ಗದಗ :-ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಹಿನ್ನಲೆಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷೆಯ ಪತಿಗೆ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ನಾನು 24/7 ರಾಜಕಾರಣಿ.. ಸಿನಿಮಾ ಮಾಡುವುದನ್ನ ಬಂದ್ ಮಾಡಿದ್ದೇನೆ -ನಿಖಿಲ್ ಕುಮಾರಸ್ವಾಮಿ!
ಮುಂಡರಗಿ ಪುರಸಭೆಯ ಮಾಜಿ ಅಧ್ಯಕ್ಷೆ ಕವಿತಾ ಇವರ ಪತಿ ಹಾಗೂ ಬಿಜೆಪಿ ಮುಖಂಡ ಅಂದಪ್ಪ ಉಳ್ಳಾಗಡ್ಡಿ ಎಂಬಾತನಿಗೆ ಮಹಿಳೆಯರು ಸಖತ್ತಾಗಿ ಧರ್ಮದೇಟು ನೀಡಿದ್ದಾರೆ.
ಮಹಿಳೆಯರಿಗೆ ಆಸೆ ಆಮಿಷಗಳನ್ನು ನೀಡಿ ಹಣ ಕೊಡುವುದಾಗಿ, ಸೈಟ್ ಕೊಡಿಸುವುದಾಗಿ, ಕೆಲಸ ಕೊಡಿಸುವುದಾಗಿ ನಂಬಿಸಿ ಅಂದಪ್ಪನು ಲೈಂಗಿಕ ಕಿರುಕುಳ ನೀಡುತ್ತಿದ್ದನು ಎಂಬುವುದು ಮಹಿಳೆಯರ ಆರೋಪವಾಗಿದೆ.
ಕಿರುಕುಳದಿಂದ ಬೇಸತ್ತ ಮಹಿಳೆಯರು ಅಂದಪ್ಪನನ್ನು ಮನೆಯಲ್ಲಿ ಕೂಡಿಹಾಕಿ ಸಖತ್ ಗೂಸಾ ನೀಡುವ ಮೂಲಕ ರಾಜಕೀಯವಾಗಿ ಹಾಗೂ ಹಣದ ಅಮಲಿನಲ್ಲಿ ತೇಲುತ್ತಿದ್ದ ಅಂದಪ್ಪನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.