ಪೇರಳೆ ಹಣ್ಣನ್ನು ಅತಿಯಾಗಿ ಸೇವಿಸುವವರು ಈ ಸುದ್ದಿ ಪೂರ್ತಿ ಓದಿ.. ಪೇರಳೆಯಲ್ಲಿ ನಾರಿನಂಶ, ಜೀವಸತ್ವಗಳು ಅಧಿಕವಾಗಿವೆ. ಇದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಈ ಹಣ್ಣು ಮಧುಮೇಹಿಗಳಿಗೆ ಒಳ್ಳೆಯದು. ಪೇರಳೆ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಕೆಲವರು ಮಾತ್ರ ಈ ಹಣ್ಣನ್ನು ಅಪ್ಪಿತಪ್ಪಿಯೂ ಸೇವಿಸಬಾರದು.
ಪೇರಳೆ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ನಂತಹ ಸಮಸ್ಯೆಗಳು ಉಂಟಾಗುತ್ತವೆ. ದುರ್ಬಲ ಜೀರ್ಣಕ್ರಿಯೆ, ಶೀತ ಮತ್ತು ಕೆಮ್ಮಿನ ಸಮಸ್ಯೆ ಇರುವವರು ಪೇರಳೆ ಹಣ್ಣನ್ನು ತಿನ್ನಬಾರದು. ಇದು ಈ ರೋಗ ಲಕ್ಷಣಗಳನ್ನು ಉಲ್ಭಣಗೊಳಿಸುತ್ತದೆ. ವಿಶೇಷವಾಗಿ ಈ ಹಣ್ಣನ್ನು ರಾತ್ರಿ ವೇಳೆ ತಿನ್ನಬಾರದು
ಪೇರಳೆ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಆದರೆ ಅತಿಯಾಗಿ ಇದನ್ನು ತಿನ್ನುವುದು ಒಳ್ಳೆಯದಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದವರು, ಗರ್ಭಿಣಿಯರು & ಹಾಲುಣಿಸುವ ತಾಯಂದಿರು ಪೇರಳೆ ಹಣ್ಣನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇದರಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಪೇರಳೆ ಎಲೆಗಳನ್ನು ಸೇವಿಸುವುದರಿಂದ ರಕ್ತಹೀನತೆ, ತಲೆನೋವು ಮತ್ತು ಮೂತ್ರಪಿಂಡದ ಸಮಸ್ಯೆಗಳು ಉಂಟಾಗಬಹುದು. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ.
ಪೇರಳೆಯಲ್ಲಿ ವಿಟಮಿನ್ ʼC ಸಮೃದ್ಧವಾಗಿದ್ದು, ಹೀಗಾಗಿ ಇದನ್ನು ಅತಿಯಾಗಿ ಸೇವಿಸಬಾರದು. ಉರಿಯೂತದ ಸಮಸ್ಯೆ ಇರುವವರು ಸಹ ಪೇರಳೆಯನ್ನು ತಿನ್ನಬಾರದು. ಏಕೆಂದರೆ ಇದನ್ನು ತಿನ್ನುವುದರಿಂದ ಊತ ಹೆಚ್ಚಾಗಬಹುದು. ಪ್ರತಿದಿನ ಒಂದು ಅಥವಾ ಎರಡು ಪೇರಳೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಮಧ್ಯಾಹ್ನದ ಸಮಯದಲ್ಲಿ ಇದನ್ನು ತಿನ್ನುವುದು ಒಳ್ಳೆಯದು. ವ್ಯಾಯಾಮದ ಮೊದಲು ಇದನ್ನು ಸೇವಿಸಬಹುದು ಅಂತಾ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.