ಬೆಂಗಳೂರು:- ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡೋದು ಮುಜುಗುರ ಹುಟ್ಟಿಸುತ್ತದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪರಿಷತ್ನ ನೈಋತ್ಯ ಶಿಕ್ಷಕರ ಚುನಾವಣೆ.. ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡಗೆ ಜಯ!
ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ, ಹಲವಾರು ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ, ಈ ಯೋಜನೆಗಳನ್ನು ಪುನರಾರಂಭಿಸುವುದು ತನ್ನ ಮೊದಲ ಪ್ರಾಶಸ್ತ್ಯವಾಗಿದೆ ಎಂದು ಹೇಳಿದರು. ದೇಶವನ್ನು ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯೆಡೆ ಮುನ್ನಡೆಸಬೇಕಿದೆ. ಹೊಸ ಸರ್ಕಾರದ ಯೋಜನೆ ಮತ್ತು ಪ್ರಾಶಸ್ತ್ಯಗಳು ಏನಾಗಿರಲಿವೆಯೋ? ಇಂಥ ಸಂದರ್ಭದಲ್ಲಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡೋದು ಮುಜುಗುರ ಹುಟ್ಟಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು ದಕ್ಷಿಣ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರಗಳಿಂದ ಮೈತ್ರಿ ಅಭ್ಯರ್ಥಿಗಳಾದ ಭೋಜೇಗೌಡ ಮತ್ತು ವಿವೇಕಾನಂದ ಭರ್ಜರಿ ಗೆಲುವು ಸಾಧಿಸಿರುವುದನ್ನು ಕುಮಾರಸ್ವಾಮಿ ಕೊಂಡಾಡಿದರು!