ಹಾಸನ:- ಮಹಿಳೆ ಕಿಡ್ನ್ಯಾಪ್ ಕೇಸ್ ಗೆ ಸಂಬಧಪಟ್ಟಂತೆ ಇಂದು SITಯಿಂದ ಭವಾನಿ ರೇವಣ್ಣ ವಿಚಾರಣೆ ನಡೆಯಲಿದೆ.
LPG ಬಳಕೆದಾರರಿಗೆ ಗುಡ್ ನ್ಯೂಸ್.. ತಿಂಗಳ ಮೊದಲ ದಿನವೇ ಸಿಲಿಂಡರ್ ದರ 72ರೂ ಇಳಿಕೆ!
ಭವಾನಿ ರೇವಣ್ಣ ಅವರನನ್ನು ಯಾವುದೇ ಕ್ಷಣದಲ್ಲಾದ್ರೂ SIT ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಭವಾನಿ ರೇವಣ್ಣಗೆ ಕ್ಯಾನ್ಸರ್ ಇದೆ. ಚಿಕಿತ್ಸೆ ಪಡೆಯಲು ನಿರೀಕ್ಷಣಾ ಜಾಮೀನು ನೀಡಬೇಕೆಂದು ಭವಾನಿ ಪರ ವಕೀಲರು ಕೋರ್ಟ್ನಲ್ಲಿ ವಾದ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ಬೆಳಗ್ಗೆ SIT ವಿಚಾರಣೆಗೆ ಹಾಜರಿರುವಂತೆ ಭವಾನಿ ರೇವಣ್ಣಗೆ ನೋಟಿಸ್ ಜಾರಿ ಮಾಡಿದೆ. ಬೆಳಗ್ಗೆ 10 ಗಂಟೆಯಿಂದ 5 ಗಂಟೆವರೆಗೂ ವಿಚಾರಣೆ ನಡೆಸುತ್ತೇವೆ ಹೀಗಾಗಿ ಮನೆಯಲ್ಲೇ ಇರಿ, ಹಾಸನದ ಚೆನ್ನಾಂಬಿಕ ಸರ್ಕಲ್ ಬಳಿ ಇರುವ ನಿವಾಸದಲ್ಲಿ ನೀವು ಲಭ್ಯ ಇರ್ತೀರಿ ಅಂತ ಹೇಳಿದ್ರಿ ಇಂದು ನಿಮ್ಮ ಮನೆಯಲ್ಲೇ ವಿಚಾರಣೆಗೆ ನಡೆಸುತ್ತೇವೆ ಅಂತ ಭವಾನಿ ರೇವಣ್ಣ ಅವರಿಗೆ SIT ಸೂಚನೆ ನೀಡಿದೆ. ಇಂದು ಭವಾನಿ ರೇವಣ್ಣ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಪ್ರಜ್ವಲ್ ಬಂಧನದ ನಡುವೆ ಕಿಡ್ನ್ಯಾಪ್ ಕೇಸ್ನಲ್ಲಿ ಭವಾನಿ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಭವಾನಿ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿರುವ SIT, ಇಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಇಂದು ಬೆಳಗ್ಗೆ 10 ಗಂಟೆಯಿಂದ 5 ಗಂಟೆವರೆಗೂ ವಿಚಾರಣೆ ನಡೆಸುತ್ತೇವೆ ಹೀಗಾಗಿ ಮನೆಯಲ್ಲೇ ಇರಲು ಭವಾನಿ ರೇವಣ್ಣ ಅವರಿಗೆ SIT ಸೂಚನೆ ನೀಡಿದೆ.
ಇನ್ನೂ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈ ಬೆನ್ನೆಲ್ಲೆ ಅವರಿಗೆ ಬಂಧನದ ಭೀತಿ ಶುರುವಾಗಿದೆ.