ಬೆಂಗಳೂರು:- ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ.
ಚಿನ್ನದ ಬೆಲೆ ಶತಕ ಬಾರಿಸುತ್ತಿತ್ತು. ಇದೀಗಾ ಬೆಳ್ಳಿಯ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರು ಬೆಲೆ ಕೇಳಿಯೇ ಶಾಕ್ ಆಗುತ್ತಿದ್ದಾರೆ. 80 ಸಾವಿರದ ಆಸು ಪಾಸಿನಲ್ಲಿದ್ದ ಬೆಳ್ಳಿಯ ಬೆಲೆ ಆರು ತಿಂಗಳ ಅಂತರದಲ್ಲಿ ಬರೋಬ್ಬರಿ 1ಲಕ್ಷದ ಗಡಿ ಮುಟ್ಟಿದೆ.
ಈ ವರ್ಷ ಬೆಳ್ಳಿಯ ಬೆಲೆ ಸಾರ್ವಕಾಲಿಕ ದಾಖಲೆ ಬರೆಯುತ್ತಿದ್ದು, ಒಂದು ಕೆಜಿ ಬೆಳ್ಳಿಗೆ ಒಂದು ಲಕ್ಷ ರೂಪಾಯಿ ಆಗಿದೆ. ಕಳೆದ ತಿಂಗಳ ಹಿಂದಷ್ಟೇ kg ಗೆ 83000 ಆಸುಪಾಸಿನಲ್ಲಿ ಇದ್ದ ಬೆಳ್ಳಿ ಬೆಲೆ ಕಳೆದ ಮೂರ್ನಾಲ್ಕು ದಿನಗಳಲ್ಲಿ 6 ರಿಂದ 7 ಸಾವಿರ ರೂಪಾಯಿ ಏರಿಕೆಯಾಗಿದೆ. ಅಂದಹಾಗೇ ಕಳೆದ ಒಂದೇ ತಿಂಗಳಲ್ಲಿ 17 ಸಾವಿರ ರೂಪಾಯಿ ಏರಿಕೆಯಾಗಿದ್ದು, ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ kg ಗೆ 50 ಸಾವಿರ ರೂಪಾಯಿ ಏರಿಕೆಯಾಗಿದೆ. ಸಧ್ಯ ಬೆಲೆ ಕುರಿತಾಗಿ ಮಧ್ಯಾಪ್ರಾಚ್ಯದಲ್ಲಿ ಇತ್ಯಾರ್ಥ ಆಗದೆ ಇರುವುದು ಹಾಗೂ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಳ್ಳಿಯ ಅಲಭ್ಯತೆ ಇರುವುದರಿಂದ ಕೈಗಾರಿಕೆ ವಲಯದಲ್ಲಿ ಬೆಳ್ಳಿಗೆ ಬಾರಿ ಬೇಡಿಕೆ ಇದೆ. ಹೀಗಾಗಿ ಬೆಳ್ಳಿಯ ಬೆಲೆ ಸಾರ್ವಕಾಲಿಕ ದಾಖಲೆ ಕಂಡಿದೆ.
ಇನ್ನು, ಇಷ್ಟು ದಿನಗಳ ಕಾಲ ಚಿನ್ನ ಖರೀದಿ ಮಾಡುವುದಕ್ಕೆ ಸಾಧ್ಯವಾಗದೇ ಇರುವವರು ಬೆಳ್ಳಿ ಖರೀದಿ ಮಾಡಿ ಬೆಳ್ಳಿ ಆ್ಯಂಟಿಕ್ ಒಡವೆಗಳನ್ನ ಹಾಕುತ್ತಿದ್ವಿ. ಆದ್ರೀಗಾ ಬೆಳ್ಳಿಯ ಬೆಲೆ ಏರಿಕೆಯಾಗುತ್ತಿದ್ದು, ಮುಂದೆ ಬೆಳ್ಳಿ ಖರೀದಿ ಮಾಡುವುದು ಕಡಿಮೆ ಮಾಡ್ಬಾಗುತ್ತೆ. ಚಿನ್ನದ ಬೆಲೆನೂ ಜಾಸ್ತಿಯಾಗುತ್ತಿದೆ. ಇನ್ಮೆಲೆ ಆಭರಣಗಳ ಮೇಲಿನ ಪ್ರೀತಿಯನ್ನ ಕಡಿಮೆಮಾಡಬೇಕಾಗಿದೆ ಅಂತ ಗ್ರಾಹಕರು ದುಖಃ ತೋಡಿಕೊಂಡಿದ್ದಾರೆ.