ಸದೃಡ ದೇಹ ಹೊಂದಬೇಕು, ಸದಾ ಫಿಟ್ ಎಂಡ್ ಫೈನ್ ಆಗಿ ಇರಬೇಕು ಎಂಬ ಕಾರಣಕ್ಕೆ ಅನೇಕರ್ ಜಿಮ್ ಗೆ ಹೋಗುತ್ತಾರೆ. ಜೊತೆಗೆ ಪ್ರೋಟೀನ್ ಪೌಡರ್ ಸಹ ಬಳಸುತ್ತಾರೆ. ಆದರೆ ಈ ಪ್ರೋಟೀನ್ ಪೌಡರ್ ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ICMR ವರದಿಯಲ್ಲಿ ಬೆಚ್ಚಿ ಬೀಳಿಸುವ ವಿಷಯ ಬಹಿರಂಗವಾಗಿದೆ.
ಜಿಮ್ ಮತ್ತು ಸ್ಫೋರ್ಟ್ಗಳಲ್ಲಿ ತೊಡಗಿಕೊಂಡಿರುವ ಯುವಕ-ಯುವತಿಯರು ಪ್ರೋಟೀನ್ ಹೆಸರಿನಲ್ಲಿ ಸ್ಲೋ ಪಾಯಿಸನ್ ಸೇವಿಸುತ್ತಿದ್ದು, ತಮಗೆ ತಾವೇ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಅಂತಾ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದೆ.
13 ವರ್ಷದ ಬಳಿಕ ICMR ಭಾರತೀಯರ ಫುಡ್ ಡಯಟ್ರಿ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ ಪೌಡರ್ ಬಳಕೆದಾರರನ್ನು ಅಚ್ಚರಿ ಮೂಡಿಸುವ ಅಂಶಗಳು ಈ ವರದಿಯಲ್ಲಿವೆ. ಅತಿಯಾಗಿ ಪ್ರೋಟಿನ್ ಪೌಡರ್ ಸೇವನೆಯಿಂದ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದಲ್ಲಿ ಅತಿಹೆಚ್ಚು ಪ್ರೋಟೀನ್ ಪೌಡರ್ಗಳು ಮಾರಟವಾಗುತ್ತಿವೆ. ಇದರಲ್ಲಿ ಸಕ್ಕರೆ, ಸೋಡಿಯಂ, ಪೋಟ್ಯಾಷಿಯಂ ಸೇರಿದಂತೆ ಹಲವು ಕೆಮಿಕಲ್ ಅಂಶಗಳು ಪತ್ತೆಯಾಗಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿರುವ ಅನೇಕ ಕಂಪನಿಗಳ ಪ್ರೋಟೀನ್ ಪೌಡರ್ಗಳಲ್ಲಿ ಜೀವಕ್ಕೆ ಕುತ್ತು ತರುವಂತಹ ಕೆಮಿಕಲ್ ಬಳಕೆ ಮಾಡಲಾಗುತ್ತಿದೆಯಂತೆ. ಹೆಚ್ಚಾಗಿ ಸಕ್ಕರೆ ಅಂಶಗಳು ಪ್ರೋಟಿನ್ ಪೌಡರ್ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಡಯಾಬಿಟಿಸ್ನಂತಹ ಸಮಸ್ಯೆ ಬರುವ ಸಾಧ್ಯತೆಯಿದೆ.
ದೇಹಕ್ಕೆ ಕ್ಯಾಲೋರಿ ಒದಗಿಸುವ ಹಿನ್ನಲೆ ಅದರಲ್ಲಿ ಬಳಸುವ ಒಂದಿಷ್ಟು ಕೆಮಿಕಲ್ ಅಂಶಗಳು ಕಿಡ್ನಿ, ಲಿವರ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಅತಿಯಾಗಿ ಪ್ರೋಟೀನ್ ಪೌಡರ್ ಬಳಸದೆ ದೇಹ ವೃದ್ಧಿಗೆ ನೈಸರ್ಗಿಕ ಆಹಾರವನ್ನೇ ಬಳಸುವಂತೆ ಹಿರಿಯ ಮದುಮೇಹ ತಜ್ಞ ಡಾ.ಅನೀಲ್ಕುಮಾರ್ ಸಲಹೆ ನೀಡಿದ್ದಾರೆ. ಜಿಮ್ಗಳಿಗೆ ಬರುವ ಬಹುತೇಕರು ಆನ್ಲೈನ್ನಲ್ಲಿ ಪ್ರೋಟೀನ್ ಪೌಡರ್ಗಳನ್ನು ಖರೀದಿಸುತ್ತಾರೆ. ಲೈಸೆನ್ಸ್ ಇಲ್ಲದಿರುವ ಕಂಪನಿಗಳ ಪ್ರೋಟೀನ್ ಪೌಡರ್ಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಅಂತಾ ಎಚ್ಚರಿಕೆ ನೀಡಿದೆ.