ಬೆಂಗಳೂರು:-ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ, ಡಿಸಿಎಂ ಭಾಗಿ ಆಗಿದ್ದಾರೆ ಎಂದು HD ಕುಮಾರಸ್ವಾಮಿ ಹೇಳಿದ್ದಾರೆ.
ಮಾನನಷ್ಟ ಜಾಹಿರಾತು ಪ್ರಕರಣ.. ಬೆಂಗಳೂರಿನ ಕೋರ್ಟ್ನಲ್ಲಿ ಇಂದು ರಾಹುಲ್ ಗಾಂಧಿ ವಿಚಾರಣೆ!
ಈಗಾಗಲೇ ಪ್ರಕರಣದಲ್ಲಿ ಸುಮಾರು 80.85 ಕೋಟಿ ರವಾನೆ ಆಗಿರೋದು ಗೊತ್ತಿದೆ. ಪ್ರಕರಣದಲ್ಲಿ ಸರ್ಕಾರದ ಈ ನಿರ್ಧಾರ ಮೊದಲೇ ಆಗಬೇಕಿತ್ತು. ಇದು ಕೇವಲ ಮಂತ್ರಿಯಿಂದ ಆಗಿರೋದಲ್ಲ. ಸಿಎಂ, ಡಿಸಿಎಂ ಇಬ್ಬರು ಸೇರಿಯೇ ಮಾಡಿರೋದು. ರಾಜೀನಾಮೆ ಸಂಬಂಧ ಸಚಿವರಿಗೆ ನಾನು ಹೇಳಿಲ್ಲ, ನಾನು ಹೇಳಿಲ್ಲ ಅಂತಾರೆ. ಆದರೆ ಇದು ಡ್ರಾಮಾ. ಮಂತ್ರಿಗೆ ರಾಜೀನಾಮೆ ನೀಡಿ ಅನ್ನೋ ಧೈರ್ಯ ಇವರಿಗಿಲ್ಲ. ಕಾರಣ ಇದರಲ್ಲಿ ದೊಡ್ಡ ಮಟ್ಟದ ಕೈಗಳಿವೆ ಎಂದು ವಾಗ್ದಾಳಿ ನಡೆಸಿದರು
ಮಾರ್ಚ್ನಲ್ಲಿ ಪ್ರಕರಣ ಆಗಿರೋದನ್ನ ಯಾಕೆ ಮುಚ್ಚಿಟ್ಟಿದ್ದಾರೆ? ಮಾಧ್ಯಮದಲ್ಲಿ ಬರದಿದ್ದರೆ ಮುಚ್ಚಿ ಹಾಕುತ್ತಿದ್ದರು. ಒಳಹೊಕ್ಕು ತನಿಖೆ ಆಗಬೇಕು. ಇವರ ಗಮನಕ್ಕೆ ಬಂದೇ ಅಕ್ರಮ ಆಗಿದೆ. ಹಣ ಒಂದು ಗಂಟೆಯಲ್ಲಿ ಬಿಡುಗಡೆಯಾಗಲು ಸಹಾಯ ಯಾರು ಮಾಡಿದ್ದಾರೆ? ತೆಲಂಗಾಣಕ್ಕೆ ಹೋಗಿರೋ ಹಣ. ಅಲ್ಲಿಗೆ ಹೋಗಿದ್ರೆ ಅದರ ಜವಾಬ್ದಾರಿ ನಿರ್ವಹಿಸಿದವರು ಯಾರು ಎಂದು ಪ್ರಶ್ನಿಸಿದರು? .
ಬೆಂಗಳೂರು ಗ್ರಾಮಾಂತರ ಗೆಲುವು ಜನರ ತೀರ್ಮಾನ. ಯಾವ ತಂತ್ರ ಕುತಂತ್ರ ಮುಖಾಂತರ ಚುನಾವಣೆ ನಡೆಸಿಲ್ಲ. ಜನ ಗೆಲ್ಲಿಸಿದ್ದಾರೆ. ವಾಲ್ಮೀಕಿ ನಿಗಮ ಹಣ ತೆಲಂಗಾಣಕ್ಕೆ ಹೋಗಿದೆ ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ ಎಂದರು.