ಭಾರತದ ವಿರುದ್ಧ ಪಾಕಿಸ್ತಾನ್ ಗೆಲ್ಲಲ್ಲ ಎಂದು ಪಾಕ್ ಕ್ರಿಕೆಟಿಗ ಭವಿಷ್ಯ ನುಡಿದಿದ್ದಾರೆ.
ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ನಟಿಯನ್ನು ತಳ್ಳಿದ ಬಾಲಯ್ಯ: ಧನ್ಯವಾದ ಹೇಳಿದ ಅಂಜಲಿ
ಟೂರ್ನಿ ಆರಂಭದ ಮೊದಲ ವಾರದಲ್ಲೇ ಭಾರತ ಮತ್ತು ಪಾಕಿಸ್ತಾನ್ (IND vs PAK) ನಡುವಣ ಹೈವೋಲ್ಟ್ ಕದನ ನಡೆಯಲಿರುವುದು ವಿಶೇಷ. ಅಂದರೆ ಮುಂದಿನ ಭಾನುವಾರ ನ್ಯೂಯಾರ್ಕ್ನಲ್ಲಿ ಇಂಡೊ-ಪಾಕ್ ಕಾದಾಟ ಜರುಗಲಿದೆ. ಈ ಮದಗಜಗಳ ಕಾಳಗದಲ್ಲಿ ಗೆಲ್ಲೋರು ಯಾರು ಎಂಬ ಚರ್ಚೆಗಳು ಈಗಾಗಲೇ ಶುರುವಾಗಿದ್ದು, ಈ ನಡುವೆ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ನೀಡಿದ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಮಹತ್ವದ ಪಂದ್ಯದಲ್ಲಿ ಯಾರು ಗೆಲ್ತಾರೆ? ಎಂದು ಪಾಕ್ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮ್ರಾನ್ ಅಕ್ಮಲ್, ಖಂಡಿತವಾಗಿಯೂ ಭಾರತ. ಅದರಲ್ಲಿ ಡೌಟೇ ಬೇಡ. ಪಾಕಿಸ್ತಾನ್ ತಂಡಕ್ಕೆ ಟೀಮ್ ಇಂಡಿಯಾವನ್ನು ಸೋಲಿಸಲಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇದಕ್ಕೆ ಕಾರಣವನ್ನು ನೀಡಿರುವ ಕಮ್ರಾನ್, ಪಾಕಿಸ್ತಾನ್ ಕ್ರಿಕೆಟ್ನ ಮಟ್ಟ ಎಲ್ಲರಿಗೂ ತಿಳಿದಿದೆ. ನಾವು ಐರ್ಲೆಂಡ್ನಂತಹ ಸಣ್ಣ ತಂಡಗಳ ವಿರುದ್ಧ ಸೋಲುತ್ತಿದ್ದೇವೆ. ನ್ಯೂಝಿಲೆಂಡ್, ಸೌತ್ ಆಫ್ರಿಕಾ ಮತ್ತು ಇತರ ಯಾವುದೇ ತಂಡವಾಗಿದ್ದರೆ ಪರವಾಗಿಲ್ಲ ಎನ್ನಬಹುದು. ಆದರೆ ಸಣ್ಣ ಪುಟ್ಟ ತಂಡಗಳ ವಿರುದ್ಧ ಮುಗ್ಗರಿಸುತ್ತಿರುವ ಪಾಕಿಸ್ತಾನ್ ಭಾರತದ ವಿರುದ್ಧದ ಗೆಲ್ಲುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ ಎಂದು ಕಮ್ರಾನ್ ಅಕ್ಮಲ್ ಪ್ರಶ್ನಿಸಿದ್ದಾರೆ.
ಇದೀಗ ಭಾರತೀಯ ಆಟಗಾರರು ಐಪಿಎಲ್ ಮುಗಿಸಿ ಬಂದಿದ್ದಾರೆ. ಐಪಿಎಲ್ನಲ್ಲಿ ಅತ್ಯುತ್ತಮ ಬೌಲರ್ಗಳು ಮತ್ತು ಬ್ಯಾಟರ್ಗಳು 40 ರಿಂದ 50,000 ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಿ ಬಂದಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಂದರೆ ಅಲ್ಲಿ ಆಡುವುದು ಕಠಿಣ ಕ್ರಿಕೆಟ್ ಮತ್ತು ಗುಣಮಟ್ಟದ ಕ್ರಿಕೆಟ್. ಇಂತಹ ಎಲ್ಲಾ ತಯಾರಿಗಳೊಂದಿಗೆ ಬಂದಿರುವ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸುವುದರಲ್ಲಿ ಅನುಮಾನವೇ ಬೇಡ ಎಂದಿದ್ದಾರೆ.