ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ 60 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ ಏಕಪಕ್ಷೀಯ ಗೆಲುವು ದಾಖಲಿಸಿತ್ತು. ಅದಾಗ್ಯೂ ಈ ಪಂದ್ಯದ ಸಮಯದಲ್ಲಿ ಕ್ಲಿಕ್ಕಿಸಿರುವುದು ಎನ್ನಲಾಗಿರುವ ರೋಹಿತ್ ಶರ್ಮಾ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರೊಂದಿಗೆ ನಾಯಕ ರೋಹಿತ್ ಅವರ ಫಿಟ್ನೇಸ್ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.
ಮದುವೆ ಆಗದ ಹುಡುಗರೇ ನಿಮಗೊಂದು ಬಿಗ್ ಆಫರ್.. ಇವರನ್ನು ಮದ್ವೆ ಆದ್ರೆ ಸಿಗುತ್ತೆ 2 ಕೋಟಿ ಬೆಲೆಯ ಬಂಗಲೆ!
ವಾಸ್ತವವಾಗಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಿಲ್ಡಿಂಗ್ ಮಾಡುತ್ತಿದ್ದ ವೇಳೆ ತೆಗೆದಿರುವುದು ಎನ್ನಲಾಗಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಫೋಟೋದಲ್ಲಿ ರೋಹಿತ್ ಅವರ ಹೊಟ್ಟೆ ಮುಂದಕ್ಕೆ ಚಾಚಿಕೊಂಡಿರುವಂತೆ ಕಾಣುತ್ತಿದೆ. ಈ ಫೋಟೋವನ್ನು ಹಂಚಿಕೊಂಡಿರುವ ನೆಟ್ಟಿಗನೊಬ್ಬ, ಹಿಟ್ಮ್ಯಾನ್ನ ಫಿಟ್ನೆಸ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾನೆ. ಇದೀಗ ಈ ಫೋಟೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ತರಹೆವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಫೋಟೋ ವೈರಲ್ ಆದ ಬಳಿಕ, ಈ ಫೋಟೋ ಅಸಲಿಯೋ, ನಕಲಿಯೋ ಎಂಬುದರ ಬಗ್ಗೆ ಹುಡುಕಾಟ ಶುರುವಾಗಿದೆ. ನಿಜಾಂಶವೆಂದರೆ ಪಾಕಿಸ್ತಾನ ಮೂಲದ ಎಕ್ಸ್ ಬಳಕೆದಾರನೊಬ್ಬ ರೋಹಿತ್ ಅವರ ಫೋಟೋವನ್ನು ಫೋಟೋಶಾಪ್ ಮಾಡಿ, ಆ ನಂತರ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವಾಗಿ ರೋಹಿತ್ ಅಭಿಮಾನಿಗಳು ಬಿಸಿಸಿಐ ಪೋಸ್ಟ್ ಮಾಡಿರುವ ರೋಹಿತ್ ಅವರ ನೈಜ ಫೋಟೋಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಳ್ಳುವ ಮೂಲಕ ರೋಹಿತ್ ಶರ್ಮಾ ಅವರನ್ನು ಅಪಹಾಸ್ಯ ಮಾಡಲು ಉದ್ದೇಶಪೂರ್ವಕವಾಗಿ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ದೂರಿದ್ದಾರೆ.