ಮಂಡ್ಯ:- ನಾನು 24/7 ರಾಜಕಾರಣಿ.. ಸಿನಿಮಾ ಮಾಡುವುದನ್ನ ಬಂದ್ ಮಾಡಿದ್ದೇನೆ ಎಂದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ. 2019ರ ನನ್ನ ಸೋಲು ಸೋಲಾಗಿರಲಿಲ್ಲ. ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಯ್ತು. ಮಂಡ್ಯ ಜನ ನನಗೆ ಹೃದಯದಲ್ಲಿ ಸ್ಥಾನ ನೀಡಿದ್ದಾರೆ ಎಂದರು.
ಕುಮಾರಣ್ಣ ಸಿಎಂ ಆಗಿದ್ದಾಗ ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಕುಮಾರಣ್ಣ ಸ್ಪರ್ಧೆಗೆ ಕಾರ್ಯಕರ್ತರ ಆಪೇಕ್ಷೆ ಇತ್ತು. ಮಹಿಳೆಯರು, ರೈತರು, ಹಿರಿಯರು ಎಲ್ಲಾ ವರ್ಗದವರು ಕುಮಾರಣ್ಣ ಅವ್ರನ್ನ ಹೆಚ್ಚಿನ ಅಂತರದಲ್ಲಿ ಆಯ್ಕೆ ಮಾಡಿದ್ದಾರೆ. ಮುಂದಿನ 5 ವರ್ಷ ಪ್ರಮಾಣಿಕ ಕೆಲಸ ಮಾಡ್ತಾರೆ ಎಂದರು.
ಶೀಘ್ರದಲ್ಲೇ ಚೆನ್ನಪಟ್ಟಣದಲ್ಲಿ ಅಲ್ಲಿನ ಜನರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ನಂತರ ಮಂಡ್ಯದಲ್ಲಿ ಸಭೆ ನಡೆಸಿ ಜನರಿಗೆ ಕೃತಜ್ಞತಾ ಸಭೆ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಗುವುದು, ಸುಮಲತಾ ಅಂಬರೀಶ್ ಅವರು ಚುನಾವಣೆ ವೇಳೆ ವೇದಿಕೆ ಹಂಚಿಕೊಳ್ಳಲಾಗದಿದ್ದರೂ ಕುಮಾರಣ್ಣನ ಗೆಲುವಿಗೆ ಸಹಕಾರ ನೀಡಿದ್ದಾರೆ. ನನಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದು ಮುಂದಿನ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ.