ಬೆಂಗಳೂರು:- ಬಿಬಿಎಂಪಿಯಿಂದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನ ಪಂತರಪಾಳ್ಯದಲ್ಲಿ ಸುಮಾರು ಅಂದಾಜು 50 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿಲಾಗಿದೆ.
Bengaluru: 3 ದಿನ ವಿಚಾರಣೆ, ಬಾಯಿ ಬಿಡ್ತಿಲ್ಲ ಪ್ರಜ್ವಲ್… SIT ಗೆ ಶುರುವಾಯ್ತು ತಲೆಬಿಸಿ..!
2023 ಮಾರ್ಚ್ನಲ್ಲಿ ಅಂದಿನ ಸಿಎಂ ಬಸವರಾಜ್ ಬೊಮ್ಮಯಿ ಮತ್ತು ಅಂದಿನ ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ, ವಸತಿ ಸಚಿವ ವಿ.ಸೋಮಣ್ಣ, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ ಕುಮಾರ್ ಅವರು ಈ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ್ದರು. ಸದ್ಯ ಆಸ್ಪತ್ರೆಯಲ್ಲಿ ಎಸಿ ಫಿಟ್ಟಿಂಗ್ ಕೆಲಸದಿಂದ ಹೊರಭಾಗದಲ್ಲಿ ಆಸ್ಪತ್ರೆಯ ಮೇಲ್ಬಾಗದ ಗೋಡೆಗಳಲ್ಲಿ ಸಂಪೂರ್ಣ ಬಿರುಕು ಬಿಟ್ಟಿದೆ
ಇನ್ನೂ ಆಸ್ಪತ್ರೆಯ ಸುತ್ತಮುತ್ತ ಕಸದ ವಾಸನೆ ಹರಡುತ್ತಿದೆ. ರಾತ್ರಿಯಾದ್ರೆ ಸಾಕು ಅಕ್ರಮದ ಅಡ್ಡೆ ಆಗ್ತಿದೆ ಅನ್ನೋ ಆರೋಪವಿದೆ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತರಾತುರಿಯಲ್ಲಿ ಈ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿತ್ತು. ಸದ್ಯ ಕಾಂಗ್ರೆಸ್ ಸರ್ಕಾರ ಕಾಮಗಾರಿ ತಡೆ ಹಿಡಿದಿರುವ ಆರೋಪದಿಂದ ಇನ್ನೂ ಆರರಿಂದ ಏಳು ತಿಂಗಳು ಕಾಮಗಾರಿ ಪೂರ್ಣವಾಗೊಲ್ಲ ಅಂತ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ