ಬೆಂಗಳೂರು: ಗ್ಯಾರಂಟಿ ಪರ ಜನ ನಿಂತಿಲ್ಲ ಅನಿಸುತ್ತೆ. ಜೆಡಿಎಸ್-ಬಿಜೆಪಿಗೆ ಗ್ಯಾರಂಟಿ ಬೇಕಿರಲಿಲ್ಲ. ಒಟ್ಟಾರೆ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶದ ಕುರಿತು ಮಾತನಾಡಿದ ಅವರು, ಸ್ಟಾರ್ ಚಂದ್ರು ಭೇಟಿಗೆ ನಾವು ಹೋಗಿದ್ದೆವು. ಅವರ ಜೊತೆ ಡಿ.ಕೆ.ಸುರೇಶ್ ಅವರನ್ನೂ ಭೇಟಿಯಾಗಿದ್ದೆವು. ನಂತರ ಡಿಕೆಶಿಯನ್ನೂ ಭೇಟಿ ಮಾಡಿ ಮಾತನಾಡಿದ್ದೇವೆ ಎಂದು ತಿಳಿಸಿದರು.
ಮಂಡ್ಯ ಸೋಲು ನಾವು ನಿರೀಕ್ಷಿಸಿರಲಿಲ್ಲ. ಬಹಳ ದೊಡ್ಡ ಪ್ರಮಾಣದಲ್ಲಿ ಪೋಲಾಗಿದೆ. ಜನರ ತೀರ್ಪಿಗೆ ನಾವು ತಲೆ ಬಾಗಬೇಕಿದೆ. ಯಾಕೆ ಸೋಲಿಸಿದ್ರು ಎಂದು ವಿಮರ್ಶಿಸಬೇಕಿದೆ. ಜನರ ತೀರ್ಪನ್ನ ನಾವು ಸ್ವಾಗತ ಮಾಡ್ತೇವೆ. ಅವರ ಮೈತ್ರಿಗೆ ಮತ ಹಾಕಿದರೋ, ಸಮುದಾಯ ನೋಡಿ ಜನ ವೋಟ್ ಹಾಕಿದರೋ, ಯಾವ್ಯಾವ ಕಾರಣಕ್ಕೆ ವೋಟು ಹಾಕಿದ್ರು ಗೊತ್ತಿಲ್ಲ ಎಂದರು.
ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? ನಿರ್ವಹಣೆ ಮತ್ತು ಆರೈಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.!
ಗ್ಯಾರೆಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ. ಜೆಡಿಎಸ್, ಬಿಜೆಪಿಗೆ ಗ್ಯಾರಂಟಿ ಬೇಕಿರಲಿಲ್ಲ. ಟೋಟಲಿ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ. ಸೋಲು ಗೆಲುವಿನ ಮೇಲೆ ಡಿಸೈಡ್ ಮಾಡಲಾಗಲ್ಲ. ನಮಗೆ ಜನ ಅಸೆಂಬ್ಲಿಯಲ್ಲಿ ಮ್ಯಾಂಡೇಟ್ ಕೊಟ್ಟಿದ್ದಾರೆ. ನಾವು ಒಂದರಿಂದ ಒಂಬತ್ತಕ್ಕೆ ಬಂದಿದ್ದೇವೆ. ನಮಗೆ ಹಳೆ ಮೈಸೂರು ಭಾಗದಲ್ಲಿ ಹಿನ್ನಡೆಯಾಗಿದೆ ಎಂದು ಹೇಳಿದರು.