ಹುಬ್ಬಳ್ಳಿ: ಸಾಕಷ್ಟು ಮಳೆ ಬೀಳತಾ ಇದ್ದು ಇಷ್ಟಾದರೂ ಹುಬ್ಬಳ್ಳಿ ಧಾರವಾಡ ಮಾರುಕಟ್ಟೆಗೆ ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಆ ವಕ ಹೆಚ್ಚಾಗಿದ್ದರು ಕೂಡಾ ದುಬಾರಿ ಬೆಲೆಯಿಂದಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆಆಗಿದ್ದು ಮಾವು ಪ್ರಿಯರಿಗೆ ಅಸಮಾಧಾನ ಆಗಿದೆ.
ಆಪೂಸ್, ಕಲ್ಕಿ, ಬದಾಮಿ (ಅಲಾನ್ನೋ), ಮಲ್ಯೂಬಾ ತಳಿಯ ಮಾವಿನ ಹಣ್ಣುಗಳುಇನ್ನು ಸಹ ನಗರದ ಮಾರುಕಟ್ಟೆಗೆ ಬರುತ್ತಿವೆ. ರಸಪೂರಿ ಹಣ್ಣು ಸಹ ಗೋದಾಮಿನಲ್ಲಿ ದಾಸ್ತಾನಾಗಿದೆ. ಇಲ್ಲಿನ ಜನತಾ ಬಜಾರನಲ್ಲಿ ವ್ಯಾಪಾರಿಗಳು ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಭಾಗದಲ್ಲಿ ಬಹು ಬೇಡಿಕೆ ಇರುವ ಆಪೂಸ್ ತಳಿಯ ಮಾವಿನ ಹಣ್ಣಿಗೆ ಸದ್ಯ ಕೆ.ಜಿಗೆ 600ರಿಂದ 700 ರವರೆಗೆ ದರ ಇದೆ. ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ತಳಿಯ ಮಾವಿನ ಹಣ್ಣು ಸ್ಥಳೀಯವಾಗಿ ಮಾರುಕಟ್ಟೆಗೆ ಅವಕವಾಗುವ ಬದಾಮಿ ತಳಿಗೆ ಕೆ.ಜಿಗೆ 400ರಿಂದ 4 50ವರೆಗೆ ಬೆಲೆ ಇದೆ. ಇದರಿಂದ ಗ್ರಾಹಕರು ಆತಂಕದಲ್ಲಿ ಇದ್ದಾರೆ.
Nail Fungus: ಉಗುರು ಸುತ್ತು ಸಮಸ್ಯೆಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು!
ನಗರದ ಈದ್ಗಾ ಮೈದಾನ, ಕೊಪ್ಪೀಕರ ರಸ್ತೆ, ದಾಜೀಬಾನಪೇಟೆ,ಜನತಾ ಬಜಾರ್ ಮುಂತಾದ ಕಡೆಗಳಲ್ಲಿ ಮಾವಿನ ಹಣ್ಣುಗಳನ್ನು ಕೆ.ಜಿ ಲೆಕ್ಕಕ್ಕಿಂತ ಹೆಚ್ಚಾಗಿ ಡಜನ್ ಲೆಕ್ಕದಲ್ಲಿ ಖರೀದಿಸು ಒಂದು ಡಜನ್ ಅಪೂಸ್ ಹಣ್ಣಿಗೆ ಚಿಲ್ಲರೆ ವ್ಯಾಪಾರಿಗಳು 600ರಿಂದ 800 ದರ ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ ಆರಂಭದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿದ್ದುಇನ್ನು ಮುಂದುವರಿದಿದೆ .ಕಳೆದ ವರ್ಷ ಮಳೆ ಕೊರತೆಯಿಂದಾಗಿ ಇಳುವರಿಯೂ ಕುಸಿದಿದೆ. ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿ, ಅಳ್ಳಾವರ, ಅಣ್ಣಿಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾವಿನ ತೋಟಗಳಿವೆ.
ಬದಾಮಿ (ಅಲಾತೀನ್ಸ್), ದಶೇರಿ. ತೋತಾಪುರಿ, ಮಲ್ಲಿಕಾ ತಳಿಯ ಮಾವು ಬೆಳೆಯಲಾಗಿದೆ.’ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಾವಿನ ಹಣ್ಣುಗಳ ಗಾತ್ರ ಕಡಿಮೆಯಾಗಿದೆ. ಮಳೆಯ ಕೊರತೆ, ನೀರಿನ ಅಭಾವದಿಂದ ಮಾವಿನ ಗಿಡಗಳಿಗೆ ಪ್ರಮುಖವಾಗಿ ತೇವಾಂಶದ ಕೊರತೆ ಕಾಡಿದೆ. ಕಲ್ಪಿ, ಸಿಂಧೂರ, ಬದಾಮಿ, ಮಲ್ಲಿಕಾ, ತೋತಾಪುರಿ ತಳಿಯ ಮಾವಿನ ಹಣ್ಣುಗಳನ್ನು ತರಿಸಲಾಗುತ್ಮಾರಾಟವಾಗುತ್ತಿವೆ. ಮಾವಿನ ಹಣ್ಣು ಕೆಜಿಗೆ 400 ರಿಂದ 450 ರವರೆಗೆ ಮಾರಾಟ ಮಾಡಲಾಗುತ್ತಿದೆ.
ಮಾವಿನ ಸೀಜನ್ ಮುಗಿಯಲು ಬಂದರು ಕೂಡಾಬೆಲೆ ಹೆಚ್ಚಿದೆ. ಆದ್ದರಿಂದ ವ್ಯಾಪಾರಸ್ಥರು ಸಹ ಜನರ ಚೌಕಾಸಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ಸರಾಸರಿ 30ರಿಂದ 40 ಡಜನ್ ಹಣ್ಣುಗಳು ಮಾರಾಟವಾಗುತ್ತಿವೆ. ಇನ್ನು ಮಾವಿನ ಹಣ್ಣು ದುಬಾರಿ ಆಗಿದ್ದು ಕೊಂಡು ಕೊಳ್ಳಲು ಆಗತಾ ಇಲ್ಲ. ಆದ್ದರಿಂದ ಸಹಜವಾಗಿಯೇ ಮಾವು ಪ್ರಿಯರಿಗೆ ಮಾವಿನ ಹಣ್ಣು ಕವಿಯಾಗಿವೆ.