T20 ವಿಶ್ವಕಪ್ ಬಳಿಕ ಕೋಚ್ ಸ್ಥಾನದಿಂದ ರಾಹುಲ್ ದ್ರಾವಿಡ್ ಗುಡ್ ಬಾಯ್ ಹೇಳಲಿದ್ದಾರೆ.
ಈ ಬಗ್ಗೆ ಮಾತನಾಡಿದ ದ್ರಾವಿಡ್, ಈ ವಿಶ್ವಕಪ್ನೊಂದಿಗೆ ನನ್ನ ಕಾರ್ಯಾವಧಿ ಮುಗಿಯಲಿದ್ದು, ಇದಾಗ್ಯೂ ಮತ್ತೊಮ್ಮೆ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದಿಲ್ಲ ಎಂದು ದೃಢಪಡಿಸಿದ್ದಾರೆ.
Lokasabha Election Result: ವಿಜಯಪುರ ಎಸ್ಸಿ ಮೀಸಲು ಕ್ಷೇತ್ರದ ಮತ ಎಣಿಕೆ ಆರಂಭ.. !
ಇದರೊಂದಿಗೆ ಟೀಮ್ ಇಂಡಿಯಾ ಜೊತೆಗಿನ ರಾಹುಲ್ ದ್ರಾವಿಡ್ ಅವರ ನಂಟು ಈ ಬಾರಿಯ ಟಿ20 ವಿಶ್ವಕಪ್ನೊಂದಿಗೆ ಮುಗಿಯಲಿದೆ. ನವೆಂಬರ್ 2021 ರಲ್ಲಿ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಹಲವು ಸರಣಿಗಳಲ್ಲಿ ಜಯ ಸಾಧಿಸಿತ್ತು.
ಇದಾಗ್ಯೂ ಐಸಿಸಿ ಟೂರ್ನಿ ಗೆಲ್ಲಲಾಗಲಿಲ್ಲ. ಇದರ ನಡುವೆ ಭಾರತ ತಂಡವು 2022 ರಲ್ಲಿ ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಿದೆ. ಹಾಗೆಯೇ 2023 ರಲ್ಲಿ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಕಣಕ್ಕಿಳಿದಿದೆ. ಆದರೆ ರಾಹುಲ್ ದ್ರಾವಿಡ್ ಕೋಚಿಂಗ್ನಲ್ಲಿ ಟೀಮ್ ಇಂಡಿಯಾಗೆ ಐಸಿಸಿ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ.
ಈ ಬಾರಿಯ ಟಿ20 ವಿಶ್ವಕಪ್ನೊಂದಿಗೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಕೆರಿಯರ್ ಮುಗಿಯಲಿದೆ. ಹೀಗಾಗಿ ಐಸಿಸಿ ಟ್ರೋಫಿ ಗೆಲ್ಲಲು ಇದುವೇ ಕೊನೆಯ ಅವಕಾಶ. ಅದರಂತೆ ಟಿ20 ವಿಶ್ವಕಪ್ನೊಂದಿಗೆ ಟೀಮ್ ಇಂಡಿಯಾ ಆಟಗಾರರು ರಾಹುಲ್ ದ್ರಾವಿಡ್ಗೆ ಬೀಳ್ಕೊಡಲಿದ್ದಾರಾ ಕಾದು ನೋಡಬೇಕಿದೆ.