ಆರೋಗ್ಯದ ವಿಚಾರಕ್ಕೆ ಬಂದರೆ ನಮ್ಮ ಆಹಾರ ಕ್ರಮವು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ದೇಹವನ್ನು ಆರೋಗ್ಯವಾಗಿಡಲು ಸರಿಯಾದ ಆಹಾರ ಸೇವನೆ ಅಗತ್ಯ. ಆದರೆ, ನೀವು ಏನು ತಿನ್ನುತ್ತೀರಿ ಮತ್ತು ಯಾವ ಸಮಯದಲ್ಲಿ ತಿನ್ನುತ್ತೀರಿ ಎಂಬುದು ಬಹಳ ಮುಖ್ಯ. ಸಾಮಾನ್ಯವಾಗಿ ಊಟವನ್ನು ರಾತ್ರಿ 8 ಗಂಟೆಗೂ ಮುನ್ನ ಸೇವಿಸಬೇಕು. ಆದರೆ ರಾತ್ರಿ 8 ಗಂಟೆಯ ನಂತರ ಅನೇಕ ಬಾರಿ ಕೆಲವರಿಗೆ ಹಸಿವಾಗುತ್ತದೆ. ಅಂತಹ ವೇಳೆ ಏನು ಮಾಡಬೇಕೆಂದು ನಿಮಗೆ ತಿಳಿದಿಲ್ಲದಿದ್ದರೆ ನೀವು ಇಲ್ಲಿ ಹೇಳಿರುವ ತಿಂಡಿಗಳನ್ನು ತಿನ್ನಬಹುದು. ಇವು ಆರೋಗ್ಯಕ್ಕೆ ಸುರಕ್ಷಿತವಾಗಿರುವುದರೊಂದಿಗೆ ತೂಕ ಇಳಿಕೆಗೂ ಸಹಾಯಕವಾಗಿದೆ.
ಚಾಮರಾಜನಗರ: ಗುಂಡ್ಲುಪೇಟೆ ಹಲವೆಡೆ ಸಿಡಿಲಬ್ಬರದ ಮಳೆ… ಜನಜೀವನ ಅಸ್ತವ್ಯಸ್ತ..!
ಕಿವಿ ಫ್ರೂಟ್: ಕಿವಿ ಫ್ರೂಟ್ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ.
ಮಖಾನ/ಲೋಟಸ್ ಸೀಡ್: ಮಖಾನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ರಾತ್ರಿ ಹಸಿವಾದಾಗ ಮಖಾನ ತಿನ್ನಲು ಹಿಂಜರಿಯಬೇಡಿ
ಪಾಪ್ಕಾರ್ನ್: ಪಾಪ್ಕಾರ್ನ್ ತಡರಾತ್ರಿ ತಿನ್ನಲು ಉತ್ತಮ ತಿಂಡಿ. ನಿಮಗೆ 8 ಗಂಟೆಗಳ ನಂತರ ಹಸಿವಾದರೆ ಪಾಪ್ ಕಾರ್ನ್ ತಿನ್ನಬಹುದು. ಒಂದು ಕಪ್ ಪಾಪ್ ಕಾರ್ನ್ ನಲ್ಲಿ 30 ಕ್ಯಾಲೋರಿಗಳಿವೆ. ಹಾಗಾಗಿ ಇದರೊಳಗೆ ಉಪ್ಪು ಮತ್ತು ಬೆಣ್ಣೆಯನ್ನು ಬಳಸುವುದನ್ನು ತಪ್ಪಿಸಿ.
ಡಾರ್ಕ್ ಚಾಕೊಲೇಟ್: ರಾತ್ರಿ 8 ಗಂಟೆಯ ನಂತರ ನೀವು ಸಿಹಿಯಾದ ಯಾವುದಾದರೂ ಪದಾರ್ಥವನ್ನು ತಿನ್ನಲು ಬಯಸಿದರೆ ನೀವು ಡಾರ್ಕ್ ಚಾಕೊಲೇಟ್ ಬೇಕಿದ್ದರೆ ತಿನ್ನಬಹುದು, ಇದು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ.
ಬಾಳೆಹಣ್ಣು: ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಧಿಕ ರಕ್ತದೊತ್ತಡದ ಅಪಾಯವನ್ನು ತಡೆಯುತ್ತದೆ. ಹಾಗೂ ರಕ್ತನಾಳಗಳು ಮತ್ತು ಮೆದುಳಿಗೆ ಸಮಾನವಾಗಿ ವಿಶ್ರಾಂತಿ ನೀಡುತ್ತದೆ.
ಬಾದಾಮಿ: ಬಾದಾಮಿ ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಯಾವುದೇ ಚಿಂತೆ ಇಲ್ಲದೇ ನೀವು ಬಾದಾಮಿಯನ್ನಯ ಯಾವಾಗ ಬೇಕಾದರೂ ತಿನ್ನಬಹುದು
ಗ್ರೀಕ್ ಮೊಸರು: ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರು ಗ್ರೀಕ್ ಮೊಸರನ್ನು ನೀವು ರಾತ್ರಿ ಹೊತ್ತು ತಿನ್ನಬಹುದು. ಮೂಳೆಗಳ ಆರೋಗ್ಯ, ತೂಕ ಮತ್ತು ಹೃದಯದ ಆರೋಗ್ಯ ನಿರ್ವಹಣೆಗೆ ಇದು ತುಂಬಾ ಒಳ್ಳೆಯದು.
ಪನೀರ್: ಪನೀರ್ ಪ್ರೋಟೀನ್ ಮತ್ತು ಕೊಬ್ಬಿನಿಂದ ಸಮೃದ್ಧವಾಗಿದೆ. ಇದು ನಿಮ್ಮ ಕ್ಯಾಲೋರಿ ಸೇವನೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಸಹ ಹೆಚ್ಚಿಸುವುದಿಲ್ಲ.