ನಿವೇದಿತಾ ಗೌಡ, ಚಂದನ್ಗಿಂತ ಎಷ್ಟು ವರ್ಷ ಚಿಕ್ಕವರು ಗೊತ್ತಾ? ಇದು ಕೂಡ ಡಿವೋರ್ಸ್ಗೆ ಕಾರಣವಾಯ್ತಾ? ಎಂಬ ಪ್ರಶ್ನೆಗಳು ಇದೀಗ ಅಭಿಮಾನಿಗಳಲ್ಲಿ ಮೂಡಿದೆ.
ನಿಮ್ಮ ಬೆಳ್ಳಿ ಸಾಮಾನುಗಳು ಕಪ್ಪಾಗಿವೆಯೇ!?.. ಈ ರೀತಿ ಮಾಡಿ 5 ನಿಮಿಷದಲ್ಲಿ ಪಳ-ಪಳ ಎಂದು ಹೊಳೆಯುತ್ತದೆ!
ಮುದ್ದು ಮುದ್ದಾಗಿ ಮಾತಾಡುವ ನಿವೇದಿತಾ ಗೌಡ ಚಿಕ್ಕ ವಯಸ್ಸಿಗೆ ಹಸೆಮಣೆ ಏರಿದ್ರು. ನಿವೇದಿತಾ ಗೌಡ ಚಂದನವನದಲ್ಲಿ ಗೊಂಬೆ ಎಂದೇ ಖ್ಯಾತಿ. ನಂತರ ಕನ್ನಡ ಬಿಗ್ ಬಾಸ್ 5ನೇ ಸೀಸನ್ ಸ್ಪರ್ಧಿಯಾಗಿ ಖ್ಯಾತಿ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿ ಇವರಿಗಾಗಿ ಹಾಡೊಂದನ್ನು ಕಂಪೋಸ್ ಮಾಡಿದ್ದರು.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಬಹಳ ಕ್ಲೋಸ್ ಆಗಿದ್ದರು. ಹೆಚ್ಚು ಹೆಚ್ಚು ಭೇಟಿ ಆಗುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಇಬ್ಬರು ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಬಳಿಕ 2020 ಫೆಬ್ರವರಿ 26ರಂದು ನಿವೇದಿತಾ ಹಾಗೂ ಚಂದನ್ ಶೆಟ್ಟಿ ಇಬ್ಬರು ಸಪ್ತಪದಿ ತುಳಿದು ವಿವಾಹವಾದ್ರು.
ನಿವೇದಿತಾ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ. ಸಿನಿಮಾ ರಿಲೀಸ್ಗೂ ಮುನ್ನವೇ ಇಬ್ಬರು ವಿಚ್ಛೇದನ ಪಡೆದು ದೂರವಾಗಿದ್ದಾರೆ.
ಚಂದನ್ ಶೆಟ್ಟಿ 17 ಸೆಪ್ಟೆಂಬರ್ 1989ರಲ್ಲಿ ಹುಟ್ಟಿದ್ದು ಅವರಿಗೆ ಈಗ 35 ವರ್ಷ ವಯಸ್ಸಾಗಿದೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರಿಗಿಂತ ದೊಡ್ಡವರು. ನಿವೇದಿತಾ ಗೌಡ ಅವರು 2000 ಮೇ 17ರಂದು ಹುಟ್ಟಿದ್ದು ಅವರ ವಯಸ್ಸು 24 ವರ್ಷ. ಅವರು ಟ್ವೆಂಟೀಸ್ ಕಿಡ್ ಆಗಿದ್ದು, ಇಬ್ಬರ ನಡುವೆ 11 ವರ್ಷ ಏಜ್ ಗ್ಯಾಪ್ ಕೂಡ ತುಂಬಾ ಇದೆ.
ಚಂದನ್ ಹಾಗೂ ನಿವೇದಿತಾ ಗೌಡ ನಡುವೆ ಹೆಚ್ಚು ಏಜ್ ಗ್ಯಾಪ್ ಇದ್ದು, ಇದು ಕೂಡ ಇಬ್ಬರ ವಿಚ್ಛೇದನಕ್ಕೆ ಕಾರಣವಾಗಿರಬಹುದು ಎನ್ನಲಾಗ್ತಿದೆ. ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಶಾಂತಿನಗರದ ಕೋರ್ಟ್ ನಲ್ಲಿ ನಿನ್ನೆ ಕೇಸ್ ದಾಖಲಿಸಿದ್ದರು. ಪ್ರಕರಣದ ಮೊದಲ ವಿಚಾರಣೆ ಹಿನ್ನೆಲೆಯಲ್ಲಿ ಇಬ್ಬರೂ ಇಂದು 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ರು.
ಕೈ ಕೈ ಹಿಡಿದುಕೊಂಡು ಕೋರ್ಟ್ ಹಾಲ್ಗೆ ಬಂದ ಈ ಜೋಡಿ ಅಕ್ಕ-ಪಕ್ಕದಲ್ಲೇ ಕುಳಿತಿದ್ರು. ಈ ಜೋಡಿ ವಿಚ್ಛೇದನ ಪಡೆಯಲು ಕಾರಣ ಏನು ಎಂದು ಅಭಿಮಾನಿಗಳು ಕೇಳ್ತಿದ್ದಾರೆ. ಕೆರಿಯರ್ ವಿಚಾರಕ್ಕೆ ಇಬ್ಬರು ದೂರವಾಗ್ತಿದ್ದಾರೆ ಎನ್ನಲಾಗ್ತಿದೆ. ಜೊತೆ ಮತ್ತೊಂದು ಕಾರಣ ಕೂಡ ಇದೆಯಂತೆ.
ನಿವೇದಿತಾ ಗೌಡ ವಿದೇಶಕ್ಕೆ ತೆರಳಲು ಬಯಸಿದ್ದಾರೆ. ಹೀಗಾಗಿಯೇ ಇಬ್ಬರೂ ವಿಚ್ಚೇದನ ಪಡೆಯುತ್ತಿದ್ದೇವೆ ಎಂದು ಚಂದನ್ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಪರಸ್ಪರ ಸಮ್ಮತಿಯ ವಿಚ್ಚೇದನಕ್ಕೆ ಮಂಜೂರು ಮಾಡಲಾಗಿದೆ.