ಬಿಪಿ ಸಮಸ್ಯೆ ಇಲ್ಲದವರು “ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ನಾವು ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ತಿನ್ನಬಹುದು” ಎಂದು ಭಾವಿಸುತ್ತಾರೆ. ನೀವು ಕೂಡ ಇದೇ ರೀತಿ ಭಾವಿಸುತ್ತೀರಾ? ಆದರೆ ತಜ್ಞರು ಈ ರೀತಿ ತಿಳಿದುಕೊಳ್ಳುವುದು ತಪ್ಪು ಎನ್ನುತ್ತಾರೆ.
ಕರ್ಬೂಜ ಬೀಜ ಎಸೆದು ಮೂರ್ಖರಾಗಬೇಡಿ… ಇದರಿಂದ ಸಿಗಲಿದೆ ಹಲವು ಆರೋಗ್ಯ ಭಾಗ್ಯಗಳು!
ಉಪ್ಪು ಬಿಪಿಯನ್ನು ಹೆಚ್ಚಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಅಧಿಕ ರಕ್ತದೊತ್ತಡ ಇರುವವರಿಗೆ ವೈದ್ಯರು, ಕಡಿಮೆ ಉಪ್ಪನ್ನು ಸೇವಿಸಲು ಸಲಹೆ ನೀಡುತ್ತಾರೆ. ಆದರೆ ಬಿಪಿ ಸಾಮಾನ್ಯವಾಗಿರುವವರು ಅಂದರೆ ಬಿಪಿ ಸಮಸ್ಯೆ ಇಲ್ಲದವರು “ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ, ನಾವು ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ತಿನ್ನಬಹುದು” ಎಂದು ಭಾವಿಸುತ್ತಾರೆ. ನೀವು ಕೂಡ ಇದೇ ರೀತಿ ಭಾವಿಸುತ್ತೀರಾ? ಆದರೆ ತಜ್ಞರು ಈ ರೀತಿ ತಿಳಿದುಕೊಳ್ಳುವುದು ತಪ್ಪು ಎನ್ನುತ್ತಾರೆ
ಸಾಮಾನ್ಯ ರಕ್ತದೊತ್ತಡ ಹೊಂದಿರುವವರು ಸಹ ಹೆಚ್ಚು ಉಪ್ಪು ಸೇವಿಸಿದರೆ ಹೃದಯ ಮತ್ತು ಮೆದುಳಿನ ರಕ್ತನಾಳಗಳಲ್ಲಿ ಪ್ಲೇಕ್ ಗಳು ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹೇಳುತ್ತಾರೆ. ಸ್ವೀಡನ್ ನ ಸಂಶೋಧಕರು ನಡೆಸಿದ ಅಧ್ಯಯನಗಳಲ್ಲಿ ಇದು ಬಹಿರಂಗವಾಗಿದೆ. ಹೆಚ್ಚು ಉಪ್ಪು ಸೇವಿಸುವ ಜನರಲ್ಲಿ, ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುವುದಕ್ಕಿಂತ ಮೊದಲು, ರಕ್ತನಾಳಗಳಿಗೆ ಹಾನಿ ಉಂಟಾಗುತ್ತದೆ ಎಂದು ಸಂಶೋಧನೆ ತೋರಿಸಿ ಕೊಟ್ಟಿದೆ
ಜೊತೆಗೆ ಅಧಿಕ ಉಪ್ಪಿನ ಸೇವನೆ ಮತ್ತು ರಕ್ತನಾಳಗಳಲ್ಲಿನ ಪ್ಲೇಕ್ ನಡುವೆ ಸಂಬಂಧ ಕಂಡುಬಂದಿದೆ. ಉಪ್ಪಿನ ಸೇವನೆಯು ಹೆಚ್ಚಾದಷ್ಟೂ ಪ್ಲೇಕ್ ಗಳ ಅಪಾಯವು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.