ಶೀಘ್ರದಲ್ಲೇ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ. 39 ವರ್ಷದ ಫಾಫ್ ಡುಪ್ಲೆಸಿಸ್ ಮುಂದಿನ ಸೀಸನ್ ವೇಳೆಗೆ 40 ವರ್ಷಕ್ಕೆ ಕಾಲಿಡಲಿದ್ದು, ಹಾಗಾಗಿ ಐಪಿಎಲ್ಗೆ ಗುಡ್ ಬೈ ಹೇಳೋ ಸಾಧ್ಯತೆ ಇದೆ. ಹಾಗಾಗಿ ಫಾಫ್ ಡುಪ್ಲೆಸಿಸ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಕ್ಯಾಪ್ಟನ್ ಅಗತ್ಯ ಇದೆ. ಈಗಾಗಲೇ ಲಕ್ನೋ ತಂಡವನ್ನು ತೊರೆಯೋ ಸೂಚನೆ ನೀಡಿರೋ ನಮ್ಮ ಕರ್ನಾಟಕದ ಹುಡುಗ ಕೆ.ಎಲ್ ರಾಹುಲ್ ಅವರನ್ನು ಆರ್ಸಿಬಿ ಕ್ಯಾಪ್ಟನ್ ಮಾಡೋ ಸಾಧ್ಯತೆಗಳು ಇವೆ ಎಂದು ವರದಿಯಾಗಿದೆ.
ನಿವೇದಿತಾಗೌಡ, ಚಂದನ್ ಡಿವೋರ್ಸ್ಗೆ ಇದೇ ಕಾರಣವಾಯ್ತಾ!?.. ಇವರಿಬ್ಬರಿಗೆ ಎಷ್ಟು ವಯಸ್ಸು ಅಂತರ ಗೊತ್ತಾ!?
ಈ ವರ್ಷದ ಐಪಿಎಲ್ ಲೀಗ್ ಹಂತದ ಪಂದ್ಯವೊಂದರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯವಾಗಿ ಸೋಲನ್ನಪ್ಪಿತ್ತು. ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್ ರೂಮ್ ಬಳಿ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್ ಕೆ.ಎಲ್ ರಾಹುಲ್ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.