ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಮೊದಲ ಹಂತದ ಗಜ ಪ್ರಸವ ಮುಗಿದಿದೆ.ಎಸೈಟಿ ಕಸ್ಟಡಿ ಮುಗಿದು ಪ್ರಜ್ವಲ್ ಪರಪ್ಪನಅಗ್ರಹಾರದ ಜೈಲು ಪಾಲಾಗಿದ್ದಾನೆ. ಈ ಕುರಿತ ಡಿಟೇಲ್ಸ್ ತೋರಿಸ್ತೀವಿ ನೋಡಿ.. ಹಾಸನ ಅಶ್ಲೀಲ ವಿಡಿಯೋ ಪೆನ್ಡ್ರೈವ್ ಪ್ರಕರಣಕ್ಕೆ ಅರೆಸ್ಟ್ ಆಗಿದ್ದ ಪ್ರಜ್ವಲ್ ರೇವಣ್ಣನ 12 ದಿನಗಳ ಎಸೈಟಿ ಕಸ್ಟಡಿ ಇಂದಿಗೆ ಮುಕ್ತಾಯವಾಗಿದೆ.. ಕಸ್ಟಡಿ ಮುಕ್ತಾಯವಾದ ಹಿನ್ನಲ್ಲೆಯಲ್ಲಿ ಎಸೈಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಇಂದು ಸಂಜೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ರು.
ಈ ವೇಳೆ ಹೊಳೆನರಸೀಪುರ ಕೇಸ್ ಗೆ ಸಂಬಂಧಿಸಿ ವಿಚಾರಣೆಯ ಎಲ್ಲಾ ಪ್ರಕ್ರಿಯೆಗಳು ಮುಗಿಸಿದ್ದರಿಂದ ಎಸೈಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನ್ನು ಮತ್ತೆ ಕಸ್ಟಡಿಗೆ ಕೇಳದ ಕಾರಣ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ…. ಪ್ರಜ್ವಲ್ಗೆ ಜೂನ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುವುದರಿಂದ ಇಂದಿನಿಂದ ಇನ್ನು 14 ದಿನಗಳ ಕಾಲ ಪ್ರಜ್ವಲ್ ರೇವಣ್ಣಗೆ ಪರಪ್ಪನಅಗ್ರಹಾರ ಜೈಲೇ ಗತಿಯಾಗಲಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ SIT ತನಿಖಾ ತಂಡ ಇಂದು ಪ್ರಜ್ವಲ್ ನನ್ನು ಕರೆದುಕೊಂಡು ಹೋಗಿ ಬಸವನಗುಡಿ ಮನೆಯಲ್ಲಿ ಸ್ಥಳ ಮಹಜರು ಮಾಡಿದ್ರು. ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಮಾಡಿರುವ ಸಂತ್ರಸ್ಥೆ ಹೇಳಿಕೆ ಮೇರೆಗೆ ಎಸ್ಐಟಿ ಅಧಿಕಾರಿಗಳು ಸಾಕ್ಷ್ಯಗಳನ್ನು ಕಲೆ ಹಾಕಿದ್ರು.ಹೆಚ್.ಡಿ ರೇವಣ್ಣ ಅವರ ಬಸವನಗುಡಿ ಮನೆಗೆ ಕಂಪ್ಯೂಟರ್ ಸಮೇತ ಆಗಮಿಸಿದ್ದ ಅಧಿಕಾರಿಗಳು ಸ್ಥಳ ಮಹಜರು ಮಾಡಿದ ಬಳಿಕ ಆರೋಪಿಯ ಹೇಳಿಕೆಯನ್ನು ಇದೇ ಸಿಸ್ಟಮ್ನಲ್ಲಿ ಟೈಪಿಂಗ್ ಮೂಲಕ ದಾಖಲಿಸಿಕೊಂಡಿದ್ದಾರೆ. ವೈರಲ್ ಆಗಿರೋ ವಿಡಿಯೋದಲ್ಲಿ ಎಲ್ಲೂ ಪ್ರಜ್ವಲ್ ಮುಖ ಕಾಣಿಸ್ತಿಲ್ಲ.
ಹೀಗಾಗಿ ಮನೆಯ ಕೆಲ ಜಾಗಗಳನ್ನ ಎವಿಡೆನ್ಸ್ ಆಗಿ ಅಧಿಕಾರಿಗಳು ಪರಿಗಣಿಸಿದ್ದಾರೆ. ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖ ಮಾಡಿರುವ ಜಾಗ, ಅಶ್ಲೀಲ ವಿಡಿಯೋದಲ್ಲಿರೋ ಜಾಗಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಇನ್ನು ಸಂತ್ರಸ್ತೆ ಮಹಿಳೆಯನ್ನು ಕೆಲ ದಿನಗಳ ಹಿಂದೆ ಇದೇ ಬಸವನಗುಡಿ ಮನೆಗೆ ಕರೆದುಕೊಂಡು ಬಂದು ಮಹಜರ್ ಮಾಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ರು.
ಈ ಹಿಂದೆ ಸಂತ್ರಸ್ತೆ ನೀಡಿರುವ ಹೇಳಿಕೆ ವಿಡಿಯೋಗಳ ಆಧಾರವನ್ನಿಟ್ಟುಕೊಂಡು ಅಶ್ಲೀಲ ವಿಡಿಯೋದಲ್ಲಿರುವ ಜಾಗಕ್ಕೂ ಬಸವನಗುಡಿ ಮನೆಯಲ್ಲಿರೋ ಜಾಗಕ್ಕೂ ತಾಳೆ ಆಗ್ತಿದೆಯಾ ಎಂದು ಪರಿಶೀಲನೆ ಮಾಡಿ ದಾಖಲು ಮಾಡಿಕೊಂಡ್ರು. ಬಸವನಗುಡಿ ಮನೆಯಲ್ಲಿ ಮಹಜರು ನಡೆಸುವಾಗ ಎಸ್ಐಟಿ ತಂಡ ಕೆಲ ವಸ್ತುಗಳನ್ನು ಎವಿಡೆನ್ಸ್ ಆಗಿ ಪರಿಗಣಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಹೊಳೆನರಸೀಪುರ ಕೇಸ್ ನಲ್ಲಿ ಕಸ್ಟಡಿಯಲ್ಲಿ ವಿಚಾರಣೆ ಮುಗಿಸಿ 14 ದಿನ ಜೈಲು ಪಾಲಾಗಿರುವ ಪ್ರಜ್ವಲ್ ರೇವಣ್ಣನನ್ನು ಮತ್ತೊಂದು ಕೇಸ್ನಲ್ಲಿ ಬಾಡಿ ವಾರೆಂಟ್ ನಲ್ಲಿ ಮತ್ತೆ ಕಸ್ಟಡಿಗೆ ತೆಗದುಕೊಳ್ಳುವ ಸಾಧ್ಯತೆಗಳಿವೆ..