ಭಾರತ-ಪಾಕ್ ಪಂದ್ಯ ನ್ಯೂಯಾರ್ಕ್ನಿಂದ ಸ್ಥಳಾಂತರ ಆಗಲಿರುವ ಬಗ್ಗೆ ICC ಕೊನೆಗೂ ಸ್ಪಷ್ಟನೆ ನೀಡಿದೆ.
ಶೀಘ್ರದಲ್ಲೇ ಕ್ರಿಕೆಟ್ ಗೆ ಗುಡ್ ಬಾಯ್ ಹೇಳಲಿದ್ದಾರೆ ಫಾಫ್… ಆರ್ಸಿಬಿ ಮುಂದಿನ ಕ್ಯಾಪ್ಟನ್ ಯಾರು!?
ಜೂನ್ 9ರಂದು ಮೆಗಾ ಫೈಟ್ ನಡೆಯಲಿದೆ. ಈ ಬಿಗ್ ಕ್ಲ್ಯಾಶ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡವು ಸೆಣಸಾಡಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಭಾರತ ಈಗಾಗಲೇ ಒಂದು ಪಂದ್ಯ ಗೆದ್ದಿದ್ದರೆ, ಪಾಕಿಸ್ತಾನ ತಂಡವು ಯುಎಸ್ಎ ವಿರುದ್ಧ ಸೋತು ಸಂಕಷ್ಟದಲ್ಲಿದೆ.
ಇನ್ನು, ಮತ್ತೊಮ್ಮೆ ಎರಡು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಐಸಿಸಿ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಆದರೆ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಟಿ20 ವಿಶ್ವಕಪ್ ಪಿಚ್ ವಿವಾದಕ್ಕೀಡಾಗಿದೆ. ಟಿ20 ವಿಶ್ವಕಪ್ ಪಿಚ್ನ ಕಳಪೆ ಗುಣಮಟ್ಟದ ಬಗ್ಗೆ ಮೊದಲಿನಿಂದಲೂ ಮಾತನಾಡಲಾಗುತ್ತಿದೆ.
ಬಿಬಿಸಿ ವರದಿಯ ಪ್ರಕಾರ, ಭಾರತ ತಂಡವು ನ್ಯೂಯಾರ್ಕ್ನ ಪಿಚ್ ಬಗ್ಗೆ ನಿರಾಶೆಗೊಂಡಿದೆ. ಆತಿಥೇಯ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಲಾಗಿದೆ ಎಂದೂ ಮೂಲಗಳು ತಿಳಿಸಿವೆ. ಪರಿಣಾಮವಾಗಿ, ಪಂದ್ಯವನ್ನು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಿಂದ ಸ್ಥಳಾಂತರಿಸಲಾಗುವುದು ಎಂಬ ಊಹಾಪೋಹವಿತ್ತು. ಆದರೆ. ಐಸಿಸಿ ಅಂತಿಮ ಉತ್ತರ ನೀಡಿದೆ. ಪಿಚ್ ಬಗ್ಗೆ ಟೀಕೆಗಳ ಹೊರತಾಗಿಯೂ, ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ನ್ಯೂಯಾರ್ಕ್ನಿಂದ ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ ಎಂದು ಐಸಿಸಿ ಮಾಹಿತಿ ನೀಡಿದೆ. ಈ ಮೂಲಕ ಪಿಚ್ ಬಗ್ಗೆ ಯಾವುದೇ ಬದಲಾವಣೆ ಆದರೂ ಅದನ್ನು ಸರಿಪಡಿಸುವುದಾಗಿ ಐಸಿಸಿ ತಿಳಿಸಿದೆ.
ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಜೂನ್ 9ರಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿಯೇ ನಡೆಯಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಈ ಮೂಲಕ ಅಭಿಮಾನಿಗಳ ಅನುಮಾನಕ್ಕೆ ಕೊನೆಗೂ ಐಸಿಸಿ ತೆರೆ ಎಳೆದಿದೆ.
ಪಾಕಿಸ್ತಾನ ಭಾರೀ ಒತ್ತಡದಲ್ಲಿದೆ. ಟೀಂ ಇಂಡಿಯಾ ಸ್ವಲ್ಪ ಬಲಿಷ್ಠವಾಯಿತು. ಟಿ20 ವಿಶ್ವಕಪ್ನಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅದಕ್ಕೂ ಮುನ್ನ ಪಾಕಿಸ್ತಾನವನ್ನು ಸೋತಿರುವುದು ನಾಚಿಕೆಗೇಡಿನ ಸಂಗತಿ. ಇತ್ತೀಚೆಗಷ್ಟೇ ಕ್ರಿಕೆಟ್ ಜಗತ್ತಿಗೆ ಬಂದ ಅಮೆರಿಕದ ಎದುರು ಬಾಬರ್ ಆಜಂ ತಂಡ ಸೋಲಬೇಕಾಯಿತು