ನವದೆಹಲಿ:- ನರೇಂದ್ರ ಮೋದಿ ಅವರು ಮಿತ್ರ ಪಕ್ಷಗಳ ನಂಬಿಕೆಯ ಮೇಲೆ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿರುವ ಬೆನ್ನಲ್ಲೇ ಅವರ ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಚಾಲನೆ ಸಿಕ್ಕಿದೆ
ಟ್ರಕ್ಕಿಂಗ್ ದುರಂತ: ಡೆಹ್ರಾಡೂನ್ ನಿಂದ ತವರಿಗೆ ಬಂದಿಳಿದ 13 ಜನ ಕನ್ನಡಿಗರು!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯದೆ ಅನೇಕ ಕಡೆಗಳಲ್ಲಿ ಹೀನಾಯ ಸೋಲನುಭವಿಸಿತ್ತು. ಅದರೆ ಎನ್ಡಿಎ ಒಕ್ಕೂಟ ಸರ್ಕಾರ ರಚನೆಗೆ ಬೇಕಾಗುವಷ್ಟು ಸರಳ ಬಹುಮತ ಪಡೆದು ಬಿಜೆಪಿ ನೆಮ್ಮದಿ ತರಿಸಿದೆ. ಸದ್ಯ ಎನ್ಡಿಎ ಒಕ್ಕೂಟದ ಸಹಭಾಗಿತ್ವದಲ್ಲಿ ಬಿಜೆಪಿಯು ಬಹುಮತದ ಸರ್ಕಾರವನ್ನು ರಚಿಸಲು ಮುಂದಾಗಿದ್ದು, ಹೀಗಾಗಿ ಈ ನೂತನ ಸರ್ಕಾರದಲ್ಲಿ ಟಿಡಿಪಿಯ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಪಾತ್ರದ ಬಗ್ಗೆ ವಿವಿಧ ಬಗೆಯ ಚರ್ಚೆಗಳನ್ನು ಮಾಡಲಾಗುತ್ತಿದೆ.
ಜೂನ್ 9 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕ ನಿಗದಿಯಾಗಿದ್ದು, ರಾಷ್ಟ್ರಪತಿ ಭವನದ ಅಂಗಳದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭರದ ಸಿದ್ಧತೆಗಳೂ ನಡೆಯುತ್ತಿವೆ. ಅನೇಕ ವಿದೇಶಿ ಅತಿಥಿಗಳನ್ನೂ ಆಹ್ವಾನಿಸಲಾಗಿದೆ. ಇದೆಲ್ಲದರ ನಡುವೆ, ಇದಕ್ಕೂ ಮುನ್ನ ಮಿತ್ರಪಕ್ಷಗಳೊಂದಿಗೆ ಸರ್ಕಾರ ರಚನೆಯ ಒಪ್ಪಂದದ ಕುರಿತು ಎಲ್ಲ ವಿಷಯಗಳನ್ನು ಅಂತಿಮಗೊಳಿಸಬೇಕೆಂದು ಬಿಜೆಪಿ ಬಯಸಿದೆ. ಈಗ ಚರ್ಚೆ ನಡೆಯುತ್ತಿರುವ ವಿಷಯಗಳೇನು?
ಜೆಡಿಯು ಬೇಡಿಕೆ
ಸರ್ಕಾರ ರಚನೆಗೆ ಸಹಕರಿಸಿದ ಜೆಡಿಯು ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಷ್ಟೇ ಅಲ್ಲ, ಇದರೊಂದಿಗೆ 3 ಸಂಪುಟ ಹಾಗೂ 4 ರಾಜ್ಯ ಸಚಿವ ಸ್ಥಾನಕ್ಕೂ ಬೇಡಿಕೆ ಇಟ್ಟಿದೆ. ಇದಕ್ಕೆ ಬಿಜೆಪಿ ಎಷ್ಟರ ಮಟ್ಟಿಗೆ ಒಪ್ಪುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಆದರೆ ಬಿಜೆಪಿಗೆ ಬಹುಮತ ಬಾರದೇ ಇರುವುದರಿಂದ ಖಿಚಡಿ ಸರ್ಕಾರದಲ್ಲಿ ಮಿತ್ರಪಕ್ಷಗಳ ಬೇಡಿಕೆಗಳಿಗೆ ಒಪ್ಪಲೇಬೇಕಾದ ಅನಿವಾರ್ಯತೆ ಇದೆ.
ಟಿಡಿಪಿಯ ಬೇಡಿಕೆ
ಇದೇ ವೇಳೆ ಅತ್ತ ಚಂದ್ರಬಾಬು ನಾಯ್ಡು ಅವರ ಟಿಡಿಪಿಯು 5 ಪ್ರಮುಖ ಸಚಿವಾಲಯಗಳ ಜತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಿದೆ.
ಶಿವಸೇನೆ (ಶಿಂಧೆ) ಬಣವು ತನಗೆ 3 ಕ್ಯಾಬಿನೆಟ್ ಮತ್ತು 2 ರಾಜ್ಯ ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದೆ. ಅದೇ ಸಮಯದಲ್ಲಿ, ಚಿರಾಗ್ ಪಾಸ್ವಾನ್ ಅವರ ಪಕ್ಷ LJP 1 ಕ್ಯಾಬಿನೆಟ್ ಮತ್ತು 2 ರಾಜ್ಯ ಸಚಿವ ಸ್ಥಾನಗಳನ್ನು ನೀಡಬೇಕೆಂದು ಒತ್ತಾಯಿಸಿದೆ. ಜಿತನ್ ರಾಮ್ ಮಾಂಝಿ ಅವರಿಗೆ ರಾಜ್ಯ ಸಚಿವರಿಗೆ ಬೇಡಿಕೆ ಇಟ್ಟಿದ್ದು, ಮತ್ತು ಅದೇ ರೀತಿ ಅನುಪ್ರಿಯಾ ಪಟೇಲ್ ಅವರು ರಾಜ್ಯ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.