ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಒಂದೇ ಕಾರಿನಲ್ಲಿ ಒಟ್ಟಿಗೆ ಬಂದು ಅರ್ಜಿ ಸಲ್ಲಿಸಿ ಕೈಕೈ ಹಿಡಿದುಕೊಂಡು ವಾಪಸ್ ಹೊರಟಿದ್ದರು. ಈ ಮಧ್ಯೆ ಇಬ್ಬರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದ್ದು ಈ ಮಧ್ಯೆ ಸೃಜಲ್ ಲೋಕೇಶ್ ಅವರನ್ನು ನೆಟ್ಟಿಗರು ಎಳೆದು ತಂದಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯರಾಗಿದ್ದ ಈ ಜೋಡಿಯು ಬೇರ್ಪಡುವುದು ಅವರ ಫಾಲೋವರ್ಸ್ಗಳಿಗೆ ಶಾಕ್ ನೀಡಿದೆ. ಇನ್ನು ಚಂದನ್- ನಿವೇದಿತಾ ಡಿವೋರ್ಸ್ ವಿಚಾರದಲ್ಲಿ ಕೆಲವರು ನಟ ಸೃಜನ್ ಲೋಕೇಶ್ ಹೆಸರು ಎಳೆದುತಂದು ಟ್ರೋಲ್ ಮಾಡುತ್ತಿದ್ದಾರೆ.
ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಒಂದು ವಿಡಿಯೊ ಶೇರ್ ಮಾಡಿ ಶುಭ ಕೋರಿದ್ದರು. ಅದರಲ್ಲಿ ನಿವೇದಿತಾ ಜೊತೆಗಿನ ಒಂದಷ್ಟು ಫೋಟೊಗಳನ್ನು ಹಾಕಿದ್ದರು. ಇದಕ್ಕೆ ಮನಬಂದಂತೆ ಕಮೆಂಟ್ ಮಾಡಿದ್ದಾರೆ ನೆಟ್ಟಿಗರು. ಕೆಲವರು ಕಮೆಂಟ್ನಲ್ಲಿ ಇವರ ಡಿವೋರ್ಸ್ಗೆ ಸೃಜನ್ ಲೋಕೇಶ್ ಕಾರಣ ಎನ್ನುತ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದರು. ಬಳಿಕ ‘ರಾಜಾ ರಾಣಿ’ ಚಂದನ್- ನಿವೇದಿತಾ ಭಾಗಿ ಆಗಿದ್ದರು. ಎರಡರಲ್ಲಿಯೂ ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದರು. ಹಾಗಾಗಿ ಸೃಜನ್ ಹಾಗೂ ನಿವೇದಿತಾ ನಡುವೆ ಒಳ್ಳೆ ಬಾಂಧವ್ಯ ಇತ್ತು, ಪ್ರೇಮಕ್ಕೆ ಹೊರತಾದ ಬಾಂಧವ್ಯ ಇರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ನಿವೇದಿತಾ ಹುಟ್ಟು ಹಬ್ಬಕ್ಕೆ ಚಂದನ್ ಕೂಡ ವಿಶ್ ಮಾಡಿದ್ದರು. ಸೃಜನ್ ಕೂಡ ನಿವೇದಿತಾಗೆ ವಿಶ್ ಮಾಡಿ ವಿಡಿಯೊ ಹಂಚಿಕೊಂಡಿದ್ದರು. ಸೃಜನ್ ಲೋಕೇಶ್ ಹಂಚಿಕೊಂಡಿದ್ದ ವೀಡಿಯೋದ ಹಿನ್ನೆಲೆಯಲ್ಲಿ ಬರುವ ಹಾಡಿನ ಬಗ್ಗೆಯೂ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಚಂದನ್ ಹಾಗೂ ನಿವೇದಿತಾ ಡಿವೋರ್ಸ್ ಗೆ ಸೃಜನ್ ಅವರೇ ಕಾರಣ ಎಂದು ಕಾಮೆಂಟ್ ಹಾಕುತ್ತಿದ್ದಾರೆ.