ಈ ಬಾರಿಯ ಟಿ20 ವಿಶ್ವಕಪ್ ಸಾಕಷ್ಟು ಸುದ್ದಿಯಲ್ಲಿದೆ. ಅದರಲ್ಲೂ ಜೂನ್ 9 ರಂದು ನಡೆಯಲ್ಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಆದರೆ ಈ ಪಂದ್ಯವನ್ನು ಮೈದಾನದಲ್ಲಿ ಕುಳಿತು ವೀಕ್ಷಿಸಲು ಅಭಿಮಾನಿಗಳು ನಿರಾಸಕ್ತಿ ತೊರುತ್ತಿದ್ದಾರೆ ಎಂದು ವರದಿಯಾಗಿದೆ.
Punjab Exit Poll: ಪಂಜಾಬ್ನಲ್ಲಿ ಕಾಂಗ್ರೆಸ್ ಮುನ್ನಡೆ.. ಆಪ್ಗೆ ಆಘಾತ!
ವಾಸ್ತವವಾಗಿ ಈ ಲೀಗ್ನ ಮೊದಲ ಪಂದ್ಯವು ಆತಿಥೇಯ ಅಮೆರಿಕ ಮತ್ತು ಕೆನಡಾ ನಡುವೆ ನಡೆಯಲಿದೆ. ಆದರೆ ಈ ಪಂದ್ಯಾವಳಿಯ ಅತ್ಯಂತ ಹೈ ಪ್ರೊಫೈಲ್ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ನಡೆಯಲಿದೆ. ಇದನ್ನು ಲಕ್ಷಾಂತರ ಕಣ್ಣುಗಳು ವೀಕ್ಷಿಸಲು ಕಾತುರವಾಗಿವೆ. ಉಭಯ ತಂಡಗಳ ನಡುವೆ ಪಂದ್ಯ ನಡೆಯುವಾಗಲೆಲ್ಲ ಕ್ರೀಡಾಂಗಣ ಕಿಕ್ಕಿರಿದು ತುಂಬಿರುತ್ತದೆ. ಆದರೆ ಈ ಬಾರಿ ಹಾಗಾಗದಿರಬಹುದು. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ದೊಡ್ಡ ಸುದ್ದಿ ಏನೆಂದರೆ ಈ ಪಂದ್ಯದ ಎಲ್ಲಾ ಟಿಕೆಟ್ಗಳು ಇನ್ನೂ ಮಾರಾಟವಾಗಿಲ್ಲ. ಈ ಪಂದ್ಯದ ಟಿಕೆಟ್ಗಳು ಇನ್ನೂ ಐಸಿಸಿ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ಗಳು ಮಾರಾಟಕ್ಕೆ ಬಂದ ತಕ್ಷಣವೇ ಮಾರಾಟವಾಗುತ್ತವೆ. ಹೀಗಾಗಿ ಉಭಯ ತಂಡಗಳ ನಡುವಿನ ಕಾಳಗ ನಡೆಯುವ ವೇಳೆ ಇಡೀ ಕ್ರೀಡಾಂಗಣ ಹೌಸ್ಫುಲ್ ಆಗಿರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗುವ ಸಾಧ್ಯತೆಗಳಿವೆ. ಇಲ್ಲಿಯವರೆಗೆ ಈ ಪಂದ್ಯದ ಎಲ್ಲಾ ಟಿಕೆಟ್ಗಳು ಮಾರಾಟವಾಗಿಲ್ಲ ಎಂದು ವರದಿಯಾಗಿದೆ. ಇದಕ್ಕೆ ಕಾರಣವೂ ಇದ್ದು ಈ ಪಂದ್ಯದ ಟಿಕೆಟ್ ಬೆಲೆ ಸಾಕಷ್ಟು ದುಬಾರಿಯಾಗಿರುವುದು. ಹೌದು, ಈ ಪಂದ್ಯಕ್ಕಾಗಿ ಐಸಿಸಿ ಮೂರು ಪ್ಯಾಕೇಜ್ಗಳಲ್ಲಿ ಟಿಕೆಟ್ಗಳನ್ನು ಇರಿಸಿದೆ. ಇದರಲ್ಲಿ ಡೈಮಂಡ್ ಕ್ಲಬ್, ಪ್ರೀಮಿಯಂ ಕ್ಲಬ್ ಲೌಂಜ್ ಮತ್ತು ಕಾರ್ನರ್ ಕ್ಲಬ್ ಸೇರಿವೆ.
ಡೈಮಂಡ್ ಕ್ಲಬ್ ಟಿಕೆಟ್ ಖರೀದಿಸುವ ಅಭಿಮಾನಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಸಿಗುತ್ತವೆ. ಆದರೆ ಅಭಿಮಾನಿಗಳು ಇದಕ್ಕಾಗಿ 8.34 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗಿರುವುದು ದೊಡ್ಡ ವಿಷಯ. ಪ್ರೀಮಿಯಂ ಕ್ಲಬ್ ಲೌಂಜ್ ಟಿಕೆಟ್ ಬೆಲೆ 2 ಲಕ್ಷ ರೂಪಾಯಿ ಮತ್ತು ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2.29 ಲಕ್ಷ ರೂಪಾಯಿ ಆಗಿದೆ. ಭಾರತ-ಪಾಕಿಸ್ತಾನ ಪಂದ್ಯದ ದೃಷ್ಟಿಯಿಂದ ಐಸಿಸಿ ಟಿಕೆಟ್ ಬೆಲೆಯನ್ನು ಇಷ್ಟು ದುಬಾರಿ ಇರಿಸಿದೆ. ಆದರೆ ಅದರ ಎಲ್ಲಾ ಟಿಕೆಟ್ಗಳು ಇನ್ನೂ ಮಾರಾಟವಾಗಿಲ್ಲ ಎಂಬುದು ದೊಡ್ಡ ಸುದ್ದಿಯಾಗಿದೆ