ಬೆಂಗಳೂರು:– ಸಿಲಿಕಾನ್ ಸಿಟಿಯಲ್ಲಿ ಇಂದು ಕೂಲ್, ಕೂಲ್ ವೆದರ್ ಇದ್ದು, ನಗರ ವಾಸಿಗಳಿಗೆ ಬೆಳಗ್ಗೆಯೇ ಮಳೆ ಸಿಂಚನ ಇರಲಿದೆ ಎನ್ನಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಸಿಕ್ಕಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಇಂದು ಮೋಡ ಕವಿದ ವಾತಾವರಣವಿದೆ.
ರಾಜ್ಯದ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ..?*
ಕಲಬುರ್ಗಿ : 48.0
ಗದಗ : 21.6
ಚಿತ್ರದುರ್ಗ: 11.5
ಮಂಗಳೂರು ಎಪಿ : 4.2
ಬೆ.ನಗರ: 4.7
ಬೆ.ಹೆಚ್ಎಎಲ್ : 4.5
ಗುಲ್ಬುರ್ಗಾ: 7.0
ಕವಡಿಮಿಟ್ಟಿ (ಯಾದಗಿರಿ) : 0.5
ಬಾಗಲಕೋಟ : 29.5
ಗಂಗಾವತಿ (ಕೊಪ್ಪಳ) :2.5
ಕೊಪ್ಪಳ: ೮.೦
ಹನುಮನಮಟ್ಟಿ (ಹಾವೇರಿ):28.0
ದಾವಣಗೆರೆ :3.0
ಹಿರಿಯೂರು (ಚಿತ್ರದುರ್ಗ): 12.5
ಆಗುಂಬೆ (ಶಿವಮೊಗ್ಗ) :85.5
ಮೂಡಿಗೆರೆ (ಚಿಕ್ಕಮಗಳೂರು) :4.5
ಚಿಕ್ಕಬಳ್ಳಾಪುರ: 0.5
ಬೆಂಗಳೂರು ಅರ್ಬನ್: 5.0
ಮಾಧವರ (ಬೆ. ನಗರ):9.5
ಸೋಂಪುರ (ಬೆಂಗಳೂರು ನಗರ) :16.5
ಬೆ.ನಗರ – ಎಲೆಕ್ಟ್ರಾನಿಕ್ ಸಿಟಿ : 2.0
ಚಂದೂರಾಯನಘಳ್ಳಿ (ರಾಮನಗರ): 9.5
ಗೋಣಿಕೊಪ್ಪ (ಕೊಡಗು) : 7.0
ಹರದನಹಳ್ಳಿ (ಚಾಮರಾಜನಗರ) :11.5
ನಗರದ ಹಲವೆಡೆ ಛಡಿ ಮಳೆ ಆರಂಭವಾಗಿದ್ದು, ನಿನ್ನೆ ರಾತ್ರಿಯಿಂದಲೂ ನಗರದ ಅನೇಕ ಭಾಗಗಳಲ್ಲಿ ಸಾಧಾರಣ ಮಳೆ ಆಗಿದೆ.
ಮೋಡ ಕವಿದ ವಾತಾವರಣ, ಚಳಿಯ ಅನುಭವ ಇದ್ದು, ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಮುಂದಿನ ಒಂದು ವಾರ ಮಳೆಯ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ರಾಜ್ಯವ್ಯಾಪಿ ಉತ್ತಮ ಮುಂಗಾರು ಆರಂಭವಾಗಿದ್ದು, ನಿನ್ನೆ ಕೂಡ ರಾಜ್ಯದ ಹಲವೆಡೆ ವರುಣ ಅಬ್ಬರಿಸಿದ್ದಾನೆ. ಮುಂದಿನ ಒಂದು ವಾರ ರಾಜ್ಯದ ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ, ದಕ್ಷಿಣ ಒಳನಾಡು, ಕರಾವಳಿ ಭಾಗಗಳಿಗೆ ಹವಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.