ಬೆಂಗಳೂರು:- ಬಿಎಂಟಿಸಿ ಬಸ್ನಲ್ಲಿ ಚಾಲಕ ಮತ್ತು ಪ್ರಯಾಣಿಕ ಕಿತ್ತಾಟ ಮಾಡಿಕೊಂಡಿದ್ದು, ಚಾಲಕನನ್ನು ಫುಟ್ ಬೋರ್ಡ್ಗೆ ಎಳೆದು ಪ್ರಯಾಣಿಕ ತಂದ ಘಟನೆ ಜರುಗಿದೆ.
ಇವುಗಳು ನಿಮ್ಮ ಅಡುಗೆ ಮನೆಯಲ್ಲಿ ಖಾಲಿ ಆಗಿದ್ಯಾ!?.. ಗೊತ್ತಿರಲಿ ಬಡತನದ ಮುನ್ಸೂಚನೆ!
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಗಿದೆ. ವಿಡಿಯೋದಲ್ಲಿ ಪ್ರಯಾಣಿಕ ಕ್ಷಮೆ ಕೇಳುವಂತೆ ಹೇಳುತ್ತಾನೆ. ಬಳಿಕ ಇಬ್ಬರೂ ಕೈ ಕೈ ಮಿಲಾಯಿಸುತ್ತಾರೆ. ಈ ವೇಳೆ ನಿರ್ವಾಹಕ ತಡೆಯಲು ಯತ್ನಿಸುತ್ತಾನೆ. ಆದರೆ ಪ್ರಯಾಣಿಕ ಬಸ್ ಚಾಲಕನನ್ನು ಎಳೆದು ಫುಟ್ಬೋರ್ಡ್ಗೆ ಹಾಕುತ್ತಾನೆ.
ಈ ವಿಡಿಯೋವನ್ನು ಚೇತನ್ ಸೂರ್ಯ ಎಸ್ ಎಂಬುವರು ಜೂ.01 ರಂದು ಎಕ್ಸ್ (ಟ್ವಿಟರ್)ನಲ್ಲಿ ಟ್ವೀಟ್ ಮಾಡಿದ್ದು, ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ವಿಡಿಯೋವನ್ನು ಮೇ 30 ರಂದು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ. ಸಲಿಯತ್ತಾಗಿ ಈ ಘಟನೆ ನಡೆದಿದ್ದು ಯಾವಾಗ ಎಂಬುವುದು ತನಿಖೆ ನಂತರ ತಿಳಿದು ಬರಲಿದೆ.
ಇನ್ನು ಚೇತನ್ ಸೂರ್ಯ ಎಸ್ ಅವರ ಪೋಸ್ಟ್ಗೆ ಬೆಂಗಳೂರಯ ಸಂಚಾರಿ ಪೊಲೀಸರು ಪ್ರತಿಕ್ರಿಯಿಸಿದ್ದು, ಘಟನೆ ನಡೆದ ಸ್ಥಳವನ್ನು ತಿಳಿಸಿ ಎಂದು ಕಾಮೆಂಟ್ ಮಾಡಿದ್ದಾರೆ.