ಬೆಂಗಳೂರು:- ನಾಳೆಯಿಂದ ಎರಡು ದಿನ ರಾಜಧಾನಿ ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು BWSSB ತಿಳಿಸಿದೆ.
ಏನೇ ಮಾಡಿದ್ರೂ ಮಗು ಆಗ್ತಿಲ್ವಾ!?.. ಪುರುಷರೇ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ!
ಕಾವೇರಿ 5ನೇ ಹಂತ ಯೋಜನೆ ಅನುಷ್ಠಾನ ಸಂಬಂಧ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜೂನ್ 6, ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಕಾವೇರಿ 1,2,3 ಹಂತಗಳ ಘಟಕಗಳು ಕಾಮಗಾರಿ ನಿಮಿತ್ತ ಬಂದ್ ಆಗಲಿವೆ.
ಕಾವೇರಿ 4 ನೇ ಹಂತ 1 ನೇ ಮತ್ತು ಎರಡನೇ ಘಟ್ಟಗಳ ಬೆಳಗ್ಗೆ 10 ರಿಂದ ಮಧ್ಯಾಹ್ನ2 ವರೆಗೆ ಬಂದ್ ಆಗಲಿದ್ದು, ಎರಡು ದಿನ ಬೆಂಗಳೂರು ನಗರದಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ. ಜೂನ್ 6 ಹಾಗೂ 7 ರಂದು ನೀರು ಶೇಖರಿಸಿ ಇಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ