ಗದಗ: ಬಾಗಲಕೋಟೆಯ ಎಸ್.ಆರ್.ಪಾಟೀಲ್ ಹಾಗೂ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯರನ್ನ ಒಪ್ಪಿಸುತ್ತೇವೆ. ಇದೊಂದು ಮಾಡಿಕೊಡುವಂತೆ ಡಿಕೆ ಶಿವಕುಮಾರ್ಗೆ ಹೇಳಿದ್ದೇನೆ ಎಂದಿರುವ ಸ್ವಾಮೀಜಿ, ನೀವು ಇದೊಂದು ಮಾಡಿ ನೋಡಿ, ಮುಂದೆ ನೀವು ಸಿಎಂ ಆಗುವ ತನಕ ಏನೇನು ಕೆಲಸ ಮಾಡುತ್ತೇವೆ ನೋಡಿ ಎಂದು ದಿಂಗಾಲೇಶ್ವರಶ್ರೀ ಹೇಳಿದ್ದಾರೆ.
ಒಕ್ಕಲಿಗ ಜೊತೆ ಲಿಂಗಾಯತ ಸಮುದಾಯಕ್ಕೂ ಹತ್ತಿರವಾಗುತ್ತಿದ್ದಾರಾ ಡಿಕೆ ಶಿವಕುಮಾರ್? ನೀವು ಇದೊಂದು ಮಾಡಿ ತೋರಿಸಿ, ನಾವು ಏನು ಇದ್ದೀವೆಂದು ತೋರಿಸುತ್ತೇವೆ. ಡಿ.ಕೆ.ಶಿವಕುಮಾರ್ರನ್ನು ಒಪ್ಪಿಸಿದ್ದೇನೆ ಎಂದಿದ್ದಾರೆ. ಡಿಕೆ ಶಿವಕುಮಾರ್ ಬೆಂಬಲ ಇದೆ, ಸಿಎಂರದ್ದು ಸ್ವಲ್ಪ ಕಷ್ಟ ಇದೆ ಎಂದು ಎಸ್ಆರ್ ಪಾಟೀಲ್ ಹೇಳಿದ್ದಾರೆ. ಎಲ್ಲರಿಗೂ ಪತ್ರ ಬರೆದಿದ್ದೇನೆ, ಹೈಕಮಾಂಡ್ ನಾಯಕರಿಗೂ ಕಳಿಸಿದ್ದೇನೆ.
ವಿಧಾನಪರಿಷತ್ ಸದಸ್ಯನಾಗಿ ಮಾಡುತ್ತೇವೆ ಅಂತಾ ಉತ್ತರ ಕೊಟ್ಟಿದ್ದಾರೆ. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳುತ್ತಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಿಕೆ ಶಿವಕುಮಾರ್ ಒಬ್ಬರನ್ನೇ ನಂಬಿ ಕೂತಿದ್ದರು. ಡಿಕೆ ಶಿವಕುಮಾರ್ರನ್ನು ನಂಬಿ ಕೂತಿದ್ದಕ್ಕೆ ಲಕ್ಷ್ಮೀ, ಪುತ್ರ ಮೃಣಾಲ್, ಸೋದರ ಚನ್ನರಾಜ್ ಉದ್ಧಾರ ಆದರು ಎಂದಿದ್ದಾರೆ.ರಾಜಕೀಯದಲ್ಲಿ ಯಾವಾಗಲೂ ಒಬ್ಬರನ್ನೇ ನಂಬಿಕೊಂಡು ಹೋಗಬೇಕು. ಸಿಎಂ ಸಿದ್ದರಾಮಯ್ಯರ ಮನೆಗೆ ಹೋಗಿ ಒಪ್ಪಿಸುತ್ತೇನೆ. ಅವರನ್ನು ಹೇಗೆ ಮನವೊಲಿಸಬೇಕೆಂದು ಗೊತ್ತಿದೆ ಎಂದು ಶ್ರೀಗಳು ಹೇಳಿದ್ದಾರೆ.