ಬೆಂಗಳೂರು:- ಲೋಕಸಭಾ ಕ್ಲೈಮ್ಯಾಕ್ಸ್ ಗೆ ಕ್ಷಣಗಣನೆ ಶುರುವಾಗಿದ್ದು, ಇಂದು ಮತ ಎಣಿಕೆ ನಡೆಯಲಿದೆ.
Lokasabha Election Result: ಲೋಕಸಭಾ ಮತಎಣಿಕೆಗೆ ಮತಗಟ್ಟೆಗಳು ಸಜ್ಜು…ಬೆಳಗ್ಗೆ 8 ಗಂಟೆಯಿಂದ ಲೆಕ್ಕಾಚಾರ ಶುರು!
ಲೋಕಸಭೆ ಸಾರ್ವತ್ರಿಕ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಬಳ್ಳಾರಿ ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ.
ಬಳ್ಳಾರಿ:-.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್ಸ್ಗಳನ್ನು ನಿಯೋಜನೆ ಮಾಡಲಾಗಿದೆ.
ಬೆಳಗಾವಿ:-
ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಬೆಳಗಾವಿಯ ಆರ್ಪಿಡಿ ಕಾಲೇಜಿನಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ. ಲೋಕಸಭಾ ಕ್ಷೇತ್ರದ ಕಣದಲ್ಲಿ ಇರೋ ಒಟ್ಟು 13 ಅಭ್ಯರ್ಥಿಗಳು, ಕ್ಷೇತ್ರದಲ್ಲಿ ಒಟ್ಟು 13,75,283 ಜನರಿಂದ ಮತ ಚಲಾವಣೆ ನಡೆದಿದೆ.
ಶೇಕಡಾ 71.49ರಷ್ಟು ಮತದಾನವಾಗಿದ್ದು, ಪ್ರತಿ ವಿಧಾನ ಸಭೆ ಕ್ಷೇತ್ರಕ್ಕೆ 14+1 ಟೇಬಲ್ ಇರಿಸಲಾಗಿದೆ. 10 ರೂಮ್ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, 16ರಿಂದ 21 ಸುತ್ತಗಳ ಮತ ಎಣಿಕೆ ಆಗಲಿದೆ. ಪೋಸ್ಟಲ್ ಮತ ಎಣಿಕೆಗೆ ಎರಡು ಪ್ರತ್ಯೇಕ ಕೊಠಡಿ ನಿರ್ಮಾಣವಾಗಲಿದ್ದು, 11148 ಅಂಚೆ ಮತಗಳ ಏಣಿಕೆಗಳಿವೆ.
ಬೆಂಗಳೂರು ದಕ್ಷಿಣ:-
ಇಲ್ಲಿನ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕೌಂಟ್ ಡೌನ್ ಆರಂಭವಾಗಿದೆ. ಜಯನಗರದ ಎಸ್ ಎಸ್ ಆರ್ ಎಂ ವಿ ಕಾಲೇಜಿನಲ್ಲಿ ಮತ ಏಣಿಕೆ ನಡೆಯಲಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ್ದು, ಗೋವಿಂದರಾಜ ನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭ ನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿಗಳನ್ನು ಒಳಗೊಂಡಿದೆ.
ಮೈಸೂರು:- ಲೋಕಸಭಾ ಚುನಾವಣೆಯ ಮತಗಳ ಎಣಿಕೆಗೆ ಕ್ಷಣಗಣನೆ ನಡೆದಿದೆ. ಮೈಸೂರಿನಲ್ಲಿ ಸಕಲ ಸಿದ್ದತೆ ಆರಂಭವಾಗಿದೆ. ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತಗಳ ಎಣಿಕೆಗೆ ಸಿದ್ದತೆ ನಡೆಸಲಾಗಿದೆ. ಬೆಳಗ್ಗೆ 7:30ಕ್ಕೆ ಸ್ಟ್ರಾಂಗ್ ರೂಂ ಓಪನ್ ಆಗಲಿದ್ದು, 8 ಗಂಟೆಗೆ ಅಂಚೆ ಮತಗಳ ಎಣಿಕೆಗೆ ಚಾಲನೆ ದೊರೆಯಲಿದೆ. 8:30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಆರಂಭವಾಗಲಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಗೆ 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ.
ಧಾರವಾಡ:-
ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನ ವಿನೋದ್ ಅಸೂಟಿ ಸೇರಿ 17 ಅಭ್ಯರ್ಥಿಗಳು ಅಖಾಡದಲ್ಲಿದ್ದು, ಕ್ಷೇತ್ರದಲ್ಲಿ ಶೇ. 74.37 ರಷ್ಟು ಮತದಾನವಾಗಿದೆ.
ಧಾರವಾಡ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿರೋ ಮತ ಎಣಿಕೆಗೆ 112 ಟೇಬಲ್ ಅಳವಡಿಸಲಾಗಿದೆ.
ಮಂಗಳೂರು:-
ಇಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ತಯಾರಿ ಪೂರ್ಣಗೊಂಡಿದೆ. ಸುರತ್ಕಲ್ ಎನ್.ಐ.ಟಿ.ಕೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ವಿಧಾನಸಭಾವಾರು ಮತ ಎಣಿಕೆ ನಡೆಸಲು ಸಕಲ ಸಿದ್ದತೆ ನಡೆಸಲಾಗಿದ್ದು, 14,09,653 ಇವಿಎಂ ಮತಗಳು ಹಾಗೂ 8537 ಪೋಸ್ಟಲ್ ಮತಗಳ ಎಣಿಕೆ ನಡೆಯಲಿದೆ. ಒಟ್ಟು 8 ಕೊಠಡಿಗಳಲ್ಲಿ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಒಟ್ಟು 137 ಸುತ್ತುಗಳಲ್ಲಿ ನಡೆಯಲಿರೋ 8 ಕ್ಷೇತ್ರಗಳ ಮತ ಎಣಿಕೆ
ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 18 ರಿಂದ 19 ಸುತ್ತು ಮತ ಎಣಿಕೆ
ಇವಿಎಂ ಮತ ಎಣಿಕೆಗೆ 8 ಕೊಠಡಿಗಳಲ್ಲಿ 112 ಟೇಬಲ್ ಗಳ ವ್ಯವಸ್ಥೆ
8537 ಅಂಚೆ ಮತಗಳ ಎಣಿಕೆಗೆ ಒಂದು ಕೊಠಡಿಯಲ್ಲಿ 20 ಮೇಜುಗಳ ವ್ಯವಸ್ಥೆ
ಮತ ಎಣಿಕೆಯ ದಿನ ಬೆಳಗ್ಗೆ 7 ಗಂಟೆ ಸುಮಾರಿಗೆ ಪ್ರತಿ ಪಕ್ಷದ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂನ ಬೀಗ ತೆರೆಯಲಾಗುತ್ತದೆ. ಈ ವೇಳೆ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯೋಗದ ವಿಶೇಷ ವೀಕ್ಷಕರು ಕೂಡ ಇದ್ದಾರೆ ಸೂಕ್ತ ಬಂದೋಬಸ್ತ್ ನಡೆಯಲಿದೆ.