ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಪಂಜಾಬ್ ನಲ್ಲಿ ಆಪ್ಗೆ ಆಘಾತ ಎದುರಾಗಿದೆ. ಇನ್ನೂ ಕಾಂಗ್ರೆಸ್ ಇಲ್ಲಿ ಮುನ್ನಡೆ ಸಾಧಿಸಿದೆ. ಆಪ್ ಕೇವಲ 0 ರಿಂದ 2 ಕ್ಷೇತ್ರಗಳಲ್ಲಿ ಗೆಲ್ಲಬಹುದು ಅಂತ ಎಕ್ಸಿಟ್ ಪೋಲ್ ಹೇಳಿದೆ.
ಇಂದು ಭಾರತ ದೇಶದಲ್ಲಿ ಕೊನೆ ಹಂತದ ಚುನವಾಣೆ ಮುಗಿದಿದೆ. ಈ ಬೆನ್ಮಲ್ಲೇ ಇಂದು ಎಕ್ಸಿಟ್ ಪೋಲ್ ಕೂಡ ಹೊರಬಿದಿದ್ದೆ. ಪಂಜಾಬ್ನಲ್ಲಿ ಈ ಬಾರಿ ಆಪ್ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡಿದ್ರೆ. ಆದ್ರೆ ಅದು ಕನಸಾಗಿಯೇ ಉಳಿಯುವಂತೆ ಕಾಣುತ್ತಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಮುನ್ನಡೆಯಾಗಲಿದೆ, ಜೊತೆಗೆ ಬಿಜಿಪಿಗೂ ಲಾಭ ಆಗಿದೆ. ಸದ್ಯ ಪಂಜಾಬ್ನಲ್ಲಿ ಆಪ್ ಸರ್ಕಾರ ನಡೆಯುತ್ತಿದೆ. ಈ ಬಾರಿ ತಮ್ಮದೇ ಸರ್ಕಾರ ಇರೋದ್ರಿಂದ ಇಲ್ಲಿ ಹೆಚ್ಚಿನ ಸೀಟ್ಗಳಲ್ಲಿ ಗೆಲ್ಲುವ ಭರವಸೆ ಆಪ್ ಪಕ್ಷಕ್ಕೆ ಇತ್ತು. ಆದರೆ ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಆಪ್ಗೆ ಆಘಾತ ಎದುರಾಗಿದೆ.