ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಯಷ್ಟು ಸ್ಥಾನ ಗಳಿಸದೇ ಲೆಕ್ಕ ತಪ್ಪಿದ್ದೇವೆ ಎಂದು ಡಾ.ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ಡಾ.ಜಿ.ಪರಮೇಶ್ವರ್, ಬಿಜೆಪಿಗೂ ಬಹುಮತ ಬಂದಿಲ್ಲ. ಮೋದಿಯವರ ಪರವೂ ಜನಮನ್ನಣೆ ಸಿಕ್ಕಿಲ್ಲ. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ. ಕನಿಷ್ಟ 20 ಸ್ಥಾನ ಬರುವ ನಿರೀಕ್ಷೆ ಇತ್ತು. ನಮ್ಮ ಲೆಕ್ಕಾಚಾರ ತಪ್ಪಿದೆ, ಆದರೂ ಒಂದರಿಂದ ಒಂಭತ್ತು ಸ್ಥಾನ ಗೆದ್ದಿದ್ದೇವೆ. ಫಲಿತಾಂಶ ಸಮಾಧಾನ ತಂದಿದೆ, ಆದ್ರೆ ಸಂತೋಷ ತಂದಿಲ್ಲ ಅಂದ್ರು.
ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? ನಿರ್ವಹಣೆ ಮತ್ತು ಆರೈಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.!
ಇಡೀ ಎಕ್ಸಿಟ್ ಪೋಲ್ ಒನ್ ಸೈಡ್ ಆಗಿ ಬಿಂಬಿಸಲಾಗಿತ್ತು. ಎಕ್ಸಿಟ್ ಪೋಲ್ ಫಲಿತಾಂಶ ಬಂದ ನಂತರ ಸುಳ್ಳಾಯ್ತು. ಇಂಡಿಯಾ ಒಕ್ಕೂಟ ಅತೀ ಹೆಚ್ಚು ಸೀಟುಗಳನ್ನು ಗೆದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳು ಇನ್ನೂ ಗಟ್ಟಿಯಾಗಿದೆ ಅಂತ ಫಲಿತಾಂಶ ತೋರಿಸಿದೆ. ಇನ್ನು ನಮ್ಮ ವೋಟ್ ಶೇರ್ ಹೆಚ್ಚಾಗಿದೆ. ರಾಜ್ಯದ ಜನ ನಮಗೂ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.
ಗ್ಯಾರಂಟಿಗಳಿಂದ ಜನ ಸಮಾಧಾನ ಆಗಿಲ್ಲ ಅನ್ಸತ್ತೆ. ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ತೇವೆ. ಹಳೇ ಮೈಸೂರು ಭಾಗದಲ್ಲಿ ನಮ್ಮ ನಿರೀಕ್ಷೆ ಏರುಪೇರಾಗಿದೆ. ಸ್ವಲ್ಪ ಪ್ರಯತ್ನ ಮಾಡಿದ್ರೆ ಇನ್ನೂ ನಾಲ್ಕು ಸ್ಥಾನ ಬರಬಹುದಿತ್ತು. ನಮ್ಮ ಲೆಕ್ಕಾಚಾರವೂ ತುಮಕೂರಲ್ಲಿ ಕೈಹಿಡಿಯಲಿಲ್ಲ. ಮುದ್ದಹನುಮೇಗೌಡ ಗೆಲ್ತಾರೆ ಅನ್ಕೊಂಡಿದ್ದೆವು. ಆದ್ರೆ ಗೆಲ್ಲಲಿಲ್ಲ, ಲೆಕ್ಕಾಚಾರ ಏರುಪೇರಾಗಿದೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.