ಬೆಂಗಳೂರು:– ರಾಜ್ಯ ಹವಾಮಾನ ಇಲಾಖೆಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ನಿನ್ನೆ ನಗರದಲ್ಲಿ 69 ಮಿಲಿಮೀಟರ್ ಮಳೆ ಪ್ರಮಾಣ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನೈಋತ್ಯ ಮುಂಗಾರು ಪರಿಣಾಮ ಬೆಂಗಳೂರಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಹೆಚ್ಎಎಲ್ ಏರ್ಪೋರ್ಟ್ 9.2 ಮಿಲಿಮೀಟರ್, ಎಲೆಕ್ಟ್ರಾನಿಕ್ ಸಿಟಿ 29 ಮಿ.ಮೀ., ಮಾದಾವರ 4.5 ಮಿ.ಮೀ ಸೋಂಪುರ(ಬೆಂಗಳೂರು ನಗರ) 5.5 ಮಿ.ಮೀ. ಮಳೆ ದಾಖಲಾಗಿದೆ ಎಂದು ಬೆಂಗಳೂರಿನ ಮಳೆ ಕುರಿತು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಶಿವಾಜಿನಗರ, ಜಯನಗರ, ಹೆಬ್ಬಾಳ, ಮಾಗಡಿ ರಸ್ತೆ, ಕೋರಮಂಗಲ, ಕೆ.ಆರ್.ಪುರಂ, ವಿಧಾನಸೌಧ, ಟೌನ್ಹಾಲ್, ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್, ಶಿವಾಜಿನಗರ, ಜಯನಗರ, ಸದಾಶಿವನಗರ, ಹೆಬ್ಬಾಳ, ಯಲಹಂಕ, ವಿಜಯನಗರ, ಮೈಸೂರು ರಸ್ತೆ, ಕೆಂಗೇರಿ, ಮಾಗಡಿ ರಸ್ತೆ, ಮಡಿವಾಳ, ಕೋರಮಂಗಲ, ಹೊಸೂರು ರಸ್ತೆ, ಕೆ.ಆರ್.ಪುರಂ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಾ ಬಿರುಗಾಳಿ ಸಹಿತ ವರ್ಷಧಾರೆ ಆಗಿದೆ.
ಸಂಜೆಯಿಂದ ಶುರುವಾದ ಮಳೆಗೆ ಬೆಂಗಳೂರು ನಡುಗಿದೆ. ಯಾವ ರಸ್ತೆಗೆ ಕಾಲಿಟ್ಟರೂ ನೀರು ಪ್ರವಾಹದಂತೆ ಹರೀತಿತ್ತು. ಮಾರ್ಕೆಟ್, ಮೆಜೆಸ್ಟಿಕ್, ಕೆಪಿ ಅಗ್ರಹಾರ, ಶಾಂತಿನಗರ, ಜಯನಗರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳಲ್ಲಿ 2-3 ಅಡಿಯಷ್ಟು ನೀರು ನಿಂತಿತ್ತು. ಇಡೀ ರಸ್ತೆಗಳೇ ಕೆರೆಗಳಾಗಿದ್ದವು. ಅಂಗಡಿ, ಮನೆಗಳಿಗೂ ಮೋರಿ ನೀರು ನುಗ್ಗಿದೆ.
ವರುಣಾರ್ಭಟಕ್ಕೆ ನಗರದ ಹಲವೆಡೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ವರುಣನ ಅಬ್ಬರಕ್ಕೆ ನೂರಕ್ಕೂ ಹೆಚ್ಚು ಮರಗಳು ಧರಶಾಹಿ ಆಗಿದ್ದು, ಬಿಬಿಎಂಪಿ ಕಂಟ್ರೋಲ್ ರೂಂಗೆ ದೂರುಗಳು ಬಂದಿವೆ. ಇಲ್ಲಿಯವರೆಗೆ ವಿವಿಧೆಡೆ 118 ಮರಗಳು, 128 ಕೊಂಬೆಗಳು ಧರಶಾಹಿಯಾಗಿದ್ದು, ಆ ಪೈಕಿ ಕೇವಲ 48 ಕಡೆ ಮಾತ್ರ ಮರಗಳ ತೆರವು ಕಾರ್ಯ ಮಾಡಲಾಗಿದೆ