ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 6 ರನ್ಗಳಿಂದ ರೋಚಕ ಜಯ ಸಾಧಿಸಿತು. ಮಳೆಯಿಂದಾಗಿ ಸುಮಾರು ಒಂದು ಗಂಟೆಯಷ್ಟು ತಡವಾಗಿ ಪಂದ್ಯ ಆರಂಭವಾಯಿತು.
3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪದಗ್ರಹಣ.. ಬೆಂಗಳೂರಿನಲ್ಲಿ ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ!
ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಸೀಂ ಶಾ (21ಕ್ಕೆ3) ಮತ್ತು ಹ್ಯಾರಿಸ್ ರವೂಫ್ (21ಕ್ಕ3) ಅವರ ದಾಳಿಯ ಮುಂದೆ ಭಾರತ ತಂಡವು 19 ಓವರ್ಗಳಲ್ಲಿ 119 ರನ್ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ರಿಷಭ್ ಪಂತ್ (42; 31ಎ) ಹಾಗೂ ಅಕ್ಷರ್ ಪಟೇಲ್ (20; 18ಎ) ಅವರಿಬ್ಬರು ಮಾತ್ರ ಹೆಚ್ಚು ರನ್ ಗಳಿಸಿದರು. ಉಳಿದ ಬ್ಯಾಟರ್ಗಳು ವಿಫಲರಾದ
ಆದರೆ ಚೆಂಡು ಹೆಚ್ಚು ಪುಟಿಯದೇ ಅನಿರೀಕ್ಷಿತ ಬೌನ್ಸ್ ಮತ್ತು ತಿರುವುಗಳಿಂದ ಬ್ಯಾಟರ್ಗಳಿಗೆ ಸವಾಲಾಗಿದ್ದ ಪಿಚ್ನಲ್ಲಿ ಭಾರತದ ಬೌಲರ್ಗಳೂ ಮಿಂಚಿದರು. ಗುರಿ ಬೆನ್ನಟ್ಟಿದ ಪಾಕ್ ತಂಡವನ್ನು ಕಟ್ಟಿಹಾಕಿದರು. ಬೂಮ್ರಾ (14ಕ್ಕೆ3) ಹಾಗೂ ಪಾಂಡ್ಯ (24ಕ್ಕೆ2) ಅವರ ಅಮೋಘ ಬೌಲಿಂಗ್ನಿಂದಾಗಿ ಪಾಕ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 113 ರನ್ ಗಳಿಸಲಷ್ಟೇ ಶಕ್ತವಾಯಿತು.
ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನೀರಸ ಪ್ರದರ್ಶನ ನೀಡಿತು. ಪಾಕ್ ಬೌಲರ್ಗಳ ಎದುರು ರನ್ ಗಳಿಸಲು ಪರದಾಡಿದ ರೋಹಿತ್ ಪಡೆ, ತನ್ನ ಪಾಲಿನ 20 ಓವರ್ಗಳ ಕೋಟಾ ಕೂಡ ಮುಗಿಸಲಿಲ್ಲ. 19 ಓವರ್ಗಳಲ್ಲೇ 119 ರನ್ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿ ಹಿಂಬಾಲಿಸಿದ ಪಾಕಿಸ್ತಾನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಜಸ್ಪ್ರೀತ್ ಬುಮ್ರಾ (3/14) ಖತರ್ನಾಕ್ ಬೌಲಿಂಗ್ ನಡೆಸಿದರು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕ್ ತಂಡವನ್ನು 7ನೇ ಬಾರಿಗೆ ಸೋಲಿಸಿ ದಾಖಲೆ ಬರೆದಿದೆ.
ಅಲ್ಪ ಗುರಿ ಬೆನ್ನಟ್ಟಿದ ಪಾಕ್, ಆರಂಭದಲ್ಲೇ ಬಾಬರ್ ಅಜಮ್ (13) ಕಳೆದುಕೊಂಡಿತು. ಪ್ರಾರಂಭದಲ್ಲೇ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆದರೂ ಮುನ್ನಡೆ ತಂದುಕೊಟ್ಟರೂ ಭಾರತ ಕಂಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ. ಬೌಲರ್ಗಳು ಆಗಾಗ್ಗೆ ಟೈಟ್ ಬೌಲಿಂಗ್ ನಡೆಸಿದರೂ ವಿಕೆಟ್ ಉರುಳಿಸಲು ಕಷ್ಟಪಟ್ಟರು. ಆರಂಭಿಕ ಮೊಹಮ್ಮದ್ ರಿಜ್ವಾನ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಪಾಕ್ ತಂಡಕ್ಕೆ ಆಸರೆಯಾದರು. ಒತ್ತಡ ಮುಕ್ತರಾಗಿ ಬ್ಯಾಟ್ ಬೀಸತೊಡಗಿದರು.
ಉಸ್ಮಾನ್ ಖಾನ್ 13, ಫಖಾರ್ ಜಮಾನ್ 13 ರನ್ ಗಳಿಸಿ ಔಟಾದರೂ ತಂಡದ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೆ 31 ರನ್ ಗಳಿಸಿ ಕ್ರೀಸ್ ಕಚ್ಚಿ ನಿಂತಿದ್ದ ಮೊಹಮ್ಮದ್ ರಿಜ್ವಾನ್, ಜಸ್ಪ್ರೀತ್ ಬುಮ್ರಾ ಸ್ವಿಂಗ್ಗೆ ಕ್ಲೀನ್ ಬೋಲ್ಡ್ ಆದರು. ಇದು ಪಾಕ್ ಆತಂಕವನ್ನು ಹೆಚ್ಚಿಸಿತು. ಶಾದಾಬ್ ಖಾನ್ (4) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ ಅಂತಿಮ ಹಂತದಲ್ಲಿ ಇಮಾದ್ ವಾಸೀಂ ಮತ್ತು ಇಫ್ತಿಕಾರ್ ಅಹ್ಮದ್, ಭಾರತೀಯ ಬೌಲರ್ಗಳ ದಾಳಿಯನ್ನು ಹಿಮ್ಮೆಟ್ಟಲು ವಿಫಲರಾದರು
ಕೊನೆಯ ಓವರ್ 3 ಓವರ್ಗಳಲ್ಲಿ ಪಾಕ್ಗೆ 30 ರನ್ ಬೇಕಿತ್ತು. ಆದರೆ, 18ನೇ ಓವರ್ನಲ್ಲಿ ಸಿರಾಜ್ 9 ರನ್ ಬಿಟ್ಟುಕೊಟ್ಟರು. ಬಳಿಕ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಕೇವಲ 3 ರನ್ ಬಿಟ್ಟುಕೊಟ್ಟರು.ಕೊನೆಯಲ್ಲಿ ಇಫ್ತಿಕಾರ್ 9 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರೆ, ಇಮಾದ್ 23 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮ ಓವರ್ನಲ್ಲಿ ಪಾಕ್ ಗೆಲ್ಲಲು 18 ರನ್ ಬೇಕಿತ್ತು. ಆದರೆ 11 ರನ್ ಗಳಿಸಲಷ್ಟೇ ಶಕ್ತವಾಯಿತು. ಅರ್ಷದೀಪ್ ಅದ್ಭುತ ಬೌಲಿಂಗ್ ನಡೆಸಿದರು. ಬುಮ್ರಾ 4 ಓವರ್ಗಳಲ್ಲಿ 13 ಓವರ್ಗಳಲ್ಲಿ 3 ವಿಕೆಟ್, ಹಾರ್ದಿಕ್ 4 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು.