ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಸಿದ್ಧಮಲ್ಲೇಶ್ವರ ವಿರಕ್ತಮಠದವತಿಯಿಂದ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಲಾ ನಡೆದ ಗ್ರಾಮಾಂತರ ಬಸವ ಜಯಂತಿ ಮತ್ತು ಶರಣರ ಸ್ಮರಣೋತ್ಸವ, ನಾಟಕ, ಪ್ರವಚನ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮೂಹದಲ್ಲಿ ಅದ್ದೂರಿಯಾಗಿ ನಡೆಯಿತು.
ನರೇಂದ್ರ ಮೋದಿಯ ನೂತನ ಸಚಿವ ಸಂಪುಟ ಹೇಗಿರಲಿದೆ!?.. ಮಿತ್ರಪಕ್ಷಗಳ ಬೇಡಿಕೆ ಏನು!?
ವಾ.ಓ: ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ
ಗುರುವಾರ ಬೆಳಗ್ಗೆ 5ಕ್ಕೆ ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ, ಬೆಳಗ್ಗೆ 6ಕ್ಕೆ ಮಲ್ಲನಮೂಲೆ ಮಠದ ಚನ್ನಬಸವಸ್ವಾಮೀಜಿ ಷಟ್ ಸ್ಥಲ ಧ್ವಜಾರೋಹಣ, ಬೆಳಗ್ಗೆ 7 ಗಂಟೆಗೆ ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣಸ್ವಾಮೀಜಿ ಇಷ್ಟ ಲಿಂಗಪೂಜೆ ನೆರವೇರಿಸಿದರು.ನಂತರ ಬೆಳಗ್ಗೆ 10 ಗಂಟೆಗೆ ದೇವನೂರು ಮಠದ ಮಹಾಂತಸ್ವಾಮೀಜಿ ಹಾಗೂ ಹರಗುರು ಚರಮೂರ್ತಿಗಳು ಬೆಳ್ಳಿ ರಥದಲ್ಲಿದ್ದ ಬಸವನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಗ್ರಾಮಾಂತರ ಬಸವ ಜಯಂತಿ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ, ವಿವಿಧ ಜಾನಪದ ಕಲಾತಂಡಗಳೊಂದಿಗೆ ಮಠದ ಆವರಣದಿಂದ ಮೆರವಣಿಗೆ ಹೊರಟಿತು.
ನಗರದ ಬಿ. ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿ, ಪಚ್ಚಪ್ಪ ವೃತ್ತ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಮಾರ್ಗವಾಗಿ ಮತ್ತೆ ಮಠದ ಅವರಣಕ್ಕೆ ಬಂದು ತಲುಪಿತು, ನಾದಸ್ವರ ತಂಡ, ನಂದಿಧ್ವಜ ವೀರಭದ್ರ ಕುಣಿತ, ಡೊಳ್ಳು ಕುಣಿತ ಜೋಡಿ ಎತ್ತುಗಳ ಮೆರವಣಿಗೆ ವಿವಿಧ ಗ್ರಾಮಗಳಿಂದ ಅಲಂಕೃತಗೊಂಡ ಬಸವಣ್ಣನ ಭಾವಚಿತ್ರಗಳು ಮೆರವಣಿಗೆಯಲ್ಲಿ ಮೆರಗು ತಂದವು.