ಸರಿಯಾದ ವಿಧಾನವನ್ನು ಅನುಸರಿಸಿದರೆ ಬಾಂಬೆ ಚಟ್ನಿ, ಪೂರಿಗೆ ಪರ್ಫೆಕ್ಟ್ ಕಾಂಬಿನೇಷನ್ ಆಗಿರುತ್ತದೆ. ಆಲೂಗಡ್ಡೆ ಪಲ್ಯಕ್ಕಿಂತ ಈ ಬಾಂಬೆ ಚಟ್ನಿ ಪೂರಿ ಜೊತೆ ತಿನ್ನಲು ಸಖತ್ ಟೇಸ್ಟಿ ಆಗಿರುತ್ತದೆ. ನೀರಾಗಿ ಗೊಜ್ಜಿನ ರೀತಿ ಮಾಡಿದರೆ ಮತ್ತಷ್ಟು ತಿನ್ನಬೇಕು ಅನಿಸುತ್ತದೆ. ಮಕ್ಕಳಿಗೂ ಈ ಬಾಂಬೆ ಚಟ್ನಿ ಇಷ್ಟವಾಗುತ್ತದೆ. ಲಂಚ್ ಬಾಕ್ಸ್ಗೆ ಹಾಕಿ ಕಳುಹಿಸಲು ಒಳ್ಳೆಯ ರೆಸಿಪಿ ಕೂಡ ಹೌದು..
Belly Fat Burning Tips: ನೀವು ಸುಲಭವಾಗಿ ಸಣ್ಣ ಆಗಲು ಊಟ ಆದ್ಮೇಲೆ ಇವುಗಳನ್ನು ತಿನ್ನಿ!
ಹಾಗಾದ್ರೆ ತಡ ಯಾಕೆ ಬಾಂಬೆ ಚಟ್ನಿ ಮಾಡುವ ಸರಿಯಾದ ವಿಧಾನ ತಿಳಿಯೋಣ ಬನ್ನಿ.
ಬಾಂಬೆ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ – 2
ಎಣ್ಣೆ – ಸ್ವಲ್ಪ
ಸಾಸಿವೆ – 1 ಟೀ ಸ್ಪೂನ್
ಕಡಳೇಬೇಳೆ – 1 ಟೀ ಸ್ಪೂನ್
ಉದ್ದಿನಬೇಳೆ – 1 ಟೀ ಸ್ಪೂನ್
ಜೀರಿಗೆ – ಅರ್ಧ ಟೀ ಸ್ಪೂನ್ ,
ಒಣಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಹಸಿಮೆಣಸಿನಕಾಯಿ – 2
ಈರುಳ್ಳಿ – 1
ಅರಿಶಿಣಪುಡಿ – ಅರ್ಧ ಟೀ ಸ್ಪೂನ್
ಶುಂಠಿ – ಕಾಲು ಇಂಚು
ಕಡಳೇಹಿಟ್ಟು – 2 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬಾಂಬೆ ಚಟ್ನಿ ಮಾಡುವ ವಿಧಾನ
ಮೊದಲಿಗೆ ಕುಕ್ಕರ್ನಲ್ಲಿ 2 ಆಲೂಗಡ್ಡೆ 2 ಭಾಗಗಳಾಗಿ ಕಟ್ ಮಾಡಿ, ನೀರು ಹಾಕಿ, 3 ವಿಸಿಲ್ ಬರುವವರೆಗೂ ಕೂಗಿಸಿಕೊಳ್ಳಬೇಕು. ಕುಕ್ಕರ್ ತಣ್ಣಗಾದ ಮೇಲೆ ಆಲೂಗಡ್ಡೆ ಸಿಪ್ಪೆ ತೆಗೆದು ಮ್ಯಾಶ್ ಮಾಡಿಟ್ಟುಕೊಳ್ಳಬೇಕು.
ಸ್ಟೌವ್ ಮೇಲೆ ಚಿಕ್ಕ ಬಾಣಲಿ ಇಟ್ಟು ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ 1 ಟೀ ಸ್ಪೂನ್ ಸಾಸಿವೆ, 1 ಟೀ ಸ್ಪೂನ್ ಕಡಳೇಬೇಳೆ, 1 ಟೀ ಸ್ಪೂನ್ ಉದ್ದಿನಬೇಳೆ ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಅರ್ಧ ಟೀ ಸ್ಪೂನ್ ಜೀರಿಗೆ, 2 ಒಣಮೆಣಸಿನಕಾಯಿ, ಕರಿಬೇವು ಸ್ವಲ್ಪ ಹಾಕಬೇಕು, ಹಾಗೇ ಇದಕ್ಕೆ ಉದ್ದವಾಗಿ ಹಚ್ಚಿರುವ 2 ಹಸಿಮೆಣಸಿನಕಾಯಿ, ಉದ್ದಕ್ಕೆ ಕಟ್ ಮಾಡಿರುವ ಈರುಳ್ಳಿ, ಅರ್ಧ ಟೀ ಸ್ಪೂನ್ ಅರಿಶಿಣಪುಡಿ, ಕಾಲು ಇಂಚು ಸಣ್ಣಗೆ ಹಚ್ಚಿರುವ ಶುಂಠಿಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.
5 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ 1 ಗ್ಲಾಸ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಬೇಕು. ಒಂದು ಕಪ್ನಲ್ಲಿ 2 ಟೀ ಸ್ಪೂನ್ ಕಡಳೇಹಿಟ್ಟು, ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಂಡು, ಈ ಪೇಸ್ಟ್ನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಬೇಕು.
ಇದು ಬೇಯುತ್ತಿರುವಾಗ ಬೇಯಿಸಿ ಮ್ಯಾಶ್ ಮಾಡಿಟ್ಟುಕೊಂಡಿರುವ ಆಲೂಗಡ್ಡೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. 1 ನಿಮಿಷ ಬಳಿಕ ಸ್ಟೌವ್ ಆಫ್ ಮಾಡಿ ಸರ್ವಿಂಗ್ ಬೌಲ್ಗೆ ಹಾಕಿಕೊಂಡು ಬಿಸಿಬಿಸಿ ಪೂರಿ ಜೊತೆ ತಿಂದರೆ ಅದ್ಭುತವಾಗಿರುತ್ತದೆ.. ಹೀಗಾಗಿ ಒಮ್ಮೆ ಟ್ರೈ ಮಾಡಿ. ರುಚಿಕರವಾದ ಖಾದ್ಯ ಸೇವಿಸಿ..