ಬೆಂಗಳೂರು: ರಜೆ ನಗದೀಕರಣವನ್ನು ವಿವೇಚನೆಯ ಉಡುಗೊರೆಯೆಂದು ಪರಿಗಣಿಸಲಾಗದು. ಅದೊಂದು ಸಂವಿಧಾನದಡಿ ಲಭ್ಯವಿರುವ ಕಾನೂನುಬದ್ಧ ಹಕ್ಕಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ. ವಾಟರ್ಮನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಪಾವಗಡ ಎಚ್. ಚನ್ನಯ್ಯಗೆ ಮೂರು ತಿಂಗಳಲ್ಲಿ 1.32 ಲಕ್ಷ ರೂ. ರಜೆ ನಗದೀಕರಣವನ್ನು ಶೇ.6ರಷ್ಟು ಬಡ್ಡಿ ದರದಲ್ಲಿ ಪಾವತಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಜೆ ನಗದೀಕರಣ ಮಾಡದ ಸರ್ಕಾರಿದ ಕ್ರಮ ಪ್ರಶ್ನಿಸಿ ಎಚ್. ಚನ್ನಯ್ಯ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾ. ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿದೆ. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ, ” ಅರ್ಜಿದಾರರ ಸೇವಾ ದಾಖಲೆಗಳ ಬಗ್ಗೆ ಪ್ರತಿವಾದಿ ಆಕ್ಷೇಪ ಎತ್ತಿದ್ದಾರೆ, ಆದರೆ, ಹಲವು ವರ್ಷಗಳಿಂದ ಅಧಿವರು ನಾನಾ ಆಡಳಿತ ಘಟಕಗಳಡಿ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ನಂತರ ಅವರಿಗೆ ಪಿಂಚಣಿ ಭತ್ಯೆ ನೀಡುವಂತೆ ಗ್ರಾಮ ಪಂಚಾಯ್ತಿ ಆದೇಶಿಸಿದೆ.
https://ainlivenews.com/do-you-know-what-are-the-must-visit-places-in-udupi-see-this-story/
ಅಲ್ಲದೆ, ಸುಪ್ರೀಂಕೋರ್ಟ್ ದಿಯೋಕಿನಂದನ್ ಪ್ರಸಾದ್ ವರ್ಸಸ್ ಸ್ಟೇಟ್ ಆಫ್ ಬಿಹಾರ ಪ್ರಕರಣದಲ್ಲಿ ಪಿಂಚಣಿ ಮತ್ತು ಗ್ರ್ಯಾಚುಟಿ ಪಾವತಿ ಉದ್ಯೋಗದಾತರ ವಿವೇಚನೆಗೆ ಒಳಪಟ್ಟಿರುವುದಿಲ್ಲ, ಅದು ಕಾನೂನು ಬದ್ಧ ಹಕ್ಕು. ಪಿಂಚಣಿ, ಗ್ರ್ಯಾಚುಟಿ ಮತ್ತು ರಜೆ ನಗದೀಕರಣ ಸಂವಿಧಾನದ ಸೆಕ್ಷನ್ 19(1)(ಎಫ್) ಮತ್ತು ಸೆಕ್ಷನ್ 31(1)ರಡಿ ಲಭ್ಯವಿರುವ ಮೂಲ ಹಕ್ಕಿನ ಭಾಗವಾಗಿದೆ. ಹಾಗಾಗಿ, ಅಧಿದು ಶಾಸನ ಬದ್ಧವಾಗಿದೆ.
ಹೀಗಾಗಿ, ಅವರಿಗೆ ರಜೆ ನಗದೀಕರಣ ನೀಡಬೇಕಾಗಿದೆ ‘ ಎಂದು ಆದೇಶಿಸಿದೆ. ಸಂವಿಧಾನದಡಿ ನಾಗರಿಕರಿಗೆ ರಕ್ಷಣೆ ಇದೆ. ಅದರಂತೆ ಸಂವಿಧಾನದ ಕಲಂ 300 ‘ಎ’ ಅಡಿ ವ್ಯಕ್ತಿ ವೈಯಕ್ತಿಕವಾಗಿ ಆಸ್ತಿ ಹೊಂದುವುದನ್ನು ನಿರ್ಬಂಧಿಸುವಂತಿಲ್ಲ. ಅದರಲ್ಲಿ ಗಳಿಕೆ ರಜೆ ನಗದೀಕರಣವೂ ಸೇರಿದೆ. ಈ ರೀತಿ ರಜೆ ನಗದೀಕರಣ ತಡೆ ಹಿಡಿಯುವುದು ಅಸಂವಿಧಾನಿಕ ‘ ಎಂದು ನ್ಯಾಯಪೀಠ ಹೇಳಿದೆ.