ ಸಚಿವರು ಅಂದ್ರೆ ಅದು ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಜೈ ಶಂಕರ್ ಹಾಗೂ ನಿತಿನ್ ಗಡ್ಕರಿ. ಈ ಹಿಂದೆ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಈ ಬಾರಿಯೂ ಅವರಿಗೆ ಅವರದ್ದೇ ಖಾತೆ ಮುಂದುವರೆಸಲಾಗಿದೆ.
ಅಮಿತ್ ಶಾ –ಗೃಹ ಖಾತೆ ಮುಂದುವರಿಕೆ
ಅಮಿತ್ ಶಾ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಗೃಹ ಖಾತೆಯನ್ನು ನಿಭಾಯಿಸಿದ್ದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 370 ಸೆಕ್ಷನ್ ರದ್ಧತಿ, ತ್ರಿವಳಿ ತಲಾಖ್ ರದ್ಧತಿ ಸೇರಿದಂತೆ ಹಲವು ಕಾನೂನು ಜಾರಿಯಲ್ಲಿ ಅಮಿತ್ ಶಾ ಪಾತ್ರ ಪ್ರಮುಖವಾಗಿತ್ತು. ಇದೀಗ ಮೋದಿ 3.0 ಅವಧಿಯಲ್ಲೂ ಅಮಿತ್ ಶಾಗೆ ಪ್ರಬಲವಾದ ಗೃಹ ಖಾತೆಯನ್ನೇ ನೀಡಲಾಗಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ರಚನೆಯಾಗಿದೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ನೂತನ ಕ್ಯಾಬಿನೆಟ್ ಹಾಗೂ ರಾಜ್ಯ ಖಾತೆ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.