ನವದೆಹಲಿ:– 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಸಂಜೆ 7.15ರ ಶುಭ ಮುಹೂರ್ತದಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸಿದ್ರು. ಪ್ರಧಾನಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು
ನ್ಯೂಯಾರ್ಕ್ನಲ್ಲಿ ಮಳೆ ಆರಂಭ.. ರದ್ದಾಗುತ್ತಾ ಭಾರತ V/s ಪಾಕಿಸ್ತಾನ್ ಪಂದ್ಯ..!?
800ಕ್ಕೂ ಹೆಚ್ಚು ವಿವಿಧ ರಾಷ್ಟ್ರಗಳ ಗಣ್ಯರು, ಉದ್ಯಮಿಗಳು, ರಾಜಕಾರಣಿಗಳು, ಚಿತ್ರನಟರು, ಪೌರ ಕಾರ್ಮಿಕರು, ಪದ್ಮ ಪ್ರಶಸ್ತಿ ವಿಜೇತರು ಸೇರಿದಂತೆ ಹಲವರು ಈ ಕ್ಷಣಕ್ಕೆ ಸಾಕ್ಷಿಯಾದರು
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 293 ಸ್ಥಾನಗಳನ್ನು ಗಳಿಸುವುದರೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ, ಇತಿಹಾಸ ನಿರ್ಮಿಸಿದ್ದಾರೆ. 10 ವರ್ಷಗಳ ಕಾಲ ರಾಷ್ಟ್ರವನ್ನು ಮುನ್ನಡೆಸಿದ ಕೆಲವೇ ಪ್ರಧಾನಿಗಳಲ್ಲಿ ಒಬ್ಬರಾಗಿದ್ದಾರೆ
2014ರಲ್ಲಿ ಮೋದಿ ಮೊದಲ ಬಾರಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸದರು. 2019 ರಲ್ಲಿ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. 2014ರಿಂದ 2024ರವರೆಗೆ 10 ವರ್ಷಗಳು, 19 ದಿನಗಳು ಪ್ರಧಾನಿಯಾಗಿ ಮೋದಿ ಸೇವೆ ಸಲ್ಲಿಸಿದ್ದಾರೆ. ಇದೀಗ 3ನೇ ಅವಧಿಗೆ ಮೋದಿ ಆಡಳಿತ ಮುಂದುವರೆದಿದೆ ಎಂದು ಹೇಳಲಾಗಿದೆ.