ನಾವಿಂದು ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸುವ ಮೂಲಕ ಕಪ್ಪಾಗಿರುವ ಬೆಳ್ಳಿಯ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ ಮರಳಿ ಹೊಳಪು ತರುವುದು ಹೇಗೆ ಎಂಬುವುದನ್ನು ತಿಳಿಸುತ್ತೇವೆ
Bengaluru: ಕಳೆದ ಮುಂಗಾರು ಬೆಳೆ ವೈಫಲ್ಯ : 1791 ಕೋಟಿ ರೂ ವಿಮೆ ಪರಿಹಾರ
ಬೆಳ್ಳಿ ವಸ್ತುಗಳ ನಿರಂತರ ಬಳಕೆಯಿಂದ ಅದರ ಹೊಳಪು ಮಾಸುತ್ತದೆ. ಹಾಗಾಗಿ ನಾವಿಂದು ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸುವ ಮೂಲಕ ಕಪ್ಪಾಗಿರುವ ಬೆಳ್ಳಿಯ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ ಮರಳಿ ಹೊಳಪು ತರುವುದು ಹೇಗೆ ಎಂಬುವುದನ್ನು ತಿಳಿಸುತ್ತೇವೆ. ಇದರಿಂದ ನೀವು ಆಭರಣದ ಅಂಗಡಿಗೆ ಹೋಗಿ ಬೆಳ್ಳಿ ಪಾಲಿಶ್ ಮಾಡಿಸುವ ಕೆಲಸ ತಪ್ಪುತ್ತದೆ ಮತ್ತು ಹಣ ಕೂಡ ಉಳಿಯುತ್ತದೆ.
ಟೂತ್ ಪೇಸ್ಟ್: ನಿಮ್ಮ ಮನೆಯಲ್ಲಿರುವ ಬೆಳ್ಳಿ ವಸ್ತು ಕಪ್ಪಾಗಿದ್ದರೆ, ನೀವು ಅದನ್ನು ಟೂತ್ ಪೇಸ್ಟ್ ಸಹಾಯದಿಂದ ಸ್ವಚ್ಛಗೊಳಿಸಬಹುದು. ನೀವು ಆ ಸಿಲ್ವರ್ ಸಾಮಾನುಗಳ ಮೇಲೆ ಸ್ವಲ್ಪ ಟೂತ್ಪೇಸ್ಟ್ ಅನ್ನು ಹಚ್ಚಿ. 10-15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಅದನ್ನು ಹಲ್ಲುಜ್ಜುವ ಬ್ರಷ್ನಿಂದ ಉಜ್ಜಿ. ಸ್ವಲ್ಪ ಸಮಯದ ನಂತರ ಬೆಳ್ಳಿ ವಸ್ತುಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ, ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
ಬೇಕಿಂಗ್ ಸೋಡಾ: ನಿಮಗಿಷ್ಟವಿದ್ದರೆ, ಬೆಳ್ಳಿಯ ವಸ್ತುಗಳನ್ನು ಹೊಳೆಯುವಂತೆ ಮಾಡಲು ನೀವು ಅಡಿಗೆ ಸೋಡಾಕ್ಕೆ ಬಿಳಿ ವಿನೆಗರ್ ಮಾಡಿ. ಈ ಎರಡರ ಪೇಸ್ಟ್ ಅನ್ನು ಮೃದುವಾದ ಬಟ್ಟೆಯ ಮೇಲೆ ಹಚ್ಚಿ, ಬೆಳ್ಳಿಯ ಮೇಲೆ ನಿಧಾನವಾಗಿ ಉಜ್ಜಿ. ಸ್ವಲ್ಪ ಸಮಯದಲ್ಲೇ ಬೆಳ್ಳಿಯ ವಸ್ತುಗಳು ಮೊದಲಿನಂತೆ ಹೊಳೆಯಲಾರಂಭಿಸುತ್ತವೆ. ಇದರ ನಂತರ ಶುದ್ಧ ನೀರಿನಿಂದ ತೊಳೆಯಿರಿ.
ನಿಂಬೆ : ನಿಂಬೆಹಣ್ಣಿನ ಕೆಲವು ಹನಿಗಳು ಯಾವುದೇ ರೀತಿಯ ಕೊಳೆಯನ್ನಾಗಲಿ ತೆಗೆದು ಹಾಕುತ್ತದೆ. ಹಾಗಾಗಿ ಬೆಳ್ಳಿಯ ವಸ್ತುಗಳನ್ನು ಹೊಳೆಯುವಂತೆ ಮಾಡಲು ನೀವು ನಿಂಬೆ ಹಣ್ಣಿನ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಅಡುಗೆ ಸೋಡಾದಲ್ಲಿ ನಿಂಬೆ ರಸವನ್ನು ಬೆರೆಸಿ ಬೆಳ್ಳಿಯ ವಸ್ತುಗಳಿಗೆ ಉಜ್ಜಿ. ಹೀಗೆ ಮಾಡುವುದರಿಂದ ಬೆಳ್ಳಿಯ ಪಾತ್ರೆ ಹೊಳೆಯಲಾರಂಭಿಸುತ್ತದೆ.
ಸೋಪ್: ಬೆಳ್ಳಿಯ ವಸ್ತುಗಳಿಂದ ಕಪ್ಪು ಬಣ್ಣವನ್ನು ತೆಗೆದುಹಾಕಲು ನೀವು ಶಾಂಪೂ ಅಥವಾ ಯಾವುದೇ ಡಿಶ್ ಸೋಪ್ ಅನ್ನು ಸಹ ಬಳಸಬಹುದು. ಇದಕ್ಕಾಗಿ 2 ಸ್ಪೂನ್ ಡಿಶ್ ಸೋಪ್ ಅಥವಾ ಲಿಕ್ವೆಡ್ ಅನ್ನು ತೆಗೆದುಕೊಂಡು ಅದನ್ನು 1 ಕಪ್ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಅದರೊಳಗೆ ಬೆಳ್ಳಿಯ ವಸ್ತುಗಳನ್ನು ಹಾಕಿ, 10 ನಿಮಿಷಗಳ ಕಾಲ ಬಿಡಿ.
ಇದಾದ ನಂತರ ಬ್ರಷ್ನಿಂದ ಉಜ್ಜಿ. ಸ್ವಲ್ಪ ಸಮಯದೊಳಗೆ ಬೆಳ್ಳಿಯ ಮುಖವು ಸ್ಪಷ್ಟವಾಗುತ್ತದೆ ಮತ್ತು ಹಳೆಯ ಹೊಳಪು ಹಿಂತಿರುಗುತ್ತದೆ ಇದನ್ನು ಒಮ್ಮೆ ನೀವು ಟ್ರೈ ಮಾಡಿ!