ಪ್ರತಿಯೊಬ್ಬ ಪುರುಷನು ಮದುವೆಯ ನಂತರ ತಂದೆಯಾಗಬೇಕೆಂದು ಬಯಸುವುದು ಸಹಜ. ಆದರೆ ಅನೇಕ ಬಾರಿ ಅವರು ಕಳಪೆ ಫಲವತ್ತತೆಯಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
World Cup 2024: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ.. ಐರ್ಲೆಂಡ್ ಬ್ಯಾಟಿಂಗ್!
ಬಂಜೆತನಕ್ಕೆ ಕೇವಲ ಹೆಣ್ಣು ಮಾತ್ರ ಕಾರಣವಾಗಲ್ಲ, ಕೆಲವೊಮ್ಮೆ ಗಂಡಿನ ಪಾತ್ರವೂ ಇರುತ್ತದೆ. ಪುರುಷರಲ್ಲಿ ಸಂತಾನೋತ್ಪತ್ತಿಯ ಪ್ರಕ್ರಿಯೆಯು ಸರಿಯಾಗಿ ಇರಬೇಕಾಗಿದ್ದರೆ, ಆಗ ಅವರಲ್ಲಿ ವೀರ್ಯದ ಉತ್ಪತ್ತಿ, ಸಂಖ್ಯೆ, ಗಣತಿ, ಗುಣಮಟ್ಟ ಇತ್ಯಾದಿಗಳು ಸರಿಯಾಗಿ ಇರಬೇಕು. ಪುರುಷರು ಮಗುವನ್ನು ಹೊತ್ತು, ಹೆರುವುದಿಲ್ಲವಾದರೂ, ಪುರುಷನ ಆರೋಗ್ಯ, ವಿಶೇಷವಾಗಿ ಅವರ ವೀರ್ಯದ ಸ್ಥಿತಿ ಸಂತಾನೋತ್ಪತ್ತಿಗೆ ಪ್ರಮುಖವಾಗಿ ಕಾರಣವಾಗುತ್ತದೆ.
ಕಡಿಮೆ ವೀರ್ಯ ಎಣಿಕೆಯು ಪುರುಷರ ವೀರ್ಯದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ವೀರ್ಯವನ್ನು ಸೂಚಿಸುತ್ತದೆ. ಪ್ರತಿ ಮಿಲಿಲೀಟರ್ ವೀರ್ಯಕ್ಕೆ 15 ಮಿಲಿಯನ್ ನಿಂದ 200 ಮಿಲಿಯನ್ ವೀರ್ಯವನ್ನು ಸಾಮಾನ್ಯ ವೀರ್ಯ ಎಣಿಕೆ ಎಂದು ಪರಿಗಣಿಸಲಾಗುತ್ತದೆ. ಪುರುಷನ ವೀರ್ಯಾಣು ಸಂಖ್ಯೆ 15 ಮಿಲಿಯನ್ಗಿಂತ ಕಡಿಮೆಯಿದ್ದರೆ ಕಡಿಮೆ ವೀರ್ಯಾಣು ಎಂದು ಹೇಳಲಾಗುತ್ತದೆ. ಆದರೆ ಫಲವತ್ತತೆ ಮತ್ತು ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಪುರುಷರು ಈ 3 ಆಹಾರಗಳನ್ನು ಸೇವಿಸಬಹುದು ಎಂದು ಭಾರತದ ಪ್ರಸಿದ್ಧ ಪೌಷ್ಟಿಕತಜ್ಞರು ಹೇಳುತ್ತಾರೆ. ಹಾಗಾದ್ರೆ ಅವು ಯಾವುವು ಎಂದು ನಾವಿಂದು ತಿಳಿಯೋಣ ಬನ್ನಿ.
ಮೀನು: ವೀರ್ಯ ಚಲನಶೀಲತೆಯು ಮೀನು ಸೇವನೆಯೊಂದಿಗೆ ಸಂಬಂಧ ಹೊಂದಿದೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಒಮೆಗಾ-3 ಕೊಬ್ಬಿನಾಮ್ಲಗಳು ಮೀನುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಪುರುಷರ ಆರೋಗ್ಯಕ್ಕೆ ಇದು ಬಹಳ ಮುಖ್ಯ. ಮೀನು ತಿನ್ನುವುದರಿಂದ ಪುರುಷ ಫಲವತ್ತತೆ ಸುಧಾರಿಸುತ್ತದೆ.
ಹಣ್ಣುಗಳು ಮತ್ತು ತರಕಾರಿಗಳು: ಎಣ್ಣೆಯುಕ್ತ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಹೆಚ್ಚಾಗಿ ಸಾಕಷ್ಟು ಭಾರತೀಯರು ಹೊಂದಿದ್ದಾರೆ. ಇದು ಒಟ್ಟಾರೆ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ತಮ್ಮ ಆರೋಗ್ಯವನ್ನು ಸುಧಾರಿಸಲು ಪುರುಷರು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಇದು ವೀರ್ಯದ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಪುರುಷ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ವಾಲ್ನಟ್: ವಾಲ್ನಟ್ ಅನ್ನು ಅತ್ಯುತ್ತಮ ಡ್ರೈ ಫ್ರೂಟ್ಸ್ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಬೊಜ್ಜು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಇದನ್ನು ಸೇವಿಸಬೇಕು ಎನ್ನಲಾಗುತ್ತದೆ. ಆದರೆ ವಾಲ್ನಟ್ಸ್ ಸಹಾಯದಿಂದ ವೀರ್ಯದ ಚೈತನ್ಯವನ್ನು ಹೆಚ್ಚಿಸಬಹುದು ಎಂದು ಕೆಲ ಮಂದಿ ತಿಳಿಸಿದ್ದಾರೆ. ಆದ್ದರಿಂದ ಪುರುಷರು ಇದನ್ನು ತಮ್ಮ ದೈನಂದಿನ ಆಹಾರವಾಗಿ ಸೇವಿಸಬಹುದು.
ವೀರ್ಯ ಸಂಖ್ಯೆ ಹೆಚ್ಚಿಸಿಕೊಳ್ಳಲು ಪುರುಷರು ಮಾಡಬೇಕಾದ ಕೆಲಸಗಳು: ವ್ಯಾಯಾಮ: ನಿಮ್ಮ ವೀರ್ಯ ಸಂಖ್ಯೆಯನ್ನು ಹೆಚ್ಚಿಸುವ ಅತ್ಯುತ್ತಮ ವಿಧಾನವೆಂದರೆ ಅದು ವ್ಯಾಯಾಮ. ನಿಯಮಿತವಾದ ವ್ಯಾಯಾಮದಿಂದ ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟಗಳು ಮತ್ತು ನಿಮ್ಮ ವೀರ್ಯದ ಗುಣಮಟ್ಟ ಎರಡನ್ನೂ ಹೆಚ್ಚಿಸಬಹುದು.- ಸಂಶೋಧನೆಯ ಪ್ರಕಾರ, ವಾರದಲ್ಲಿ ಕನಿಷ್ಠ ಮೂರು ಬಾರಿ ಸುಮಾರು ಒಂದು ಗಂಟೆ ಕಾಲ ವರ್ಕ್ ಔಟ್ ಮಾಡುವ ಪುರುಷರು ಹೆಚ್ಚು ವೀರ್ಯವನ್ನು ಹೊಂದಿರುತ್ತಾರೆ ಎನ್ನಲಾಗಿದೆ
ಕಡಿಮೆ ಒತ್ತಡ: ಪುರುಷರು ಕಡಿಮೆ ಒತ್ತಡ ಮತ್ತು ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಹೆಚ್ಚು ವೀರ್ಯವನ್ನು ಉತ್ಪಾದಿಸಲು ಮತ್ತು ಲೈಂಗಿಕತೆಯನ್ನು ಹೆಚ್ಚು ಆನಂದದಾಯಕವಾಗಿಸಲು ಸಹಾಯವಾಗುತ್ತದೆ. ಯಾವುದೇ ವಿಚಾರದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗದೇ ಧ್ಯಾನದಂತಹ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿಕೊಂಡಲ್ಲಿ ಈ ಸಮಸ್ಯೆ ದೂರವಾಗುತ್ತದೆ. ಹೆಚ್ಚಿನ ಒತ್ತಡದ ಜೀವನ ಪುರುಷರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.